Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಲೋಕಾರ್ಪಣೆಗೆ ಸಿದ್ಧಗೊಂಡಿದೆ ಅಂತರಾಜ್ಯ...

ಲೋಕಾರ್ಪಣೆಗೆ ಸಿದ್ಧಗೊಂಡಿದೆ ಅಂತರಾಜ್ಯ ರಸ್ತೆ

ಹಲವು ದಶಕಗಳ ಬೇಡಿಕೆಗೆ ಕೊನೆಗೂ ಮುಕ್ತಿ

ವಾರ್ತಾಭಾರತಿವಾರ್ತಾಭಾರತಿ16 April 2016 6:07 PM IST
share
ಲೋಕಾರ್ಪಣೆಗೆ ಸಿದ್ಧಗೊಂಡಿದೆ ಅಂತರಾಜ್ಯ ರಸ್ತೆ

ಸುಳ್ಯ: ಹಲವು ದಶಕಗಳ ಬೇಡಿಕೆಯಾದ ಸುಳ್ಯ-ಬಂದಡ್ಕ ಅಂತಾರಾಜ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗಳು ಪೂರ್ತಿಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ.

 ಕೋಲ್ಚಾರು - ಬಂದಡ್ಕ ಅಂತಾರಾಜ್ಯ ರಸ್ತೆಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರವು 50-54 ಯೋಜನೆಯಡಿಯಲ್ಲಿ ಮೂರು ಕೋಟಿ ರೂ ಅನುದಾನ ಬಿಡುಗಡೆ ಮಾಡಿತ್ತು. ಈ ಅನುದಾನದಲ್ಲಿ ಸರ್ವ ಋತು ರಸ್ತೆಯಾಗಿ ಅಭಿವೃದ್ಧಿಯಾಗಿದೆ. ಈ ರಸ್ತೆಯ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಅರಣ್ಯ ಭೂಮಿಯನ್ನು ಹಸ್ತಾಂತರಿಸಿದ ಬಳಿಕ ಕೆಲವೇ ತಿಂಗಳಲ್ಲಿ ರಸ್ತೆ ಅಭಿವೃದ್ಧಿ ಪೂರ್ತಿಗೊಂಡಿದೆ. ಕೇರಳ ಮತ್ತು ಕರ್ನಾಟಕದ ಜನತೆ ಹಲವಾರು ದಶಕಗಳಿಂದ ನಡೆಸಿದ ಭಗಿರಥ ಹೋರಾಟ ಮತ್ತು ಶ್ರಮದ ಫಲವಾಗಿ ಅಂತಾರಾಜ್ಯ ರಸ್ತೆ ಸಂಪರ್ಕ ತೆರೆದುಕೊಂಡಿದೆ. ಈ ಅಂತಾರಾಜ್ಯ ರಸ್ತೆಯಲ್ಲಿ ಆಲೆಟ್ಟಿ ಮೀಸಲು ಅರಣ್ಯದ ಮೂಲಕ ಹಾದು ಹೋಗುವ 1.8 .ಕಿಮಿ.ರಸ್ತೆ ಅಭಿವೃದ್ಧಿಗಾಗಿ ಅರಣ್ಯ ಇಲಾಖೆಯು 1.35 ಹೆಕ್ಟೇರ್ ಅರಣ್ಯ ಭೂಮಿಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿತ್ತು. ಅದರಂತೆ ರಸ್ತೆ ಅಭಿವೃದ್ಧಿಗೆ ರಸ್ತೆ ಹಾದು ಹೋಗುವ ಈ ಪ್ರದೇಶದಲ್ಲಿ ಗುರುತಿಸಲಾದ ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ಅರಣ್ಯ ಇಲಾಖೆಯು ರಸ್ತೆ ಅಭಿವೃದ್ಧಿಗೆ ನೀಡಿದ 1.35 ಹೆಕ್ಟೇರ್ ಸ್ಥಳಕ್ಕೆ ಬದಲಾಗಿ ಕಂದಾಯ ಇಲಾಖೆಯು ಸುಳ್ಯ ತಾಲೂಕಿನ ಅಮರ ಪಡ್ನೂರು ಗ್ರಾಮದಲ್ಲಿ 3.30 ಎಕರೆ ಸರ್ಕಾರಿ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿತ್ತು. ಮತ್ತು ಕಡಿಯುವ ಮರಗಳಿಗೆ ಪರಿಹಾರವಾಗಿ 18,18,450 ರೂಗಳನ್ನು ಲೋಕೋಪಯೋಗಿ ಇಲಾಖೆಯು ಅರಣ್ಯ ಇಲಾಖೆಗೆ ಪಾವತಿಸಿತ್ತು. ಆ ಬಳಿಕ ಮರಗಳನ್ನು ಕಡಿದು ಭೂಮಿಯನ್ನು ಹಸ್ತಾಂತರಿಸಲಾಗಿದೆ. ಇದೀಗ ನಾಲ್ಕು ಮೀಟರ್ ಅಗಲದ ಸುಂದರ ರಸ್ತೆ ಮತ್ತು ಎರಡೂ ಬದಿಯಲ್ಲಿ ಒಂದೂವರೆ ಮೀಟರ್ ಅಗಲದ ಚರಂಡಿಯನ್ನೂ ನಿರ್ಮಿಸಲಾಗಿದೆ. ದಟ್ಟ ಕಾನನದ ಮಧ್ಯೆ ಹಾದು ಹೋಗುವ ರಸ್ತೆಯಲ್ಲಿನ ಪ್ರಯಾಣ ಮುಂದೆ ವಿಶಿಷ್ಟ ಅನುಭವವನ್ನು ನೀಡಲಿದೆ.

ಹಲವು ದಶಕ ಕನಸು:
ಸುಳ್ಯ-ಕೋಲ್ಚಾರ್-ಕಣಕ್ಕೂರು-ಬಂದಡ್ಕ ಅಂತಾರಾಜ್ಯ ರಸ್ತೆ ಅಭಿವೃದ್ಧಿ ಆಗಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿದೆ. ಈ ರಸ್ತೆ ಅಭಿವೃದ್ಧಿಗಾಗಿ ಎರಡೂ ರಾಜ್ಯಗಳ ಜನತೆಯು ಹಲವಾರು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರು. ಸುಳ್ಯದಿಂದ ಕೋಲ್ಚಾರ್‌ವರೆಗೆ 12 ಕಿ.ಮಿ.ರಸ್ತೆ ಹಿಂದೆಯೇ ಅಭಿವೃದ್ಧಿಯಾಗಿತ್ತು. ಕೇರಳದ ಭಾಗದಲ್ಲಿಯೂ ರಸ್ತೆ ಅಭಿವೃದ್ಧಿಯಾಗಿತ್ತು. ಇದರ ಮಧ್ಯೆ ಅರಣ್ಯದ ಮೂಲಕ ಹಾದು ಹೋಗುವ 1.8 ಕಿ.ಮಿ. ರಸ್ತೆ ಅಭಿವೃದ್ಧಿ ಆಗಿರಲಿಲ್ಲ. ಇಲ್ಲಿ ರಸ್ತೆ ಅಭಿವೃದ್ಧಿಗಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ಹಲವು ವರ್ಷಗಳ ಭಗೀರಥ ಪ್ರಯತ್ನವನ್ನೇ ನಡೆಸಬೇಕಾಗಿ ಬಂತು. ಅಲ್ಲದೆ ಹಲವು ವರ್ಷಗಳು ನಡೆದ ಕಾನೂನು ಸಮರಗಳು ಇಲ್ಲಿ ರಸ್ತೆ ಅಭಿವೃದ್ಧಿಯಾಗಲು ವಿಳಂಬವಾಯಿತು. ಎಲ್ಲಾ ಅಡೆತಡೆಗಳು ದೂರವಾಗಿ ರಸ್ತೆ ಅಭಿವೃದ್ಧಿಗೆ ಹಸಿರು ನಿಶಾನೆ ದೊರೆತ ಮೇಲೆ ಅತ್ಯಂತ ವೇಗವಾಗಿ ಅಭಿವೃದ್ಧಿ ಪೂರ್ತಿಯಾಗಿದ್ದು ಸದ್ಯದಲ್ಲಿಯೇ ಸಾರ್ವಜನಿಕ ಸಂಚಾರಕೆ ತೆರೆದುಕೊಳ್ಳಲಿದೆ. ಹಲವು ದಶಕಗಳಿಂದ ರಾಜಕೀಯ ಒತ್ತಡಗಳಿಗೆ ನೆನೆಗುದಿಗೆ ಬಿದ್ದ ಸುಳ್ಯ-ಬಂದಡ್ಕ ರಸ್ತೆ ಅಭಿವೃದ್ಧಿಯಾಗಿರುವುದು ಗಡಿ ಪ್ರದೇಶದ ಜನರಲ್ಲಿ ನಿರೀಕ್ಷೆ ಮತ್ತು ಸಂತಸ ಉಂಟು ಮಾಡಿದೆ. ಸುಮಾರು 3 ಕೋಟಿ ವೆಚ್ಚದಲ್ಲಿ ರಸೆ ಅಭಿವೃದ್ದಿ ಆಗಿದೆ. ಇದರಿಂದ ಸುಳ್ಯ ಮತ್ತು ಕೇರಳ ರಾಜ್ಯ ಇನ್ನಷ್ಟು ಹತ್ತಿರವಾಗಲಿದೆ. ಕೇರಳದ ಬಂದಡ್ಕ ಮತ್ತು ಸುತ್ತಲ ಪ್ರದೇಶದಲ್ಲಿ ಗಡಿನಾಡ ಕನ್ನಡಿಗರೇ ಹೆಚ್ಚಾಗಿದ್ದಾರೆ. ಇವರು ಶಿಕ್ಷಣ, ವಾಣೀಜ್ಯ ಮತ್ತು ಇತರ ಅಗತ್ಯತೆಗಳಿಗೆ ಸುಳ್ಯದೊಂದಿಗೆ ನಿಕಟ ಸಂಪರ್ಕವನ್ನಿರಿಸಿದ್ದಾರೆ. ಶತಮಾನಗಳ ಹಿಂದೆಯೇ ಅಸ್ತಿತ್ವದಲ್ಲಿದ್ದ ಈ ರಸ್ತೆಯು ಪೂರ್ತಿಯಾಗಿ ಅಭಿವೃದ್ಧಿ ಕಾಣದ ಕಾರಣ ಎರಡೂ ರಾಜ್ಯಗಳ ಸಂಪರ್ಕಕ್ಕೆ ತೊಡಕಾಗಿತ್ತು. ಇದೀಗ ರಸ್ತೆ ಅಭಿವೃದ್ಧಿ ಪೂರ್ತಿಯಾಗಿ ಕೇರಳದ ಭಾಗದಲ್ಲಿರುವ ಕನ್ನಡಿಗರಿಗೆ ಸುಳ್ಯದೊಂದಿಗೆ ಸಂಪರ್ಕಕ್ಕೆ ಮತ್ತು ಸುಳ್ಯ ತಾಲೂಕಿನ ಜನರಿಗೆ ಕೇರಳವನ್ನು ಸಂಪರ್ಕಿಸಲು ಅತೀ ಹತ್ತಿರವಾಗಲಿದೆ. ರಸ್ತೆಯಲ್ಲಿ ಮುಂದೆ ಬಸ್ ಸಂಚಾರ ಮತ್ತಿತರ ಸಂಪರ್ಕ ಆರಂಭಗೊಳ್ಳಲಿದ್ದು ಕೇರಳ ಕರ್ನಾಟಕ ಸಂಪರ್ಕ ಸುಲಭವಾಗಲಿದೆ.
- ಸುದರ್ಶನ್ ಪಾತಿಕಲ್ಲು, ಗ್ರಾ.ಪಂ.ಸದಸ್ಯರು ಆಲೆಟ್ಟಿ

ಬಹಳಷ್ಟು ನೆನೆಗುದಿಗೆ ಬಿದ್ದಿರುವ ಅತೀ ಅಗತ್ಯ ಕಾಮಗಾರಿ , ಎರಡು ರಾಜ್ಯಗಳನ್ನು ಸಮೀಪಿಸುವ ಅಂತರಾಜ್ಯ ಸಂಪರ್ಕದ ರಸ್ತೆ ಯ ಕಾಮಗಾರಿ ಬಿಜೆಪಿ ಸರಕಾರ ಇರುವ ವೇಳೆ ಆಗುತ್ತದೆ ಎಂಬ ನೀರಿಕ್ಷೆ ಇತ್ತು. ಆದರೆ ಅದು ಆಗಲಿಲ್ಲ. ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ನಮ್ಮ ಉಸ್ತುವಾರಿ ಸಚಿವರು ಅರಣ್ಯ ಸಚಿವರು ಈ ರಸ್ತೆಯ ಬಗ್ಗೆ ಮುತುವರ್ಜಿ ವಹಿಸಿ ರಸ್ತೆ ಆಗುವಲ್ಲಿ ಸಂಪೂರ್ಣ ಶ್ರಮಿಸಿದ್ದಾರೆ. ಅಲ್ಲದೆ ಪುತ್ತೂರಿನ ಶಕುಂತಲಾ ಶೆಟ್ಟಿಯವರು ಸಹಕರಿಸಿದ್ದರಿಂದ ಈ ರಸ್ತೆ ಕಾಮಗಾರಿ ಪೂರ್ಣಗೊಂಡು ಅಂತರಾಜ್ಯ ಸಂಪರ್ಕದ ಉತ್ತಮ ರಸ್ತೆಯಾಗಿ ಮಾರ್ಪಟ್ಟಿದೆ. ನಮ್ಮ ಅರಣ್ಯ ಸಚಿವ ರಮಾನಾಥ ರೈಯವರ ಸಹಕಾರದಿಂದ ಕಾಮಗಾರಿ ಅತೀ ಶೀಘ್ರದಲ್ಲಿ ಪೂರ್ಣಗೊಂಡಿದೆ.
- ವೆಂಕಪ್ಪ ಗೌಡ, ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸುಳ್ಯ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X