ಎಚ್ಚರ! ನಿಮ್ಮ ಸಿಟ್ಟು ದವಡೆಗೆ ಮೂಲವಾಗದಿರಲಿ

ಸಿಟ್ಟು ಮತ್ತು ಅಹಂಗೆ ಏಟು ಬಿದ್ದ ಭಾವನೆಯೆ? ಆತ್ಮವಿಶ್ವಾಸ ಉತ್ತಮ ವಿಷಯವೇ. ಆದರೆ ನೀವು ಯಾವಾಗಲೂ ನನಗೆ ಎಲ್ಲಾ ಗೊತ್ತಿದೆ ಎನ್ನುವ ಭಾವನೆಯಲ್ಲಿದ್ದರೆ ತಿರುಗೇಟು ಬೀಳಬಹುದು. ಮುಖ್ಯವಾಗಿ ನೀವು ನನಗೆ ಕೇರ್ ಇಲ್ಲ ಎನ್ನುವ ಮನೋಭಾವ ಹೊಂದಿದ್ದರೆ. ಫಲಿತಾಂಶ: ನಿಮ್ಮ ಅಹಂಕಾರದಿಂದಾಗಿ ಸಹೋದ್ಯೋಗಿಗಳು ನಿಮ್ಮ ಜೊತೆ ಕೆಲಸ ಮಾಡಲು ಬಯಸದೆ ಇರಬಹುದು.
ಅಹಂಕಾರ ತೋರಿಸುವ ವ್ಯಕ್ತಿಯ ಜೊತೆಗೆ ಕೆಲಸದ ಜಾಗದಲ್ಲಿ ಹೇಗೆ ವ್ಯವಹರಿಸಬೇಕು ಎನ್ನುವ ಪ್ರಶ್ನಗೆ ಹಲವರು ಹಲವು ಉತ್ತರಗಳನ್ನು ನೀಡಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ:
- ಅಹಂಕಾರ ಬೀರುವ ವ್ಯಕ್ತಿಗಳಿಗೆ ಯಾವಾಗಲೂ ತಮ್ಮತ್ತ ಜನ ಗಮನ ಹರಿಸಬೇಕು ಎನ್ನುವ ಅಗತ್ಯವಿರುತ್ತದೆ. ನಮಗೆ ಆಮ್ಲಜನಕ ಬೇಕಾದಂತೆ ಅವರಿಗೆ ಗಮನ ಬೇಕು. ಪ್ರಶಂಸೆಗಾಗಿ ಸಾಯುತ್ತಾರೆ. ಅದನ್ನು ನೇರವಾಗಿ ಹೇಳಿದರೆ ಸರಿ. ಚರ್ಚಿಸಿದರೆ ಅಥವಾ ಮುಖ ತಿರುಗಿಸಿ ನಡೆದರೆ ನಿಮ್ಮನ್ನು ಸುಸ್ತು ಹೊಡೆಸಿಬಿಡುತ್ತಾರೆ ಎನ್ನುತ್ತಾರೆ ಆಂಜಿ ನೈಕ್.
- ನಿಜವಾಗಿ ಶ್ರೇಷ್ಠವಾಗಿದ್ದವರು, ಆ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ ಎನ್ನುತ್ತಾರೆ ಸುರೆಟ್ಟಾ ವಿಲಿಯಮ್ಸ್.
- ಬಹುತೇಕ ಅಹಂಕಾರದ ಜನ ಬುದ್ಧಿವಂತರು ಅಥವಾ ಯಶಸ್ಸು ಕಂಡವರು. ಅಥವಾ ಎರಡನ್ನೂ ಹೊಂದಿದವರು. ಬುದ್ಧಿವಂತರು ಇತರರು ತಮ್ಮ ಮಟ್ಟಕ್ಕೆ ಏಕೆ ಏರಿಲ್ಲ ಎಂದು ಅರ್ಥ ಮಾಡಿಕೊಳ್ಳುವುದಿಲ್ಲ. ಎನ್ನುತ್ತಾರೆ ಅನ್ನಾ ಬಟ್ಲರ್. - ಅಹಂಕಾರ ಹೊಂದಿದವರು ತಪ್ಪು ಆತ್ಮವಿಶ್ವಾಸ ಹೊಂದಿರುತ್ತಾರೆ. ಹಿರಿತನವನ್ನು ಬತ್ತಳಿಕೆಯಲ್ಲಿಟ್ಟುಕೊಂಡಿರುತ್ತಾರೆ. ಆತ್ಮವಿಶ್ವಾಸಿಗಳಾಗಿರುವುದಿಲ್ಲ. ಅಂತಹವರ ಜಒತೆ ವ್ಯವಹರಿಸುವಾಗ ಚತುರ ಆಟವಾಡಿ ಅಥವಾ ಬೆದರಿಕೆ ಹಾಕಿ. ಇದು ಯಶಸ್ವಿಯಾಗಬೇಕಾದರೆ, ಅವರ ವಿರುದ್ಧ ಸಿಟ್ಟುಗೊಳ್ಳುವುದು ಅಥವಾ ಸೇಡಿಗೆ ಯೋಜನೆ ಹಾಕುವ ಬದಲಾಗಿ ಅವರ ಚಾಲನಾಶಕ್ತಿ ಏನು ಎನ್ನುವುದನ್ನು ಮೊದಲಿಗೆ ತಿಳಿದುಕೊಳ್ಳಬೇಕು. ಎನ್ನುತ್ತಾರೆ ಇಯಾನ್ ವಿಥ್ರೊ.
- ಜೀವನದ ಅನುಭವವೇ ಇಲ್ಲದೆ ಎಲ್ಲವನ್ನೂ ತಿಳಿದಿದ್ದೇವೆ ಎಂದುಕೊಂಡಿರುವ ವ್ಯಕ್ತಿಗಳು ಅಹಂಕಾರಿಗಳಾಗಿರುತ್ತಾರೆ. ಈ ವ್ಯಕ್ತಿಗೆ ಹೆಚ್ಚು ಒಳನೋಟಗಳಿರುವುದಿಲ್ಲ. ಅವರನ್ನು ಅಲಕ್ಷಿಸುವುದೇ ಮದ್ದು. ಅವರ ಜೊತೆ ಮಾತನಾಡಲು ಸಮಯವೇ ಇಲ್ಲ ಎಂದು ತೋರಿಸಿ, ನಿಮ್ಮ ಅತೃಪ್ತಿ ತಿಳಿಸಿ ಸಂಭಾಷಣೆ ನಿಲ್ಲಿಸಿಬಿಡಿ. ಏನಾದರೂ ಹೇಳಿದರೆ, ಒಕೆ, ಸರಿ ಎಂದು ಉತ್ತರಿಸಿ ನಡೆದುಬಿಡಿ ಎನ್ನುತ್ತಾರೆ ಜಿಲ್ ಉಚಿಯಂ.
- ಅಹಂಕಾರಿಗಳ ಮುಂದೆ ಪ್ರಾಮಾಣಿಕವಾಗಿ ನಿಮ್ಮ ಭಾವನೆಯನ್ನು ಇಟ್ಟುಬಿಡಬೇಕು ಎನ್ನುತ್ತಾರೆ ಅಂಕಿತಾ ಸಿಂಗ್.
- ಅಹಂಕಾರಿ ಪದೇ ಪದೇ ಅದೇ ವರ್ತನೆ ತೋರಿದಾಗ ನಿಮ್ಮ ನಿಲುವನ್ನು ದೃಢವಾಗಿ ಮುಂದಿಡಬೇಕು. ನಾನು ಹಲವು ಅಹಂಕಾರಿ ಬಾಸ್‌ಗಳನ್ನು ಕಂಡಿರುವೆ. ಆದರೆ ನಾನು ನನ್ನ ನಿಲುವನ್ನು ಬದಲಿಸಲಿಲ್ಲ. ನನ್ನ ಅಭಿಪ್ರಾಯ ಇಷ್ಟವಾಗದಾಗ ಅದನ್ನು ಗೌರವಿಸಿದ್ದಾರೆ. ಇದರಿಂದ ನಮ್ಮಿಬ್ಬರ ಸಂಬಂಧದ ಮೇಲೂ ವ್ಯಾಪಕ ಪರಿಣಾಮ ಬೀರಿದೆ ಎನ್ನುತ್ತಾರೆ ಬಟ್ಲರ್.
- ನಾನು ಅಹಂಕಾರಿಗಳನ್ನು ಹಾಸ್ಯಗಾರರಂತೆ ಕಾಣುತ್ತೇನೆ. ಅವರ ದೌರ್ಬಲ್ಯ ಅಡಗಿಸಿಡಲು ಹಾಗೆ ವ್ಯವಹರಿಸುತ್ತಾರೆ. ಅಂತಹವರನ್ನು ಹೆಚ್ಚು ಕೇರ್ ಮಾಡಬಾರದು. ಅವರು ಮೂರ್ಖರಂತೆ ವರ್ತಿಸುತ್ತಾರೆ. ಅಲಕ್ಷಿಸಬೇಕು ಎನ್ನುತ್ತಾರೆ ಆಕಾಂಕ್ಷ ಜೋಶಿ.







