ರಾಜ್ಯದ ಜನತೆ ಯಡಿಯೂರಪ್ಪರ ದುರಾಡಳಿತ ಮರೆತ್ತಿಲ್ಲ: ಇಮ್ತಿಯಾಝ್

ಶಿವಮೊಗ್ಗ, ಎ. 16: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪರವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮ ಕವಾದ ನಂತರ ಕಾಂಗ್ರೆಸ್ ಸರಕಾರ, ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾ ಮಯ್ಯ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡ ಇಮ್ತಿಯಾಝ್ ಖಾನ್ ತಿಳಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ನಡೆಸಿದ ಭ್ರಷ್ಟಾಚಾರ, ಅವ್ಯವಹಾರ, ಅಕ್ರಮ, ಸ್ವಜನ ಪಕ್ಷಪಾತ, ದುರಾಡಳಿತವನ್ನು ಹಾಗೂ ಅವರು ಜೈಲ್‌ಗೆ ಹೋಗಿ ಬಂದಿರುವುದನ್ನು ರಾಜ್ಯದ ಜನತೆ ಇಂದಿಗೂ ಮರೆತಿಲ್ಲ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಯಡಿಯೂರಪ್ಪರವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ತೊಂದರೆಯಿಲ್ಲ. ಹಾಗೆಯೇ ಬಿಜೆಪಿಗೂ ಲಾಭವಿಲ್ಲ. ಕಾಂಗ್ರೆಸ್ ಪಕ್ಷ ತನ್ನದೆ ಆದ ಇತಿಹಾಸ, ಕಾರ್ಯಕರ್ತರ ಪಡೆ, ತತ್ವ-ಸಿದ್ಧಾಂತ, ಅಭಿವೃದ್ಧಿ ಆಧಾರಿತ ರಾಜಕಾರಣ ಮಾಡಿಕೊಂಡು ಬಂದಿದೆ. ಜಾತಿ- ಧರ್ಮಾಧಾರಿತ ರಾಜಕಾರಣ ಮಾಡಿಕೊ
ಂಡು ಬಂದಿಲ್ಲ. ಆದರೆ ಬಿಜೆಪಿ ಪಕ್ಷವು ಅವಕಾಶವಾದಿ, ಕೋಮು ರಾಜಕಾರಣ ಮಾಡಿಕೊಂಡು ಬಂದಿದೆ. ಯ
ಡಿಯೂರಪ್ಪ ಬಿಜೆಪಿಗೆ ಮಾತ್ರ ಅನಿವಾರ್ಯವಾಗಿದ್ದಾರೆಯೇ ಹೊರತು ರಾಜ್ಯದ ಜನರಿಗಲ್ಲ ಎಂಬುವುದನ್ನು ಮೊದಲು ಅರಿತುಕೊಳ್ಳಬೇಕು. ಪಕ್ಷ ಬಿಟ್ಟು ಹೋಗುವ ಬೆದರಿಕೆ ಹಾಕಿ, ಬ್ಲ್ಯಾಕ್‌ಮೇಲ್ ತಂತ್ರದ ಮೂಲಕ ಅಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಗಿಟ್ಟಿಸಿಕೊಂಡಿದ್ದಾರೆ. ಒಂದು ವೇಳೆ ಆ ಪಕ್ಷದ ಕೇಂದ್ರ ನಾಯಕರು ಯಡಿಯೂರಪ್ಪರವರನ್ನು ಒಪ್ಪಿಕೊಂಡಿದ್ದರೇ, ಅವರು ಕೇಂದ್ರ ಸಚಿವರಾಗಿ ಎರಡು ವರ್ಷವಾಗಬೇಕಾಗಿತ್ತು. ಇದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಖಾನ್‌ಲೇವಡಿ ಮಾಡಿದ್ದಾರೆ.







