ಹೊಸಂಗಡಿಯಲ್ಲಿ ಅಂಬೇಡ್ಕರ್ 125ನೆ ಜನ್ಮದಿನಾಚರಣೆ

ಸಿದ್ದಾಪುರ, ಎ.16: ಹೊಸಂಗಡಿಯ ಕೆಪಿಸಿ ಎನರ್ಜಿ ಕ್ಲಬ್ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ರ 125ನೆ ಜನ್ಮದಿನಾಚರಣೆಯನ್ನು ಕೆಪಿಸಿ ಮತ್ತು ಕೆಪಿಸಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಯಿತು.
ವಾರಾಹಿ ಜಲವಿದ್ಯುತ್ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕಿ ಜಿ. ರತ್ಮಮ್ಮ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ರ ಪಾತ್ರವನ್ನು ವಿವರಿಸಿದರು. ದೇಶದ ಸಮಗ್ರ ಜನತೆ ಸಮಾನತೆಯಿಂದ ಜೀವಿಸುವ ಅವಕಾಶ ಕಲ್ಪಿಸುವುದು ಅವರ ಮೂಲ ಉದ್ದೇಶವಾಗಿತ್ತು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ನಾಯ್ಕ ಮಾತನಾಡಿ, ದೇಶದ ದಲಿತ ಹಾಗೂ ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅಂಬೇಡ್ಕರ್ ಮಾಡಿದ ತ್ಯಾಗ, ಶ್ರಮ ಮತ್ತು ಹೋರಾಟಗಳನ್ನು ವಿವರಿಸಿದರು.
ಅಧೀಕ್ಷಕ ಅಭಿಯಂತರ ಎನ್. ಉದಯ ನಾಯ್ಕ, ವೈದ್ಯಕೀಯ ಅಧೀಕ್ಷಕಿ ಡಾ.ವಿಜಯಲಕ್ಷ್ಮಿ ನಾಯಕ್, ಕೆಪಿಸಿ ಪ.ಜಾ, ಪ.ಪಂ. ನೌಕರರ ಸಂಘದ ಅಧ್ಯಕ್ಷ ಜಿ. ಸೀತಾರಾಮಪ್ಪ ಮಾತನಾಡಿದರು. ಈ ಸಂದರ್ಭ ಅಂಬೇಡ್ಕರ್ ಜಯಂತಿ ಸಂಬಂಧ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ವರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಹಾಯಕ ಇಂಜಿನಿಯರ್ (ಸಿಸ್ಟಮ್) ಸಂದೇಶ್ ಸ್ವಾಗತಿಸಿ, ಆಡಳಿತ ಸಹಾಯಕ ದಿನೇಶ್ ಅತಿಥಿಗಳನ್ನು ಪರಿಚಯಿಸಿದರು. ವಿ. ದೇವರಾಜ್ ಕಾರ್ಯಕ್ರಮ ನಿರೂಪಿಸಿ ಕಿರಣ್‌ಕುಮಾರ್ ಆರ್. ವಂದಿಸಿದರು.
ತುಳುನಾಡ ಸಿರಿ ಮದಿಪು’ ಕಾರ್ಯಕ್ರಮಕ್ಕೆ ಚಾಲನೆ ಮೂಡುಬಿದಿರೆ, ಎ.16: ತುಳು ಸಂಸ್ಕೃತಿ ಉಳಿವು ಪ್ರತಿಯೊಬ್ಬರ ಜವಾಬ್ದಾರಿ. ಯುವಜನರು, ಅದರಲ್ಲೂ ವಿದ್ಯಾರ್ಥಿಗಳು ತುಳು ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವಂತಹ ಕೆಲಸವನ್ನು ಮಾಡುತ್ತಿರಬೇಕು. ತುಳು ಸಂಸ್ಕೃತಿಯನ್ನು ಪ್ರತಿಭೆಯೊಂದಿಗೆ ಬೆಳೆಸುವ ಅವಕಾಶವಿದೆ. ಸಂಸ್ಕೃತಿಯ ಆಸಕ್ತಿ ಯುವ ಮನಸ್ಸುಗಳಲ್ಲಿ ಅರಳಬೇಕು. ಆವೇಶದಿಂದ ಪ್ರತಿಭೆಯ ಪ್ರದರ್ಶನ ಬೇಡ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಹೇಳಿದರು.







