ಮಂಗಳೂರು ಸಿಟಿ ಟೂರ್ ಬಸ್‌ಗೆ ಚಾಲನೆ

ಮಂಗಳೂರು, ಎ.17: ಕರಾವಳಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಉದ್ದೇಶದಿಂದ ಕೆಎಸ್‌ಟಿಡಿಸಿ ಆರಂಭಿಸಿರುವ ಪ್ರವಾಸಿ ಬಸ್ ಸೌಕರ್ಯ ಸಿಟಿ ಟೂರ್ ಬಸ್‌ಗೆ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು ಇಂದು ಬೆಳಗ್ಗೆ ಪಿಲಿಕುಳ ನಿಸರ್ಗ ಧಾಮದ ಬಳಿ ಚಾಲನೆ ನೀಡಿದರು. ಈ ಸಂದರ್ಭ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಐವ್ ಡಿಸೋಜ, ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪಿಲಿಕುಳ ನಿಸರ್ಗಧಾಮದ ಸಿಇಒ ಪ್ರಭಾಕರ್ ಶರ್ಮ, ಕೆಎಸ್‌ಟಿಡಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಟಿ ಟೂರ್ ಬಸ್ ಬೆಳಗ್ಗೆ 8ಕ್ಕೆ ಲಾಲ್‌ಬಾಗ್‌ನಿಂದ ಹೊರಟು ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿ-ಕದ್ರಿ ದೇವಸ್ಥಾನ ಸೈಂಟ್ ಅಲೋಶಿಯಸ್ ಕಾಲೇಜು - (ಚಾಪೆಲ್), ಪಿಲಿಕುಳ ನಿಸರ್ಗಧಾಮ ತಲುಪಲಿದೆ. ಮಧ್ಯಾಹ್ನ ಊಟದ ವಿಶ್ರಾಮದ ಬಳಿಕ ಅಲ್ಲಿಂದ ತಣ್ಣೀರು ಬಾವಿ ಟ್ರೀ ಪಾರ್ಕ್, ಪಣಂಬೂರು ಬೀಚ್‌ಗೆ ಸಂಜೆ ತೆರಳಿ ಮುಸ್ಸಂಜೆ 7ಕ್ಕೆ ಮತ್ತೆ ಲಾಲ್‌ಬಾಗ್‌ನಲ್ಲಿ ಸಮಾಪನಗೊಳ್ಳಲಿದೆ. ಇದರಲ್ಲಿ ಪ್ರಯಾಣಿಸಬಯಸುವ ಪ್ರತಿ ಸದಸ್ಯನಿಗೆ 250 ರೂ. ನಿಗದಿಪಡಿಸಲಾಗಿದೆ.





