ಸಾಮರಸ್ಯಕ್ಕೆ ಒತ್ತು ನೀಡಿ, ರಾಜಕೀಯದಲ್ಲಿ ಮುಂದೆ ಬನ್ನಿ
ಆದಿದ್ರಾವಿಡ ಸಮಾಜದವರಿಗೆ ಸಚಿವ ಆಂಜನೇಯ ಸಲಹೆ

ಮಂಗಳೂರು, ಎ.16: ಆದಿದ್ರಾವಿಡ ಸಮಾಜಕ್ಕೆ ರಾಜಕೀಯ ಅಸ್ತ್ರ ಸಿಗಬೇಕಾದರೆ ಸಮಾಜ ತನ್ನ ನಡೆ ನುಡಿಗಳಿಂದ ಇತರ ಜಾತಿ-ಸಮುದಾಯಗಳ ಜೊತೆ ಸಾಮರಸ್ಯ, ಬಾಂಧವ್ಯಕ್ಕೆ ಒತ್ತು ನೀಡಿ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಸಲಹೆ ನೀಡಿದ್ದಾರೆ. ನಗರದ ಎನ್‌ಜಿಒ ಆವರಣದಲ್ಲಿ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಪ್ರಥಮ ಸಹಕಾರಿ ಸಂಘ ‘ಚೈತನ್ಯ ಸಹಕಾರಿ ಸಂಘ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಮಗೆ ಅಧಿಕಾರ, ಅವಕಾಶ ಸಿಕ್ಕಿಲ್ಲ ಎಂಬ ಹತಾ ಶೆಯ ಮಾತುಗಳನ್ನು ಬದಿಗೊತ್ತಿ, ಹಕ್ಕನ್ನು ಪಡೆ ಯಲು ಪ್ರಯತ್ನಿಸಬೇಕು. ಸಮುದಾಯದ ಸದಸ್ಯರು ಮಹಾಗನರ ಪಾಲಿಕೆ, ವಿಧಾನ ಸಭೆಯಲ್ಲಿ ಪಾಲು ಪಡೆಯಬೇಕು ಎಂದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳು ಕೂಡಾ ತಮ್ಮದೇ ಆದ ಪ್ರಮುಖ ಪಾತ್ರ ವನ್ನು ನಿರ್ವಹಿಸುತ್ತಿದೆ. ಸಂಘವು ಉತ್ತಮ ಸ್ಥಿತಿಯಲ್ಲಿ ಚಟುವಟಿಕೆಗಳನ್ನು ನಡೆಸಲು ಸಮಾಜ ಬಾಂಧವರು ಸಹಕರಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಮೋಹನ್ ನೆಲ್ಲಿಗುಂಡಿ ಪುತ್ತೂರು ವಹಿಸಿದ್ದರು. ಸಹಕಾರಿ ಸಂಘದ ಉದ್ಘಾಟನೆಯ ಸಂದರ್ಭ ಮೇಯರ್ ಹರಿನಾಥ್, ಸಮಾಜ ಕಲ್ಯಾಣ ಮಂಡ ಳಿಯ ಅಧ್ಯಕ್ಷೆ ದಿವ್ಯಪ್ರಭಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಹಕಾರಿ ಸಂಘಗಳ ಉಪ ನಿಬಂ ಧಕ ಬಿ.ಕೆ. ಸಲೀಂ, ಮನಪಾ ಸದಸ್ಯ ಅಬ್ದುಲ್ ಲತೀಫ್, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್ ನಾಯಕ್, ಆದಿದ್ರಾವಿಡ ಸಮಾಜ ಸೇವಾ ಸಂಘದ ಆರಾಧನಾ ಸಮಿತಿಯ ಅಧ್ಯಕ್ಷ ಜಯೇಂದ್ರ ಕೋಟ್ಯಾನ್, ಚೈತನ್ಯ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಸೂಟರ್ ಪೇಟೆ ಮೊದಲಾದವರು ಉಪಸ್ಥಿತರಿದ್ದರು. ದಿನಕರ ಪಾಂಡೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.





