ಒಂದು ಲಕ್ಷ ದಿರ್ಹಮ್ ಹಣವಿದ್ದ ಬ್ಯಾಗ್ ಮರಳಿಸಿದ ಭಾರತೀಯ ಕ್ಲೀನರ್ ಗೆ ಸನ್ಮಾನ, ಬಹುಮಾನ

ದುಬೈ, ಎ. 17: ಇಲ್ಲಿನ ಫೆಸ್ಟಿವಲ್ ಸಿಟಿ ಮಾಲ್ ನಲ್ಲಿ ಸಿಕ್ಕಿದ ಒಂದು ಲಕ್ಷ ದಿರ್ಹಮ್ ಹಣವಿದ್ದ ಬ್ಯಾಗ್ ಅನ್ನು ಮರಳಿಸಿದ ಭಾರತೀಯ ಕ್ಲೀನರ್ ಗೆ ಆತನ ಕಂಪೆನಿ ಟ್ರಾನ್ಸ್ ಗಾರ್ಡ್ ನಗದು ಬಹುಮಾನ, ಊರಿಗೆ ಹೋಗಲು ಉಚಿತ ಟಿಕೆಟ್, ಏಳು ದಿನಗಳ ಹೆಚ್ಚುವರಿ ರಜೆ ಹಾಗೂ ಟ್ರೋಫಿ ನೀಡಿ ಗೌರವಿಸಿದೆ.
ಮಾಲ್ ನ ಪುರುಷರ ಪ್ರಾರ್ಥನಾ ಕೊಠಡಿಯಲ್ಲಿ ಈ ಬ್ಯಾಗ್ ಕ್ಲೀನರ್ ನಿಶಾಮ್ ಕುನ್ನತ್ ವಳಪ್ಪಿಲ್ ಅವರಿಗೆ ಸಿಕ್ಕಿತ್ತು.
ಸಂಸ್ಥೆಯ ವಾರ್ಷಿಕ ಕಾರ್ಯಕ್ರಮದಲ್ಲಿ ನಿಶಾಮ್ ಅವರನ್ನು ಸನ್ಮಾನಿಸಲಾಯಿತು. ಎರಡನೆ ಸ್ಥಾನವನ್ನು ವಿಮಾನ ನಿಲ್ದಾಣದಲ್ಲಿ ಸಿಕ್ಕಿದ ಹಣ ಮರಳಿಸಿದ ಲೋಡರ್ ಮೊಹಮ್ಮದ್ ಸಮರ್ ಶಾಹೀನ್ ಅವರಿಗೆ ನೀಡಲಾಯಿತು.
Next Story





