ನಿರ್ಲಕ್ಷದ ವಾಹನ ಚಾಲನೆ
ಕೇಂದ್ರ ಸಚಿವ ಚೌಧರಿಯ ಪುತ್ರನ ವಿರುದ್ಧ ಮೊಕದ್ದಮೆ
ಹೈದರಾಬಾದ್, ಎ.16: ನಿರ್ಲಕ್ಷದ ವಾಹನ ಚಾಲನೆಯ ಆರೋಪದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಹಾಯಕ ಸಚಿವ ವೈ.ಎಸ್.ಚೌಧರಿಯವರ ಪುತ್ರ ಕಾರ್ತಿಕ್ ಎಂಬವರನ್ನು ಹೈದರಾಬಾದ್‌ನ ಸಂಚಾರ ವಿಭಾಗದ ಪೊಲೀಸರು ಬಂಧಿಸಿದ್ದು, ಅವರ ಪೋರ್ಶ್ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಸಂಚಾರ ಪೊಲೀಸರು ಶುಕ್ರವಾರ ರಾತ್ರಿ, ವಿಶೇಷ ರಸ್ತೆ ಸುರಕ್ಷೆ ಅಭಿಯಾನವನ್ನು ಕೈಗೊಂಡಿದ್ದ ವೇಳೆ, ಜುಬಿಲಿ ಹಿಲ್ಸ್ ತಪಾಸಣಾ ಠಾಣೆ ಹಾಗೂ ಕೆಬಿಆರ್ ಪಾರ್ಕ್ ಗೇಟ್‌ಗಳ ನಡುವೆ ಕಾರ್ತಿಕ್ ನಿರ್ಲಕ್ಷದ ಚಾಲನೆ ಮಾಡುತ್ತಿದ್ದುದು ಕಂಡು ಬಂತೆಂದು ಬಂಜಾರಾ ಹಿಲ್ಸ್ ಸಂಚಾರ ಪೊಲೀಸ್ ಠಾಣೆಯ ನಿರೀಕ್ಷಕ ಎನ್.ವಿದ್ಯಾಸಾಗರ್ ತಿಳಿಸಿದ್ದಾರೆ.
ವಿಶೇಷ ಅಭಿಯಾನದ ವೇಳೆ ತಾವು ವಿವಿಧ ಉಲ್ಲಂಘನೆಗಳಿಗಾಗಿ ಕಾರ್ತಿಕ್ ಸಹಿತ ಹಲವು ಚಾಲಕರನ್ನು ಹಿಡಿದಿದ್ದೇವೆ. ಕಾರ್ತಿಕ್ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆ.184(ಬಿ) ಅನ್ವಯ ಪ್ರಕರಣ ದಾಖಲಿಸಿದ್ದು, ಪೋರ್ಶ್ ಕಾರನ್ನು ವಶಪಡಿಸಿಕೊಂಡಿದ್ದೇವೆಂದು ಅವರು ಹೇಳಿದ್ದಾರೆ.
Next Story





