Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ16 April 2016 11:44 PM IST
share

ಅರ್ಜಿ ಆಹ್ವಾನ
ಉಡುಪಿ, ಎ.16: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ 2016-17ನೆ ಸಾಲಿಗೆ ಸ್ವಯಂ ಉದ್ಯೋಗ, ಹೈನುಗಾರಿಕೆ, ಉದ್ಯಮಶೀಲತಾ ಅಭಿವೃದ್ಧಿ, ಮೈಕ್ರೋ ಕ್ರೆಡಿಟ್ (ಕಿರುಸಾಲ), ಭೂ ಒಡೆತನ, ಮೈಕ್ರೋ ಕ್ರೆಡಿಟ್, ಮಹಿಳಾ ಸಮೃದ್ಧಿ, ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಕೊಳವೆ ಬಾವಿ, ತೆರೆದ ಬಾವಿ, ಏತ ನೀರಾವರಿ ಯೋಜನೆಗಳ ಮೂಲಕ ಆರ್ಥಿಕ ನೆರವು ಪಡೆಯಲು ಪರಿಶಿಷ್ಟ ಜಾತಿಯವರಿಂದ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಯೋಜನೆಗಳ ಮಾಹಿತಿ ಹಾಗೂ ಅರ್ಜಿಗಳನ್ನು ನಿಗಮದ ವೆಬ್‌ಸೈಟ್-ಡಿಡಿಡಿ.ಛ್ಚ್ಝ.ಚ್ಟ್ಞಠಿ.ಜಟ.ಜ್ಞಿನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ದ ನಿಗಮ, ಬಿ ಬ್ಲಾಕ್, 2ನೇ ಮಹಡಿ, ಕೊಠಡಿ ಸಂಖ್ಯೆ 302, ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ, ರಜತಾದ್ರಿ ಮಣಿಪಾಲ-576104 ಇಲ್ಲಿಂದ ಉಚಿತವಾಗಿ ಪಡೆಯಬಹುದು. ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಮೇ 16ರೊಳಗಾಗಿ ಖುದ್ದು ಅಥವಾ ಅಂಚೆ ಮೂಲಕ ಜಿಲ್ಲಾ ಕಚೇರಿಗೆ ಸಲ್ಲಿಸಬಹುದು. ಜಾತಿ ಪ್ರಮಾಣ ಪತ್ರ ಹಾಗೂ ಪಡಿತರ ಚೀಟಿಯನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯನ್ನು ಆಯಾ ವಿಧಾನಸಭಾ ಕ್ಷೇತ್ರದ ಆಯ್ಕೆ ಸಮಿತಿ ಸಭೆಯಲ್ಲಿ ಮಂಡಿಸಲಾಗುವುದು. ಆಯ್ಕೆಯಾದ ಅರ್ಜಿದಾರರು ಆಯಾ ಯೋಜನೆಗಳಿಗೆ ಸಂಬಂಧಪಟ್ಟ ಉಳಿದ ದಾಖಲೆಗಳನ್ನು ಬಳಿಕ ಸಲ್ಲಿಸಬೇಕಾಗುತ್ತದೆ. ಈ ಬಗ್ಗೆ ಜಿಲ್ಲಾ ಕಚೇರಿಯಿಂದ ಮಾಹಿತಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಚಿಕಿತ್ಸೆಗೆ ಹಣ ಬಿಡುಗಡೆ
ಬಂಟ್ವಾಳ, ಎ.16: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯ ಶಿಫಾರಸಿನಂತೆ ಬಂಟ್ವಾಳ ಕ್ಷೇತ್ರದ 28 ಮಂದಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ವೆಚ್ಚಕ್ಕೆ ಒಟ್ಟು 7.78 ಲಕ್ಷ ರೂ. ಬಿಡುಗಡೆಗೊಂಡಿದೆ ಎಂದು ಸಚಿವರ ಕಚೇರಿ ಪ್ರಕಟನೆ ತಿಳಿಸಿದೆ.

ಎ.20ರಿಂದ ಶೃಂಗೇರಿ ಸ್ವಾಮೀಜಿ ಮೊಕ್ಕಾಂ
ಬೆಳ್ತಂಗಡಿ, ಎ.16: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ತತ್‌ಕರ ಕಮಲ ಸಂಜಾತ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಎ.20ರಿಂದ 24ರವರೆಗೆ ಬೆಳ್ತಂಗಡಿ ತಾಲೂಕಿಗೆ ಆಗಮಿಸಿ ಮೊಕ್ಕಾಂ ಹೂಡಲಿದ್ದು, ವಿವಿಧ ಕಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಕೆ. ವಸಂತ ಬಂಗೇರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬಿಲ್ಲವ ಮಹಾಮಂಡಲ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಸ್ಥಾನಿಕ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಶ್ರೀಪತಿ ರಾವ್, ಮಹಾದೇವ ತಾಮನ್‌ಕರ್, ಶಾಸಕರ ಆಪ್ತ ಕಾರ್ಯದರ್ಶಿ ಪ್ರಶಾಂತ್ ಬಳೆಂಜ ಉಪಸ್ಥಿತರಿದ್ದರು.

ಕೆಪಿಎಸ್‌ಸಿ ಪರೀಕ್ಷೆಗೆ ಮಾರ್ಗದರ್ಶನ
ಉಡುಪಿ, ಎ.16: ಕೆಪಿಎಸ್‌ಸಿ ಆಹ್ವಾನಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಹಾಗೂ ತರಬೇತಿ ಕಾರ್ಯಕ್ರಮ ಸಹ ಪ್ರಾಧ್ಯಾಪಕ ವಿ.ಎನ್. ಗಾಂವ್ಕರ್ ಅಧ್ಯಕ್ಷತೆಯಲ್ಲಿ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ನಡೆಯಿತು.
ಸಮಿತಿ ಸಂಚಾಲಕ, ಸಹಾಯಕ ಪ್ರಾಧ್ಯಾಪಕಿ ಸುಷ್ಮಾ ರಾವ್ ಕೆ. ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಗ್ರಂಥಪಾಲಕಿ ಪ್ರೇಮಾ, ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಪರೀಕ್ಷಾ ಮಾದರಿ, ಅಂಕ ನೀಡುವ ಕ್ರಮ, ಮೀಸಲಾತಿ ಮುಂತಾದವುಗಳ ಬಗ್ಗೆ ವಿವರಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು.


ಅಲ್ ಫುರ್ಕಾನ್‌ನಲ್ಲಿ ರಕ್ಷಕರ ಸಭೆ
 ಉಳ್ಳಾಲ, ಎ.16: ಅಲ್ ಫುರ್ಕಾನ್ ಅರಬಿಕ್ ಇನ್ಸ್‌ಟಿಟ್ಯೂಟ್ ತೊಕ್ಕೊಟ್ಟು ಇದರ ಅಧ್ಯಾಪಕ ಮತ್ತು ರಕ್ಷಕರ ಸಭೆ ಇತ್ತೀಚೆಗೆ ನಡೆಯಿತು. ಇಸಾಕ್ ಕಲ್ಲಾಪು ಅಧ್ಯಕ್ಷತೆ ವಹಿಸಿದ್ದರು. ಮದ್ರಸ ವಿದ್ಯಾಭ್ಯಾಸದ ಪ್ರಾಮುಖ್ಯತೆಯ ಬಗ್ಗೆ ಅಧ್ಯಾಪಕಿ ಸಿಹಾನಾ ಬಿ.ಎಂ. ಮಾತನಾಡಿದರು. ಅಬ್ದುರ್ರಹೀಮ್ ಹಿತವಚನ ನೀಡಿದರು. ಅಧ್ಯಾಪಕ ಸೈಫುಲ್ಲ ಕಿರಾಅತ್ ಪಠಿಸಿದರು. ಅಶೀರುದ್ದೀನ್ ಆಲಿಯಾ ಕಾರ್ಯಕ್ರಮ ನಿರೂಪಿಸಿದರು.


ಎ.19ರಂದು ‘ಮ್ಯಾಕ್’ ಉದ್ಘಾಟನೆ
ಮಂಗಳೂರು, ಎ.16: ವೌತಾಯಿ ಅಸೋಸಿಯೇಶನ್ ಆ್ ಕರ್ನಾಟಕ(ಮ್ಯಾಕ್) ಇದರ ಉದ್ಘಾಟನಾ ಸಮಾರಂಭ ಎ.19ರಂದು ಸಂಜೆ 4:30ಕ್ಕೆ ಬಲ್ಮಠದಲ್ಲಿರುವ ಹೋಟೆಲ್ ಕುಡ್ಲ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮ್ಯಾಕ್‌ನ ಮುಖ್ಯ ಸಲಹೆಗಾರ ನಿತೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿವ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸುವರು. ಸ್ಪೋಟ್ಸ್ ಪ್ರಮೋಟರ್ಸ್‌ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಎಲಿಯಾಸ್ ಸ್ಯಾಂಕ್ಟಿಸ್, ಪ್ರಮುಖರಾದ ರಾಜ್‌ಗೋಪಾಲ್ ರೈ, ರವಿಶಂಕರ್ ಮಿಜಾರ್, ಸುರೇಂದ್ರ ಬಿ., ವಿಶ್ವಾಸ್ ಕುಮಾರ್ ದಾಸ್, ಅನಿಲ್ ದಾಸ್ ಅತಿಥಿಗಳಾಗಿ ಭಾಗವಹಿಸುವರು.
ಕಲೆ ಮತ್ತು ಕ್ರೀಡಾ ಚಟುಟಿಕೆಗಳಿಗೆ ಹೆಚ್ಚಿನ ಒತ್ತು ನೀಡುವಲ್ಲಿ ಮ್ಯಾಕ್ ಕಾರ್ಯೋನ್ಮುಖವಾಗಲಿದೆ. ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಪ್ರತಿಭೆ ಅನಾವರಣಕ್ಕೆ ಅವಕಾಶ ಕಲ್ಪಿಸಲಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮ್ಯಾಕ್‌ನ ಕಾನೂನು ಸಲಹೆಗಾರ ರಾಘವೇಂದ್ರ ರಾವ್, ಪದಾಧಿಕಾರಿಗಳಾದ ಮಹೇಶ್ ಕುಮಾರ್ ಡಿ. ಪಾಂಡ್ಯ, ಮನೀಶ್ ಆಚಾರ್ಯ, ಸಚಿನ್ ಉಪಸ್ಥಿತರಿದ್ದರು.

ನೂತನ ಖಾಝಿ ನೇಮಕಕ್ಕೆ ವಿರೋಧ
ಸುಳ್ಯ, ಎ.16: ಮೊಗರ್ಪಣೆ ಮುಹಿಯುದ್ದೀನ್ ಜುಮಾ ಮಸೀದಿಗೆ ನೂತನ ಖಾಝಿ ನೇಮಕಕ್ಕೆ ಜಮಾಅತ್‌ನ ಮಾಜಿ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮಾಅತ್‌ನ ಮಾಜಿ ಅಧ್ಯಕ್ಷ ಜಿ.ಇಬ್ರಾಹೀಂ ಹಾಜಿ, ಜಮಾಅತ್‌ನ ಸರ್ವಸದಸ್ಯರ ಅನುಮತಿ ಪಡೆದು ಖಾಝಿ ನೇಮಕ ಮಾಡಬೇಕಾದದ್ದು ಶರೀಅತ್ ನಿಯಮವಾಗಿದೆ. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿ ವಾಡುತ್ತಿರುವ ಈ ನೇಮಕಕ್ಕೆ ನಮ್ಮೆಲ್ಲರ ವಿರೋಧವಿದೆ ಎಂದರು.
ಪ್ರಸ್ತುತ ಜಮಾಅತ್ ಸದಸ್ಯರೆಲ್ಲರು ಪರಸ್ಪರ ಸೌಹಾ ರ್ದದಿಂದ, ಒಗ್ಗಟ್ಟಿನಿಂದ ಇದ್ದಾರೆ. ಆದರೆ ಖಾಝಿ ನೇಮಕದ ಬಳಿಕ ಜಮಾಅತ್ ಸದಸ್ಯರು ಪರಸ್ಪರ ಕಚ್ಚಾಡುವಂತಹ ಅಶಾಂತಿಯ ವಾತಾವರಣ ಸೃಷ್ಟಿ ಯಾಗಬಹುದು ಎಂದವರು ಆತಂಕ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಮಾಜಿ ಉಪಾ ಧ್ಯಕ್ಷ ಎಚ್.ಎ.ಉಮರ್, ಸದಸ್ಯರಾದ ಹನೀಫ್ ಜಿ., ಪಿ.ಎ.ಅಝೀಝ್ ಜಯನಗರ, ಲತೀಫ್ ಜಿ., ಅಬ್ದುಲ್ಲ ಗೂನಡ್ಕ, ಎನ್.ಎಂ.ಹಮೀದ್ ಕೊಯನಾಡು ಉಪಸ್ಥಿತರಿದ್ದರು.

ಮೊಗರ್ಪಣೆ: ಎ.24ರಂದು ಖಾಝಿ ಸ್ವೀಕಾರ ಸಮಾರಂಭ
ಸುಳ್ಯ, ಎ.16: ಮೊಗರ್ಪಣೆಯ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಮ್ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಕೂರತ್ ಅವರ ಖಾಝಿ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಜಮಾಅತ್ ಅಧ್ಯಕ್ಷ ಅಬ್ದುರ್ರಶೀದ್ ಕಮ್ಮಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
 ಎ.24ರಂದು ಮೊಗರ್ಪಣೆ ಜುಮಾ ಮಸೀದಿಯ ವಠಾರದಲ್ಲಿ ಸಮಾರಂಭ ನಡೆಯಲಿದ್ದು, ಸಂಜೆ ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್‌ರ ವಾರ್ಷಿಕ ದಿಕ್ರ್ ಹಲ್ಕಾ ಕಾರ್ಯಕ್ರಮ ನಡೆಯಲಿದೆ. ಮಂಞಂಪ್ಪಾರ ಮಜ್ಲಿಸ್ ಅಧ್ಯಕ್ಷ ಶೈಖುನಾ ಮುಹಮ್ಮದ್ ಅಶ್ರಫ್ ಸಖಾಫ್ ನೇತೃತ್ವ ವಹಿಸುವರು. ಬಳಿಕ ಖಾಝಿ ಸ್ವೀಕಾರ ನಡೆಯಲಿದ್ದು, ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಖಾಝಿ ಸ್ಥಾನ ವಹಿಸಿಕೊಡುವರು. ಅಬ್ದುಲ್ ವಹಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣ ಮಾಡುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಮಾಅತ್ ಸಂಚಾಲಕ ಬಿ.ಎಸ್.ಶರೀಫ್, ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಹಸನ್ ಹಾಜಿ, ಪ್ರಚಾರ ಸಮಿತಿಯ ಸಂಚಾಲಕ ಎಸ್.ಸಂಶುದ್ದೀನ್, ಜಮಾಅತ್ ಪ್ರ.ಕಾರ್ಯದರ್ಶಿ ಕೆ.ವೈ.ಉಸ್ಮಾನ್, ಕಾರ್ಯದರ್ಶಿ ಹಸೈನಾರ್ ಜಯನಗರ, ಆರ್ಥಿಕ ಸಮಿತಿಯ ಅಧ್ಯಕ್ಷ ಅಬ್ದುಸ್ಸಮದ್ ಹಾಜಿ, ಉಪಾಧ್ಯಕ್ಷ ಲತೀಫ್ ಸಿಲಿಕಾನ್ ಉಪಸ್ಥಿತರಿದ್ದರು.

ಇಂದು ಕಾವು ಪುತ್ತೂರಿಗೆ ನೌಶಾದ್ ಬಾಖವಿ
ಮಂಗಳೂರು, ಎ.16: ಪುತ್ತೂರಿನ ಕಾವು ಮಾಡನ್ನೂರಿನ ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿಯಲ್ಲಿ ಎ.17ರಂದು ರಾತ್ರಿ 7ಕ್ಕೆ ಎ.ಎಂ.ನೌಶಾದ್ ಬಾಖವಿಯವರ ಮತ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಇಂದಿನಿಂದ 24ರವರೆಗೆ ಪೈವಳಿಕೆ ಸಾದಾತ್ ಮಖಾಂ ಉರೂಸ್ 
ಮಂಜೇಶ್ವರ, ಎ.16: ಪೈವಳಿಕೆ ಸಾದಾತ್ ಮಖಾಂ ಉರೂಸ್ ಎ.17ರಿಂದ 24ರ ತನಕ ನಡೆಯಲಿದೆ ಎಂದು ಉರೂಸ್ ಸಮಿತಿಯ ಸೈಯದ್ ಮುಸ್ತಫಾ ತಂಙಳ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಎ.17ರಂದು ಅಸರ್ ನಮಾಝ್ ಬಳಿಕ ಸೈಯದ್ ಮದನಿ ತಂಙಳ್ ಮೊಗ್ರಾಲ್‌ರ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಸಮಸ್ತ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ಆಲಿಕುಟ್ಟಿ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸುವರು. ಸೈಯದ್ ಆಟಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸುವರು. ಪಳ್ಳಿಕೆರೆ ಖಾಝಿ ಪಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡುವರು. ಅತಾವುಲ್ಲಾ ತಂಙಳ್ ಉದ್ಯಾವರ ದುಆಗೆ ನೇತೃತ್ವ ನೀಡುವರು. 23ರಂದು ನಡೆಯುವ ಸಮಾರೋಪ ಸಮ್ಮೇಳನವನ್ನು ಸೈಯದ್ ಇಬ್ರಾಹೀಂ ಖಲೀಲುಲ್ ಬುಖಾರಿ ಉದ್ಘಾಟಿಸುವರು. ಅಲಿಕುಂಞಿ ಉಸ್ತಾದ್ ಶಿರಿಯ ಅಧ್ಯಕ್ಷತೆ ವಹಿಸುವರು. ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ಮುಖ್ಯ ಭಾಷಣ ಮಾಡುವರು ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಜೀದ್ ದಾರಿಮಿ, ಅಝೀಝ್ ಮರಿಕೆ, ಅಝೀಝ್ ಕಳಾಯಿ ಉಪಸ್ಥಿತರಿದ್ದರು.

ಎ.22: ಚೆರುಶ್ಶೇರಿ ಉಸ್ತಾದ್ ಅನುಸ್ಮರಣೆ
ಮಂಗಳೂರು, ಎ.16: ಎಸ್ಕೆಎಸ್ಸೆಸ್ಸೆಫ್ ಮಂಗಳೂರು ವಲಯ ಸಮಿತಿ ಹಾಗೂ ಮಂಗಳೂರು ಕ್ಲಸ್ಟರ್ ಸಮಿತಿ ವತಿಯಿಂದ ಎ.22ರಂದು ರಾತ್ರಿ 7ಕ್ಕೆ ಬಂದರಿನ ಸಮಸ್ತ ಕಚೇರಿಯಲ್ಲಿ ಚೆರುಶ್ಶೇರಿ ಉಸ್ತಾದ್ ಅನುಸ್ಮರಣೆ ಹಾಗೂ ಕಾರ್ಯಕರ್ತರ ‘ಕೂಟಾಯಿಮ’ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಎ.19ರಿಂದ ಬ್ರಹ್ಮಕಲಶೋತ್ಸವ
ಮುಲ್ಕಿ, ಎ.16: ಕುಬೆವೂರು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಎ.19ರಿಂದ ಎ.22ರವರೆಗೆ ನಡೆಯಲಿದೆ. 
  ಎ.22ರಂದು ಸಂಜೆ 6:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉದ್ಯಮಿ ಶಿಮಂತೂರು ಚಂದ್ರಹಾಸ ಎನ್.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಟೀಲು ದೇವಳದ ಮೊಕ್ತೇಸರ ವಾಸುದೇವ ಅಸ್ರಣ್ಣ ಹಾಗೂ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಪು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ ಬಪ್ಪನಾಡು, ಸ್ವಾಮಿ ವಿವೇಕನಾಂದ ಸೇವಾ ಸಂಸ್ಥೆಯ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಚಲನಚಿತ್ರ ನಟ ರಾಜಶೇಖರ ಕೋಟ್ಯಾನ್ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

ಕಡಬ ಬ್ಲಾಕ್ ಕಾಂಗ್ರೆಸ್‌ಗೆ ಆಯ್ಕೆ
ಕಡಬ, ಎ.16: ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಿಜಯ ಕುಮಾರ್ ರೈ ಕೆರ್ಮಾಯಿ ಆಯ್ಕೆಯಾಗಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯ ಶಿಫಾರಸಿನ ಮೆರೆಗೆ ಕಡಬ ಬ್ಲಾಕ್‌ಗೆ ಅಧಿಕೃತವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ನೇಮಕಗೊಳಿಸಿದ್ದಾರೆ ಎಂದು ಪ್ರಕಟನೆೆ ತಿಳಿಸಿದೆ.

‘ಕೇಂದ್ರದ ನೀತಿಯಿಂದ ಬೀಡಿ ಕಾರ್ಮಿಕರು ಬೀದಿಪಾಲು’
ಕಿನ್ನಿಗೋಳಿ, ಎ.16: ಕೇಂದ್ರ ಸರಕಾರ ಬೀಡಿ ಉದ್ದಿಮೆಯ ಮೇಲೆ ವಿಧಿಸಿರುವ ನಿಯಮಗಳು ಕಾಂಟ್ರಾಕ್ಟರ್‌ಗಳನ್ನು ಕಂಗೆಡಿಸಿದ್ದು ಬೀಡಿ ಉದ್ದಿಮೆ ಸ್ಥಗಿತಗೊಳಿಸುವಂತಾಗಿದೆ. ಇದರಿಂದಾಗಿ ಕೇಂದ್ರ ಸರಕಾರ ದ.ಕ. ಜಿಲ್ಲೆಯ ಸುಮಾರು 2.5 ಲಕ್ಷ ಬೀಡಿ ಕಾರ್ಮಿಕರನ್ನು ಬೀದಿ ಪಾಲು ಮಾಡಿದೆ ಎಂದು ಕರಾವಳಿ ಬೀಡಿ ಕಾಂಟ್ರಾಕ್ಟರ್‌ದಾರರ ಸಂಘ (ರಿ) ಮಂಗಳೂರು ಉಪಾಧ್ಯಕ್ಷ ಅಬ್ದುಲ್ ಖಾದರ್ ಕಿನ್ನಿಗೋಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೀಡಿ ಪೊಟ್ಟಣದಲ್ಲಿ ಶೇ.85 ಭಾಗ ಆರೋಗ್ಯಕ್ಕೆ ಹಾನಿಕರ ಘೋಷಣೆಯ ವಾಕ್ಯ ಮುದ್ರಿಸಿದರೆ ಬೀಡಿ ಕಂಪೆನಿಗಳ ಹೆಸರು ಬಳಸಲು ಸ್ಥಳಾವಕಾಶ ಇಲ್ಲದಂತಾಗುತ್ತದೆ. ಅಲ್ಲದೆ ನಿಗದಿತ ಸಮಯಗಳಲ್ಲಿ ಮಾರಾಟ ಮಾಡುವಂತೆ ಒತ್ತಡ ಏರುತ್ತಿರುವುದು ಬೀಡಿ ಕಾಂಟ್ರಾಕ್ಟರ್‌ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದರು.
ಬೀಡಿ ಉದ್ದಿಮೆ ಸ್ಥಗಿತಗೊಂಡ ಪರಿಣಾಮ ಕಾಂಟ್ರಾಕ್ಟರ್‌ದಾರರಲ್ಲದೆ, ಬಡ ಬೀಡಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಉದ್ದಿಮೆ ಸ್ಥಗಿತಗೊಂಡಿರುವ ಕಾರಣ ದೇಶದಲ್ಲಿ ತಿಂಗಳಿಗೆ 350 ಕೋಟಿ ರೂ. ನಷ್ಟ ಸಂಭವಿಸಿದೆ. ಅವಿಭಜಿತ ದ.ಕ ಜಿಲ್ಲೆಯಾದ್ಯಂತ ಸುಮಾರು 75 ಲಕ್ಷ ರೂ. ನಷ್ಟ ಸಂಭವಿಸುವಂತಾಗಿದೆ ಎಂದರು.
 

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೃಷ್ಣ ರೈ, ಎಚ್‌ಎಮ್‌ಎಸ್ ರಾಜ್ಯಾಧ್ಯಕ್ಷ ಸುರೇಶ್ ಚಂದ್ರ ಶೆಟ್ಟಿ, ಕಾರ್ಯದರ್ಶಿ ಮುಹಮ್ಮದ್ ಕಲ್ಯಾ, ಕಾರ್ಯಾಧ್ಯಕ್ಷ ಹಮೀದ್ ಅಲಿ, ಕೋಶಾಧಿಕಾರಿ ಬಿ.ಎಂ. ರಫೀಕ್, ಅಹ್ಮದ್ ಬಾವಾ, ಹೈದರ್ ಆಲಿ ಉಪಸ್ಥಿತರಿದ್ದರು. 111111111111111111111111111111111111111111111111111111

share
ವಾರ್ತಾಭಾರತಿ
ವಾರ್ತಾಭಾರತಿ
Next Story
X