ಮಂಗಳೂರು: ಬ್ಯಾರಿ ಯುವ ಬರಹಗಾರರು -ಕಲಾವಿದರ ಸಮ್ಮಿಲನ ಕಾರ್ಯಕ್ರಮ

ಮಂಗಳೂರು,ಎ.16: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಇಂದು ನಗರದ ಪುರಭವನದಲ್ಲಿ ಬ್ಯಾರಿ ಯುವ ಬರಹಗಾರರು -ಕಲಾವಿದರ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಪತ್ರಕರ್ತ ಬಿ.ಎಂ.ಬಶೀರ್ ಯಾವುದೆ ಭಾಷೆಯು ಜೀವಂತಿಕೆಯನ್ನು ಉಳಿಸಿಕೊಳ್ಳಲು ಲಿಖಿತ ಸಾಹಿತ್ಯದ ಅಗತ್ಯವಿಲ್ಲ. ಭಾಷೆಗೆ ಮಾತೆ ಜೀವಾಳವಾಗಿದೆ .ಲಿಖಿತ ಸಾಹಿತ್ಯ ಕೂಡ ಭಾಷೆಯ ಉಳಿಯುವಿಕೆಗೆ ಒಂದು ಸವಾಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಹೆಚ್ ಖಾಲಿದ್ ಉಜಿರೆ ವಹಿಸಿದ್ದರು. ಯುವ ಪ್ರತಿಭೆಗಳು ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿ ವಿಷಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ , ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ಯಾರಿ ಕವನ ವಾಚನದಲ್ಲಿ ಕಲಂದರ್ ಬಜ್ಪೆ (ಕ-ಶಿಕ), ಸರ್ಫ್ರಾಝ್ ಮಂಗಳೂರು, ಮುಅದ್ ಗೋಳ್ತಮಜಲು, ಶಂಶಾದ್ ಜಲೀಲ್ ಮುಕ್ರಿ, ನಿಝಾಮ್ ಕೊಳಂಬೆ ಕವನ ವಾಚನ ಮಾಡಿದರು. ಬ್ಯಾರಿ ಚುಟುಕು ಮಂಡನೆಯನ್ನು ಸತ್ತಾರ್ ಗೂಡಿನಬಳಿ, ರಶೀದ್ ನಂದಾವರ ಮಾಡಿದರು. ಇಸ್ಮತ್ ಫಜೀರ್, ಅಬ್ದುಲ್ ರಝಾಕ್ ಅನಂತಾಡಿ, ಅನ್ಸಾರ್ ಇನೋಳಿ ಬ್ಯಾರಿ ಭಾಷೆ ,ಸಾಹಿತ್ಯ, ಸಂಸ್ಕೃತಿ ,ಕಲೆಯ ಬೆಳವಣಿಗೆಗಳ ಬಗ್ಗೆ ಅಂತರಾಳದ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಬ್ಯಾರಿ ಗಾಯನ, ಬ್ಯಾರಿ ಜಾನಪದ ಗೀತೆಗಳು ಮತ್ತು ದಫ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಅಬ್ದುಲ್ ಲತೀಫ್ ಸ್ವಾಗತಿಸಿದರು, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಪ್ರಸ್ತಾವಿಸಿದರು. ಸದಸ್ಯ ಅಬ್ದುಲ್ ಹಮೀದ್ ಪಡುಬಿದ್ರೆ ವಂದಿಸಿದರು, ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.





