ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕಕ್ಕೆ ಸಿದ್ದಗೊಂಡಿರುವ ಪಟ್ಟೋರಿ ದೈವಸ್ಥಾನ
ಪಟ್ಟೋರಿ: ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಎ.20ರಿಂದ23ರವರೆಗೆ

ಕೊಣಾಜೆ: ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಟೋರಿ, ಕೊಣಾಜೆ ಇದರ ನೂತನ ಗರ್ಭಗುಡಿ, ಗೋಪುರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವಧಿ ಸಾನದಾಯನ ಜಾತ್ರಾ ಮಹೋತ್ಸವವು ಎ.20ರಿಂದ ಎ.23ರವರೆಗೆ ನಡೆಯಲಿದೆ.
ಎ.20ರಂದು ಸಂಜೆ 5ಗಂಟೆಗೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ, ಸಪ್ತಶುದ್ದಿ, ಪ್ರಸಾದಶುದ್ಧಿವಾಸ್ತು ಹೋಮ, ವಾಸ್ತು ಬಲಿ, ವಾಸ್ತುಪೂಜೆ, ಪ್ರಕಾರ ಬಲಿ, ದೈವಗಳ ಮಂಚ ಅಧಿವಾಸ, ಕಲಶಾಧಿವಾಸ, ಆಧಿವಾಸ ಹೋಮ ನಡೆಯಲಿದ್ದು ಸಂಜೆ ಆರು ಗಂಟೆಗೆ ಪಟ್ಟೋರಿ ಭಂಡಾರ ಮನೆಯಿಂದ ಶ್ರಿ ದೈವಗಳ ಭಂಡಾರ ಶ್ರೀ ಸನ್ನಿಧಿಗೆ ಬರಲಿದೆ.
ಎ.21ರಂದು ಬೆಳಿಗ್ಗೆ ಗಣಪತಿ ಹೋಮ, ಬಳಿಕ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ತಂಬಿಲ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 3ಗಂಟೆಗೆ ಮಲರಾಯ ಬಂಟ ದೈವಗಳ ನೇಮ, ರಾತ್ರಿ 7ಗಂಟೆಗೆ ಪಟ್ಟೋರಿತ್ತಾಯ ದೈವದ ಕೋಟ್ಯದಾಯನ ನೇಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎ.22ರಂದು ರಾತ್ರಿ 8ಗಂಟೆಗೆ ಪಟ್ಟೋರಿತ್ತಾಯ ದೈವದ ವಲಸರಿ ನಂತರ ಜುಮಾದಿ ಬಂಟ ದೈವದ ನೇಮ ನಡೆಯಲಿದೆ. ಎ.23ರಂದು ರಾತ್ರಿ 7ಗಂಟೆಗೆ ಪಿಲಿಚಾಮುಂಡಿ ದೈವದ ನೇಮ ಹಾಗೂ ಅಣ್ಣಪ್ಪ ಪಂಜುರ್ಲಿ ದೈವದ ನೇಮ ನಡೆಯಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







