ಪ್ರತ್ಯೇಕ ಪ್ರಕರಣ ಇಬ್ಬರ ಆತ್ಮಹತ್ಯೆ
ಶಿರ್ವ, ಎ.16: ವೈಯಕ್ತಿಕ ಕಾರಣದಿಂದ ಮನನೊದು ಕಟ್ಟಿಂ ಗೇರಿಯ ವಿಲಿಯಂ ಅರಾನ್ಹ ಎಂಬವರ ಪತ್ನಿ ಫಿಲೋಮಿನಾ ಅರಾನ್ಹ (57) ಎಂಬವರು ಎ.15ರಂದು ರಾತ್ರಿ ವೇಳೆ ಮನೆಯ ಸ್ಟೋರ್ ರೂಂನ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಪು ಗ್ರಾಮದ ಸ್ಟಡಿ ಸರ್ಕಲ್ ಬಳಿಯ ನಿವಾಸಿ ದಿ.ಮುನೀರ್ ಅಹ್ಮದ್ ಎಂಬವರ ಮಗ ಅಬ್ರಾರ್(33) ಎಂಬಾತ ಎ.16ರಂದು ಬೆಳಗ್ಗೆ ಮನೆ ಸಮೀಪದ ಜನತಾ ಕಾಲನಿಯ ಸಾರ್ವಜನಿಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story