ಗುಜರಾತ್ ಲಯನ್ಸ್‌ಗೆ ಹ್ಯಾಟ್ರಿಕ್ ಜಯ
ಫಿಂಚ್ ಅರ್ಧಶತಕದ ಪಂಚ್

ಮುಂಬೈ, ಎ.16: ಹೊಸ ತಂಡ ಗುಜರಾತ್ ಲಯನ್ಸ್ ಇಂದು ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ 9ನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 3 ವಿಕೆಟ್‌ಗಳ ಜಯ ಗಳಿಸಿದ್ದು, ಇದರೊಂದಿಗೆ ಹ್ಯಾಟ್ರಿಕ್ ಗೆಲುವು ಸಂಪಾದಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 144 ರನ್‌ಗಳ ಸವಾಲನ್ನು ಪಡೆದ ಗುಜರಾತ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 147 ರನ್ ಗಳಿಸಿತು.
ಆರಂಭಿಕ ದಾಂಡಿಗ ಆ್ಯರೊನ್ ಫಿಂಚ್ ಸತತ ಮೂರನೆ ಬಾರಿ ಅರ್ಧಶತಕ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಅವರು ಔಟಾಗದೆ 67 ರನ್(54ಎ, 7ಬೌ,1ಸಿ) ಗಳಿಸಿದರು.
ನಾಯಕ ಸುರೇಶ ರೈನಾ(27) ಮತ್ತು ಆಕಾಶ್‌ದೀಪ್ ನಾಥ್(12) ಎರಡಂಕೆಯ ಕೊಡುಗೆ ನೀಡಿದರು.
ಕೊನೆಯ ಎಸೆತದಲ್ಲಿ 1 ರನ್ ಮಾಡಬೇಕಿತ್ತು ಫಿಂಚ್ ಅವರು ಬೌಂಡರಿ ಬಾರಿಸುವ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿತ್ತು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್(34), ಜೋಸ್ ಬಟ್ಲರ್(16), ಅಂಬಟಿ ರಾಯುಡು(20), ಹಿಮಾಂಶು ಪಾಂಡ್ಯ (20), ಟಿಮ್ ಸೌಥಿ (25) ಎರಡಂಕೆಯ ಸ್ಕೋರ್ ದಾಖಲಿಸಿ ತಂಡದ ಸ್ಕೋರ್‌ನ್ನು 140ರ ಗಡಿ ದಾಟಿಸಲು ನೆರವಾದರು.
ಧವಳ್ ಕುಲಕರ್ಣಿ 19ಕ್ಕೆ 2, ಪ್ರವೀಣ್ ತಾಂಬೆ 12ಕ್ಕೆ 2,ಜಕಾತಿ, ಫಾಕ್ನರ್ ಮತ್ತು ಬ್ರಾವೋ ತಲಾ 1 ವಿಕೆಟ್ ಹಂಚಿಕೊಂಡರು.
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 143/8
ರೋಹಿತ್ ಶರ್ಮ ಸಿ ಜಕಾತಿ ಬಿ ಕುಲಕರ್ಣಿ07
ಪಾರ್ಥಿವ್ ಪಟೇಲ್ ಸಿ ಫಾಕ್ನರ್ ಬಿ ತಾಂಬೆ34
ಹಾರ್ದಿಕ್ ಪಾಂಡ್ಯ ಸಿ ಜಕಾತಿ ಬಿ ಕುಲಕರ್ಣಿ02
ಬಟ್ಲರ್ ಸ್ಟಂಪ್ಡ್ ಕಾರ್ತಿಕ್ ಬಿ ಜಕಾತಿ16
ಪೊಲಾರ್ಡ್ ಸಿ ಬ್ರಾವೊ ಬಿ ತಾಂಬೆ01
ರಾಯುಡು ಬಿ ಫಾಕ್ನರ್ 20
ಹರ್ಭಜನ್ ಸಿಂಗ್ ಸಿ ಕಾರ್ತಿಕ್ ಬಿ ಬ್ರಾವೊ08
ಕೆ.ಹಿಮಾಂಶು ಪಾಂಡ್ಯ ಔಟಾಗದೆ20
ಟಿಮ್ ಸೌಥಿ ರನೌಟ್(ಕಾರ್ತಿಕ್/ಬ್ರಾವೊ)25
ಮೆಕ್ಲೀನಘನ್ ಔಟಾಗದೆ00
ಇತರೆ10
ವಿಕೆಟ್ ಪತನ: 1-7, 2-19, 3-51, 4-59, 5-77, 6-88, 7-99, 8-141
ಬೌಲಿಂಗ್ ವಿವರ
ಪಿ.ಕುಮಾರ್ 3-0-18-0
ಡಿ.ಕುಲಕರ್ಣಿ4-1-19-2
ಜಕಾತಿ3-0-13-1
ಫಾಕ್ನರ್4-0-40-1
ತಾಂಬೆ2-0-12-2
ಡ್ವೇಯ್ನ ಬ್ರಾವೊ4-0-39-1
ಗುಜರಾತ್ ಲಯನ್ಸ್ 20 ಓವರ್‌ಗಳಲ್ಲಿ 147/7
ಆ್ಯರೊನ್ ಫಿಂಚ್ ಔಟಾಗದೆ 67
ಮೆಕಲಮ್ ಸಿ ಹಾರ್ದಿಕ್ ಪಾಂಡ್ಯ ಬಿ ಬುಮ್ರಾ06
ಎಸ್.ಕೆ.ರೈನಾ ಸಿ ಪಟೇಲ್ ಬಿ ಮೆಕ್ಲೀನಘನ್27
ಡಿ. ಕಾರ್ತಿಕ್ ಸಿ ಹರ್ಭಜನ್ ಬಿ ಹಿಮಾಂಶು ಪಾಂಡ್ಯ09
ಡ್ವೇಯ್ನ ಬ್ರಾವೊ ಸಿ ಪಟೇಲ್ ಬಿ ಬುಮ್ರಾ02
ಆಕಾಶ್‌ದೀಪ್ ನಾಥ್ ಸಿ ಹಾರ್ದಿಕ್ ಬಿ ಮೆಕ್ಲೀನಘನ್12
ಫಾಕ್ನರ್ ಸಿ ಪಟೇಲ್ ಬಿ ಮೆಕ್ಲೀನಘನ್ 07
ಪಿ.ಕುಮಾರ್ ಸಿ ಪಟೇಲ್ ಬಿ ಮೆಕ್ಲೀನಘನ್ 00
ಧವಳ್ ಕುಲಕರ್ಣಿ ಔಟಾಗದೆ06
ಇತರೆ11
ವಿಕೆಟ್ ಪತನ: 1-12, 2-65, 3-80, 4-83, 5-109, 6-131, 7-131
ಬೌಲಿಂಗ್ ವಿವರ
ಟಿಮ್ ಸೌಥಿ4-0-31-0
ಬುಮ್ರಾ4-0-32-2
ಮೆಕ್ಲೀನಘನ್4-0-21-4
ಹಿಮಾಂಶು ಪಾಂಡ್ಯ4-0-20-1
ಹಾರ್ದಿಕ್ ಪಾಂಡ್ಯ2-0-16-0
ಹರ್ಭಜನ್ ಸಿಂಗ್2-0-20-0







