ಭಾರತೀಯ ಕ್ರಿಕೆಟ್‌ನಲ್ಲಿ ಅವತರಿಸಿದ ಮತ್ತೊಬ್ಬ ಕುಂಬ್ಳೆ!
.jpg)
ಇಂಧೋರ್, ಎಪ್ರಿಲ್ 17: ಟೀಮ್ ಇಂಡಿಯಾದಲ್ಲಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ನಿವೃತ್ತಿ ನಂತರ ಖಾಲಿ ಸ್ಥಾನವನ್ನು ಭರ್ತಿ ಮಾಡಲಿಕ್ಕೆ ಇಲ್ಲೊಬ್ಬ ಆಟಗಾರ ಎದ್ದು ನಿಂತಿದ್ದಾನೆ. ಪಲಾಶ್ ಕೋಚರ್ ಅನಿಲ್ ಕುಂಬ್ಳೆಯಂತೆ ಒಂದೇ ಇನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ಗಳನ್ನು ಕಬಳಿಸಿದ್ದಾನೆ.
ವರದಿಗಳು ತಿಳಿಸಿರುವ ಪ್ರಕಾರ ಮಧ್ಯಪ್ರದೇಶದ ಕ್ರಿಕೆಟ್‌ನಲ್ಲಿ ಈತ ಹತ್ತು ವಿಕೆಟ್ ಪಡೆದು ಮಿಂಚಿದ್ದರೂ ಆತನ ತಂಡಕ್ಕೆಸೋಲಿನಿಂದತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೋಶಂಗಬಾದ್‌ನಲ್ಲಿ ನರ್ಮದಾಪುರಂ ವಿರುದ್ಧ ಎರಡನೆ ಇನಿಂಗ್ಸ್‌ನಲ್ಲಿ ಪಲಾಶ್ ಎಲ್ಲ ಹತ್ತು ವಿಕೆಟ್‌ಗಳನ್ನು ಪಡೆದಿದ್ದಾನೆ. ಪಲಾಶ್ 28.1 ಓವರ್‌ಗಳಲ್ಲಿ 12 ಓವರ್ ಮೇಡನ್ ಎಸೆದು 53 ರನ್ ನೀಡಿ ಹತ್ತು ವಿಕೆಟ್ ಪಡೆದಿದ್ದಾನೆ.
ಕುಂಬ್ಳೆಯಂತೆ ಈತನೂ ಸ್ಪಿನ್ನರ್. ಆದರೆ ಕುಂಬ್ಲೆ ಟೆಸ್ಟ್ ಮ್ಯಾಚ್‌ನಲ್ಲಿ ಹತ್ತು ವಿಕೆಟ್ ಪಡೆದಿದ್ದರೆ ಪಲಾಶ್ ಸ್ಥಳೀಯ ಕ್ರಿಕೆಟ್‌ನಲ್ಲಿ ಹತ್ತು ವಿಕೆಟ್ ಪಡೆದಿದ್ದಾರೆ ಎಂಬ ವ್ಯತ್ಯಾಸವೊಂದು ಇದ್ದೇ ಇದೆ.
Next Story





