ಭಟ್ಕಳ:ಮಾರುತಿ ಪತ್ತಿನ ಸಂಘದಿಂದ ಇ-ಸ್ಟಾಂಪಿಂಗ ಸೇವೆ ಆರಂಭ

ಭಟ್ಕಳ: ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘ ನಿಯಮಿತ ಶಿರಾಲಿ ಇದರ ಇ-ಸ್ಟಾಂಪಿಂಗ ಸೇವೆಯನ್ನು ಶಿರಾಲಿ ಗ್ರಾಮ ಪಂಚಾಯಅಧ್ಯಕ್ಷ ವೆಂಕಟೇಶ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದಅವರು ಶಿರಾಲಿಯಂತಹ ಚಿಕ್ಕಗ್ರಾಮದಲ್ಲಿ ಇ-ಸ್ಟಾಂಪಿಂಗನಂತಹಅತ್ಯಗತ್ಯವಾದ ಸೇವೆಯನ್ನು ಪ್ರಾರಂಭಿಸಿರುವುದು ಸಂಘದ ಶ್ಲಾಘನಾರ್ಹಕಾಂರ್ುವಾಗಿದೆಎಂದುಅಭಿಪ್ರಾಯಪಟ್ಟರು.
ಸಂಘದಅಧ್ಯಕ್ಷ ಅಶೋಕ ಪೈ ಮಾತನಾಡುತ್ತಾ ಶಿರಾಲಿ ವಲಯದಲ್ಲಿ ಈ ವ್ಯವಸ್ಥೆಇಲ್ಲದಿರುವುದನ್ನು ಮನಗಂಡ ನಮ್ಮ ಆಡಳಿತ ಮಂಡಳಿಯು ಸಂಘದಎಲ್ಲಾ ಹಿತೈಷಿ ಗ್ರಾಹಕ ಬಂಧುಗಳಿಗೆ ಹಾಗೂ ಸಾರ್ವಜನಿಕರಿಗಾಗಿರಾಮ ನವಮಿಯ ಶುಭ ದಿನದಂದು ಈ ಸೇವೆಯನ್ನು ಪ್ರಾರಂಭಿಸಿದ್ದೇವೆ ಎಂದರು. ಇನ್ನು ಮಂದೆ ಶಿರಾಲಿ ಶಾಖೆಯಲ್ಲಿ ಬಾಂಡ ಪೇಪರ್ಸಗಳನ್ನು ಕಛೇರಿಅವಧಿಯಲ್ಲಿಒದಗಿಸುವ ವ್ಯವಸ್ಥೆಯನ್ನುಕಲ್ಪಿಸಲಾಗಿದೆಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದಉಪಾಧ್ಯಕ್ಷರಾದ ಸುರೇಂದ್ರ ಶಾನಭಾಗ, ನಿರ್ದೇಶಕ ಮಂಡಳಿಯ ಸದಸ್ಯರು,ಸಂಘದ ಹಿರಿಯ ಸದಸ್ಯರು, ಮತ್ತು ಹಿತೈಷಿ ಗ್ರಾಹಕ ಬಾಂಧವರು ಉಪಸ್ಥಿತರಿದ್ದು ಶುಭಕೋರಿದರು. ಮುಖ್ಯಕಾರ್ಯ ನಿರ್ವಾಹಕರಾಜೇಂದ್ರ ಶಾನಭಾಗ ಈ ಸೇವೆಯ ಮಾಹಿತಿಯನ್ನು ಒದಗಿಸಿದರು.ಕುಮಟಾ ಶಾಖಾ ವ್ಯವಸ್ಥಾಪಕ ಪ್ರಸನ್ನ ಪ್ರಭುಕಾರ್ಯಕ್ರಮವನ್ನು ನಿರ್ವಹಿಸಿದರು.





