ಕಾರು-ಗೂಡ್ಸ್ ರಿಕ್ಷಾ ಢಿಕ್ಕಿ: ಓರ್ವನಿಗೆ ಗಾಯ

ಕಡಬ, ಎ.16: ಕಾರು ಹಾಗೂ ಗೂಡ್ಸ್ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ಗಂಭೀ ರವಾಗಿ ಗಾಯಗೊಂಡ ಘಟನೆ ಉಪ್ಪಿ ನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆಲಂಕಾರು ಪೇಟೆಯಲ್ಲಿ ಶುಕ್ರವಾರ ಸಂಭವಿಸಿದೆ.
ರಿಕ್ಷಾ ಚಾಲಕ ಹೊನ್ನಪ್ಪ ಗೌಡ (46) ಎಂಬವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಪ್ಪಗೌಡರು ರಸ್ತೆ ಬದಿಯಲ್ಲಿ ರಿಕ್ಷಾವನ್ನು ನಿಲ್ಲಿಸಿ ಬಾಡಿಗೆಯ ಹಣ ಪಡೆಯುತ್ತಿದ್ದ ವೇಳೆ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಏಕಾಏಕಿ ಬಂದು ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ರಿಕ್ಷಾ ಮೂರು ಪಲ್ಟಿ ಹೊಡೆದು ಸುಮಾರು ನೂರು ಅಡಿ ದೂರಕ್ಕೆ ಉರುಳಿ ಅಲ್ಲಿ ನಿಲ್ಲಿಸ ಲಾಗಿದ್ದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಗಾಯಗೊಂಡ ಹೊನ್ನಪ್ಪಗೌಡರನ್ನು ರಿಕ್ಷಾದಿಂದ ಹೊರತೆಗೆಯಲು ಹರ ಸಾಹಸ ಪಡಬೇಕಾಯಿತು.
ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಸುಬ್ರಹ್ಮಣ್ಯ ಕ್ಷೇತ್ರದಿಂದ ವಾಪಸಾಗುತ್ತಿದ್ದು, ಬಂಟ್ವಾಳದ ಗಣೇಶ್ ಎಂಬವರು ಕಾರು ಚಲಾಯಿಸುತ್ತಿದ್ದರು. ಕಾರಿನಲ್ಲಿ ದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.





