ವಿಟ್ಲ: ಅನುಸ್ಮರಣಾ ಕಾರ್ಯಕ್ರಮ
ವಿಟ್ಲ, ಎ.16: ಕಬಕದ ಶಂಸುಲ್ ಉಲಮಾ ಕ್ರಿಯಾ ಸಮಿತಿ ಆಶ್ರಯದಲ್ಲಿ ಕಬಕ ಜಂಕ್ಷನ್‌ನ ಮರ್‌ಹೂಂ ಚೆರುಶ್ಶೇರಿ ಉಸ್ತಾದ್ ವೇದಿಕೆಯಲ್ಲಿ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ ನಡೆಯಿತು. ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಮುಖ್ಯ ಭಾಷಣ ಮಾಡಿದರು.
ಸೈಯದ್ ಯಹ್ಯಾ ತಂಙಳ್ ಪೋಳ್ಯ ಅಧ್ಯಕ್ಷತೆ ವಹಿಸಿದ್ದರು. ಪಯ್ಯನ್ನೂರು ಅಝ್‌ಹರಿಯಾ ಅರಬಿಕ್ ಕಾಲೇಜಿನ ಪ್ರೊ. ಶೇಖ್ ಮುಹಮ್ಮದ್ ಇರ್ಫಾನಿ ಉದ್ಘಾಟಿಸಿದರು. ಜುನೈದ್ ಜಿಫ್ರಿ ಮುತ್ತುಕೋಯ ತಂಙಳ್ ಆತೂರು ದುಆ ನೆರವೇರಿಸಿದರು. ಎ.ಪಿ.ಎಸ್. ಮುಹಮ್ಮದ್ ತಂಙಳ್ ಕಬಕ, ಮುಹಮ್ಮದ್ ಮದನಿ, ಹಸನ್ ಹರ್ಷದಿ, ಇಬ್ರಾಹೀಂ ಮುಸ್ಲಿಯಾರ್ ಕೊಡಿಪ್ಪಾಡಿ, ಚೇಳಾರಿ ಸಮಸ್ತ ಮತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾದ ಹಾಜಿ ಕೆ.ಎಸ್. ಇಸ್ಮಾಯೀಲ್, ಹಾಜಿ ಜಿ. ಅಬೂಬಕರ್ ಗೋಳ್ತಮಜಲು, ದ.ಕ. ಜಿಲ್ಲಾ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಗೋಲ್ಡನ್ ಹಮೀದ್ ಹಾಜಿ ಕಲ್ಲಡ್ಕ, ಸೈಯದ್ ಇಸ್ಮಾಯೀಲ್ ತಂಙಳ್ ಉಪ್ಪಿನಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಳ್ಳಾರೆ ಎಸ್‌ವೈಎಸ್ ಅಧ್ಯಕ್ಷ ಕೆ.ಮಮ್ಮಾಲಿ ಹಾಜಿ, ಹಸೈನಾರ್ ಹಾಜಿ ಬೆಳ್ಳಾರೆ, ಉಮ್ಮರ್ ಹಾಜಿ ಕೆಜಿಎನ್ ಘಟಕ, ಇಬ್ರಾಹೀಂ ಮಧುರಾ ಕಬಕ, ರಫೀಕ್ ಅಹ್ಮದ್ ಬ್ರೈಟ್ ಪೋಳ್ಯ, ಉಮರ್ ಕರಾವಳಿ ಕಬಕ, ಕೆ. ಶಾಬ ಕಬಕ, ಅಬ್ದುಲ್ಲ ಡೆಂಬಲೆ, ಮುಹಮ್ಮದ್ ಕಬಕಕಾರ್ಸ್, ಕೆ.ಎಂ. ಮುಹಮ್ಮದ್ ಹಾಜಿ ಬೆಳ್ಳಾರೆ, ಬಶೀರ್ ಬಿ.ಎ. ಬೆಳ್ಳಾರೆ, ನುಹ್ಮಾನ್ ಕಬಕ, ಕೆ.ಎಸ್. ಅಬ್ಬಾಸ್ ಕಬಕ, ವಿ.ಎಸ್. ಇಬ್ರಾಹೀಂ ಒಕ್ಕೆತ್ತೂರು, ಉಬೈದ್ ವಿಟ್ಲ, ಹಮೀದ್ ಕುಕ್ಕರಬೆಟ್ಟು, ಝಮೀರ್ ಕಬಕ, ಅಶ್ರಫ್ ಕೆದುವಡ್ಕ, ಅಬೂಬಕರ್ ಹಾಜಿ ಮಂಗಳ, ಆದಂ ಎಂಎಂಎಸ್. ಮಿತ್ತೂರು, ಖಾದರ್ ಎನ್‌ಎಂಎಸ್, ಮುಬೀರ್ ಚಾಂದ್ ಕಬಕ ಮತ್ತಿತರರು ಉಪಸ್ಥಿತರಿದ್ದರು. ಕಬಕ ಸಂಶುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಕೊಡಿಪ್ಪಾಡಿ ಸ್ವಾಗತಿಸಿದರು. ಅಧ್ಯಕ್ಷ ಕೆ.ಎಸ್. ಆಸಿಫ್ ವಂದಿಸಿದರು. ಕೆ.ಎಂ.ಎ. ಕೊಡುಂಗಾಯಿ ಕಾರ್ಯಕ್ರಮ ನಿರೂಪಿಸಿದರು





