Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಸೋರುತಿಹುದು ಮನೆಯ ಮಾಳಿಗಿ....

ಸೋರುತಿಹುದು ಮನೆಯ ಮಾಳಿಗಿ....

ವಾರ್ತಾಭಾರತಿವಾರ್ತಾಭಾರತಿ16 April 2016 11:26 PM IST
share
ಸೋರುತಿಹುದು ಮನೆಯ ಮಾಳಿಗಿ....

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಯ ಮೇಲೆ ಟಪ್ಪೆಂದು ಹನಿಯೊಂದು ಬಿದ್ದಿತ್ತು. ಅದಾಗಲೇ ಬರಗಾಲ ಬರಗಾಲ ಎಂದು ವಿರೋಧ ಪಕ್ಷದವರು ಕೂಗೆಬ್ಬಿಸುತ್ತಿದ್ದಾರೆ. ಇಲ್ಲಿ ನೋಡಿದರೆ ತನ್ನ ಮುಖ್ಯಮಂತ್ರಿ ಕಚೇರಿ ಮಳೆ ನೀರಿನಿಂದ ಸೋರುತ್ತಿದೆ.

ತನ್ನ ಪಿಎಯನ್ನು ತಕ್ಷಣ ಕರೆದರು ‘‘ಅಲ್ರೀ...ಒಂದು ಕಡೆ ಮಳೆಯಿಲ್ಲ ಮಳೆಯಿಲ್ಲ ಎಂದು ಕೂಗೆಬ್ಬಿಸಿದ್ದಾರೆ. ಇಲ್ಲಿ ನೋಡಿದರೆ ನನ್ನ ಕಚೇರಿ ಸೋರುತ್ತಿದೆ...ಹೊರಗೆ ನೋಡಿ ಬನ್ರೀ...ಮಳೆ ಬರ್ತಾ ಇದೆ...’’

ಪಿಎ ತಕ್ಷಣ ಹೊರಗೆ ಓಡಿದರೆ. ನೋಡಿದರೆ ರಣ ಬಿಸಿಲು. ಅಲ್ಲಿ ನೋಡಿದರೆ ಮುಖ್ಯಮಂತ್ರಿಗಳು ‘‘ಕಚೇರಿ ಸೋರ್ತಾ ಇದೆ...’’ ಎಂದು ಕೂಗೆಬ್ಬಿಸಿದ್ದಾರೆ. ಯಾವುದು ಸರಿ? ಯಾವುದು ತಪ್ಪು?’’ ಅರ್ಥವಾಗಲಿಲ್ಲ. ಏನಾದರೂ ಇರಲಿ. ಬೆಂಗಳೂರಿನ ಅದಾವುದೋ ಮೂಲೆಯಲ್ಲಿ ಮಳೆಯಾಗಿದ್ದು, ಅದರ ಹನಿ ಮುಖ್ಯಮಂತ್ರಿಯವರ ಕಚೇರಿಯ ಮೇಲೆ ಬಿದ್ದು, ಅದು ಮಾಡಿನ ಮೂಲಕ ಸೋರಿಕೆಯಾಗಿದ್ದಿರಲೂ ಸಾಕು. ನೇರವಾಗಿ ಪತ್ರಕರ್ತ ಎಂಜಲು ಕಾಸಿಯವರಿಗೆ ಫೋನ್ ಮಾಡಿ ವಿಚಾರಿಸೋಣ ಎಂದು ಪಿಎ ಅವರು ಯೋಚಿಸಿದರು. ‘‘ಕಾಸಿಯವ್ರೇ..ಬೆಂಗಳೂರಿನಲ್ಲಿ ಎಲ್ಲಾದರೂ ಮಳೆಯಾಗಿದೆಯಾ?’’

‘‘ಮಳೆಯಾ? ಹಾಗಂದ್ರೇನು ಸಾರ್?’’ ಕಾಸಿ ಅರ್ಥವಾಗದೇ ಕೇಳಿದ.

‘‘ಮಳೆ ಕಣ್ರೀ...ಮಳೆ...ಪ್ರತಿ ಜೂನ್‌ನಲ್ಲಿ ಕರೆಕ್ಟಾಗಿ ಬರತ್ತಲ್ಲ...ಅದು...’’ ಪಿಎ ವಿವರಿಸಿದ.

‘‘ಪ್ರತಿ ಜೂನ್ ಕರೆಕ್ಟಾಗಿ ಬರೋದು ಒಂದನೇ ತಾರಿಕು ಮಾತ್ರ ಸಾರ್...ಮತ್ತ್ಯಾವುದೂ ಕರೆಕ್ಟಾಗಿ ಬರಲ್ಲ...ಮಳೆ ಅಂದ್ರೆ ಯಾವುದಾದ್ರೂ ಪ್ರಾಣಿಯ ಹೆಸರಾಗಿರಬಹುದಾ ಸಾರ್...’’ ಕಾಸಿ ಸ್ಪಷ್ಟೀಕರಣ ಕೇಳಿದ.

ಛೆ! ಮಳೆ ಎನ್ನುವ ಹೆಸರೇ ಪತ್ರಕರ್ತರಿಗೆ ಮರೆತು ಬಿಟ್ಟಿದೆ ಎಂದ ಮೇಲೆ ಮಳೆಯಾಗುವ ಸಾಧ್ಯತೆಯಿಲ್ಲ ಅನ್ನಿಸಿತು. ಒಂದು ವೇಳೆ ಮಳೆ ಬಂದಿದ್ರೂ ‘‘ಕೊಚ್ಚಿ ಹೋದ ಬೆಂಗಳೂರು’’ ಎಂದು ಅದನ್ನೂ ಸರಕಾರದ ತಲೆಗೆ ಕಟ್ಟುತ್ತಿದ್ದರು. ಆಕಾಶ ನೋಡಿ ಬೆವರಿಳಿಸಿದ ಪಿಎ ಮರಳಿ ಬಂದು ‘‘ಸಾರ್...ಜನರು ಮಳೆ ಅನ್ನೋ ಹೆಸರನ್ನೇ ಮರೆತು ಬಿಟ್ಟಿದ್ದಾರೆ. ಬೇಕಾದಷ್ಟು ಬಿಸಿಲು ಸುರಿಯುತ್ತಿದೆ. ಬಹುಶಃ ಟರೇಸಿನಿಂದ ಬಿಸಿಲೇನಾದ್ರೂ ಸೋರುತ್ತಿರಬಹುದು...ಸಾರ್...’’ ಎಂದು ಸಮಾಧಾನಿಸಿದ.

‘‘ನೋಡ್ರಿ...ನನ್ನನ್ನಿಲ್ಲಿ ಈ ಸೋರಿಕೆ ಕೆಲಸ ಮಾಡಲು ಬಿಡುತ್ತಿಲ್ಲ. ಟಪ್ ಟಪ್ ಎಂದು ತಲೆ ಮೇಲೆ ಸೋರುತ್ತಲೇ ಇದೆ...ಭಾರೀ ಮಳೆಯಾಗದೇ ಇದ್ದರೆ ಈ ರೀತಿ ಸೋರುತ್ತದೆಯೇನ್ರೀ....?’’ ಸಿದ್ದರಾಮಯ್ಯ ಸಿಟ್ಟಿನಿಂದ ಕೇಳಿದರು.

ಅಷ್ಟರಲ್ಲಿ ಪಿಎಗೆ ಸಂತ ಶಿಶುನಾಳ ಶರೀಫರು ನೆನಪಾದರು ‘‘ಸಾರ್...ಸೋರುತಿಹುದು ಮನೆಯ ಮಾಳಿಗಿ...ಎಂದು ಶಿಶುನಾಳ ಶರೀಫರು ಹೇಳುತ್ತಾರೆ....ಅಜ್ಞಾನದಿಂದಲೇನಾದ್ರೂ ಸೋರುತ್ತಿರಬಹುದೋ....’’ ಅನುಮಾನದಿಂದ ಪಿಎ ಕೇಳಿದರು.

‘‘ಒಬ್ಬ ಜಾಫರ್ ಶರೀಫ್‌ನನ್ನೇ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಇನ್ನು ಅದ್ಯಾರ್ರೀ ಸಂತ ಶಿಶುನಾಳ ಶರೀಫ...ಬಹುಶಃ ಜಾಫರ್ ಶರೀಫರ ಇನ್ನೊಬ್ಬ ಮೊಮ್ಮಗನ ಹೆಸರಿರಬೇಕು...ಅಜ್ಞಾನದಿಂದ ಸೋರುವುದಕ್ಕೆ ನನ್ನ ಕಚೇರಿಯ ಮಾಡನ್ನು ದೇವೇಗೌಡರ ತಲೆ ಎಂದು ತಿಳಿದುಕೊಂಡಿದ್ದೀರೇನ್ರೀ....’’ ಸಿದ್ದರಾಮಯ್ಯ ಗದರಿದರು.

ಪಿಎ ಇಕ್ಕಟ್ಟಿನಲ್ಲಿ ಸಿಲುಕಿಕೊಂಡ. ಅಷ್ಟರಲ್ಲಿ ಎದುರಿನಲ್ಲಿರುವ ಟಿವಿಯಲ್ಲೂ ‘‘ಸೋರಿಕೆ..ಸೋರಿಕೆ...ಸಿದ್ದರಾಮಯ್ಯ ಕಚೇರಿಯಲ್ಲಿ ತೀವ್ರ ಸೋರಿಕೆ...’’ ಎಂದು ಬ್ರೇಕಿಂಗ್ ನ್ಯೂಸ್ ಬರತೊಡಗಿತು. ಹೊರಗಡೆಯಿಂದ ‘ಸೋರಿಕೆ’ ಜೋರು ಸದ್ದು ಮಾಡತೊಡಗಿತು. ಅಷ್ಟರಲ್ಲಿ ಮುಖ್ಯಮಂತ್ರಿ ಕಚೇರಿಯ ಒಳಗೆ ಯಾರೋ ಏದುಸಿರು ಬಿಡುತ್ತಾ ಓಡೋಡಿ ಬಂದರು. ನೋಡಿದರೆ ಸಚಿವ ಕಿಮ್ಮನೆ ರತ್ನಾಕರ್! ‘‘ಏನ್ರೀ...ಒದ್ದೆಯಾಗ್ದೀರಿ....ಹೊರಗಡೆ ಜೋರು ಮಳೆ ಇರಬೇಕಲ್ಲ...ಈ ಬಾರಿ ನಿರೀಕ್ಷೆಗೆ ಮುನ್ನವೇ ಮುಂಗಾರು...ಉತ್ತಮ ನಾಟಿಯ ನಿರೀಕ್ಷೆ...’ ಎಂದು ಪತ್ರಕರ್ತರಿಗೆ ಹೇಳಿ ಬಿಡಿ ಕಿಮ್ಮನೆಯವ್ರೇ...’’

ಕಿಮ್ಮನೆ ತಲೆಒರೆಸುತ್ತಾ ಹೇಳಿದರು ‘‘ಸಾರ್ ಇದು ಮಳೆಯ ಸೋರಿಕೆ ಅಲ್ಲ...ರಾಸಾಯನಿಕ ಸೋರಿಕೆ...’’

ಸಿದ್ದರಾಮಯ್ಯ ಬೆಚ್ಚಿ ಬಿದ್ದರು. ‘‘ಅದೇನ್ರೀ...ಯಾವುದಾದ್ರೂ ಅಣು ಸ್ಥಾವರ ಲೀಕೇಜ್ ಆಗಿದೆಯೇನ್ರೀ....ಕಾರ್ಖಾನೆಯಲ್ಲೇನಾದ್ರೂ ಪ್ರಮಾದವಾಗಿದೆಯೇನ್ರಿ...?’’ ಕೇಳಿದರು.
‘‘ಅಲ್ಲ ಸಾರ್...ಇದು ರಸಾಯನ ಪ್ರಶ್ನೆಪತ್ರಿಕೆ ಸೋರಿಕೆ ಸಾರ್....’’ ಎಂದರು.

ಸಿದ್ದರಾಮಯ್ಯ ಪೆಚ್ಚಾದರು ‘‘ಏನ್ರೀ ನೀವು...ಇಷ್ಟು ಸಣ್ಣ ಸೋರಿಕೆಯನ್ನು ಇಷ್ಟು ದೊಡ್ಡ ಸುದ್ದಿ ಮಾಡಿಬಿಟ್ರಲ್ಲಾರಿ...ಒಂದು ಕೊಡೆಯನ್ನಾದರೂ ಇಡ್ಕೊಂಡು ಪರೀಕ್ಷೆಗೆ ಹೊರಡೋದಲ್ವಾ...’’
‘‘ಸಾರ್...ಸೋರಿದ್ದು ಒಳ್ಳೆಯದೇ ಆಯಿತು ಸಾರ್...ಶಿಕ್ಷಣ ಕ್ಷೇತ್ರದ ಒಳಗಿರುವ ದೊಡ್ಡ ದೊಡ್ಡ ಕುರುಗಳು ಇದರಿಂದ ಬಹಿರಂಗವಾಗಿದೆ...ಈ ಕುರುಗಳು ಸೋರಿದರೆ ನಮ್ಮ ಶಿಕ್ಷಣ ವ್ಯವಸ್ಥೆ ಒಂದಿಷ್ಟಾದರೂ ನೆಮ್ಮದಿ ಪಡೆಯಬಹುದೇನೋ...ಅದಕ್ಕೇ ಸೋರಲು ಬಿಟ್ಟದ್ದು ಸಾರ್...’’ ಕಿಮ್ಮನೆ ಹಲ್ಲು ಕಿರಿದರು.

‘‘ಏನ್ರೀ ಇದು...ಮೊದಲು ಮಳೆ ಸೋರಿಕೆ ಎಂದಾಯಿತು...ಆಮೇಲೆ ರಾಸಾಯನಿಕ ಸೋರಿಕೆ ಎಂದಾಯಿತು...ಈಗ ನೋಡಿದರೆ ದೊಡ್ಡ ದೊಡ್ಡ ಕುರಗಳೇ ಸೋರುತ್ತಿವೆ ಎಂದು ಹೇಳುತ್ತಿದ್ದೀರಲ್ಲ...’’

‘‘ಶಿಕ್ಷಣ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ಕುರಗಳು ಸಾರ್ ಇವು...ಇವು ಸೋರಿದ್ದು ಒಳ್ಳೆಯದೇ ಆಯಿತು. ಸೋರಿದ ಜಾಗಕ್ಕೆ ಒಳ್ಳೆಯ ವೈದ್ಯರನ್ನು ಕರೆಸಿ ಮದ್ದು ಹಾಕಿಸಿ, ಬಟ್ಟೆ ಕಟ್ಟಿಸಿದ್ದೇನೆ...ಇನ್ನೇನಾದರೂ ಸೋರಿಕೆಯಾದರೆ ನಾನು ರಾಜೀನಾಮೆ ನೀಡುತ್ತೇನೆ ಸಾರ್...’’ ಕಿಮ್ಮನೆ ಭರವಸೆ ನೀಡಿದರು. ಅಷ್ಟರಲ್ಲಿ ಪಿಎ ಬಂದು ಸಿದ್ದರಾಮಯ್ಯ ಕಿವಿಯಲ್ಲಿ ಮೆಲ್ಲಗೆ ಉಸುರಿದರು ‘‘ಸಾರ್...ನೀವು ನಿಮ್ಮ ಮಗನ ಟೆಂಡರ್‌ಗೆ ಲಾಬಿ ಮಾಡಿರೋದು ಸೋರಿಕೆಯಾಗಿ ಬಿಟ್ಟಿದೆ ಸಾರ್...’’

ಸಿದ್ದರಾಮಯ್ಯ ಉಶ್ಶ್ ಎಂದು ಕುರ್ಚಿಯಲ್ಲಿ ಕುಕ್ಕರಿಸಿದವರೇ ‘‘ಎಲ್ಲಿ, ಹಿಂದೆ ಯಡಿಯೂರಪ್ಪ ಉಪಯೋಗಿಸುತ್ತಾ ಇದ್ರಲ್ಲ ಆ ಹಳೆಯ ಕೊಡೆಯನ್ನು ಈ ಕಡೆ ತನ್ರೀ...’’ ಎಂದು ಕೂಗಿದರು.
- ಚೇಳಯ್ಯ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X