ಬಿಎಸ್‌ವೈಗೆ ದುಬಾರಿ ಕಾರು ಸರಿಯಲ್ಲ: ಪೂಜಾರಿ
ಮಂಗಳೂರು, ಎ.16: ಉದ್ಯಮಿ ಮುರುಗೇಶ್ ನಿರಾಣಿಯಿಂದ ಕೋಟಿ ರೂ. ವೌಲ್ಯದ ಕಾರನ್ನು ಬಿ.ಎಸ್.ಯಡಿಯೂರಪ್ಪ ಕೊಡುಗೆಯಾಗಿ ಸ್ವೀಕರಿಸಿರುವುದು ಎಷ್ಟು ಸರಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ವಾಚೊಂದನ್ನು ಕೊಡುಗೆಯಾಗಿ ಸ್ವೀಕರಿಸಿರುವುದನ್ನು ವಿರೋಧಿಸಿರುವ ಬಿಜೆಪಿ, ಈಗ ವೌನವಹಿಸಿದೆ. ವಾಚ್ ಸ್ವೀಕರಿಸಿದ ಬಗ್ಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಅದನ್ನು ಸರಕಾರದ ವಶಕ್ಕೆ ನೀಡಿದ್ದಾರೆ. ಇದೇ ರೀತಿ ಯಡಿಯೂರಪ್ಪನವರು ಈ ರೀತಿಯ ಕೊಡುಗೆಯನ್ನು ಸ್ವೀಕರಿಸಬಾರದು ಎಂದು ಜನಾರ್ದನ ಪೂಜಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಳ್ಳಿಗೆ ತಾರಾನಾಥ ಶೆಟ್ಟಿ, ಉಮೇಶ್ಚಂದ್ರ, ಟಿ.ಕೆ.ಸುಧೀರ್, ಅರುಣ್ ಕುವೆಲ್ಲೊ, ಮುಹಮ್ಮದ್ ನವಾಝ್, ರಮಾನಂದ ಪೂಜಾರಿ, ಕರುಣಾಕರ ಶೆಟ್ಟಿ, ನೀರಾಜ್ ಪಾಲ್, ದೀಪಕ್ ಕುಮಾರ್ , ನಝೀರ್ ಬಜಾಲ್ ಉಪಸ್ಥಿತರಿದ್ದರು.
Next Story





