Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜುಬೈಲ್‌ ಅಗ್ನಿ ದುರಂತ: ಹಳೆಯಂಗಡಿ...

ಜುಬೈಲ್‌ ಅಗ್ನಿ ದುರಂತ: ಹಳೆಯಂಗಡಿ ನಿವಾಸಿ ನಿಧನ

ವಾರ್ತಾಭಾರತಿವಾರ್ತಾಭಾರತಿ17 April 2016 7:05 PM IST
share
ಜುಬೈಲ್‌ ಅಗ್ನಿ ದುರಂತ: ಹಳೆಯಂಗಡಿ ನಿವಾಸಿ ನಿಧನ

ಮುಲ್ಕಿ, ಎ.17: ಸೌದಿ ಅರೆಬಿಯಾದ ಜುಬೈಲ್‌ನ ಪೆಟ್ರೋ ಕೆಮಿಕಲ್ ಕಂಪೆನಿಯಲ್ಲಿ ಶನಿವಾರ ನಡೆದಿದ್ದ ಅಗ್ನಿ ದುರಂತದಲ್ಲಿ ಹಳೆಯಂಗಡಿ ನಿವಾಸಿ ಮುಹಮ್ಮದ್ ಅಶ್ರಫ್ (30) ಮೃತಪಟ್ಟಿರುವ ಬಗ್ಗೆ ದೃಢ ಪಟ್ಟಿದ್ದು ಕುಟುಂಬಿಕರು ಕಂಗಾಲಾಗಿದ್ದಾರೆ.

  ಸೌದಿ ಅರೆಬಿಯಾದ ಜುಬೈಲ್‌ನ ಪ್ಲಾನ್‌ಟೆಕ್ ಪೆಟ್ರೋ ಕೆಮಿಕಲ್ ಕಂಪೆನಿಯಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಪೈಪ್ ಟೆಕ್ನೀಷಿಯನ್ ಆಗಿ ಕಳೆದ 3 ವರ್ಷಗಳಿಂದ ಅರೆಕಾಲಿಕ ನೌಕರನಾಗಿ ಕೆಲಸ ನಿರ್ವಸುತ್ತಿದ್ದ ಅಶ್ರಫ್ ಕಳೆದ 11 ತಿಂಗಳ ಹಿಂದೆ ಖಾಯಂ ಆಗಿ ನಿಯುಕ್ತಿಗೊಂಡ ಕಾರಣ ಮನೆಗೆ ಬಂದು ತೆರಳಿದ್ದ ಎಂದು ತಿಳಿದು ಬಂದಿದೆ.

   ಸೌದಿ ಅರೆಬಿಯಾದ ಜುಬೈಲ್‌ನಲ್ಲಿ ಬೆಳಗ್ಗೆ 11.30 (ಭಾರತೀಯ ಕಾಲಮಾನ ಮಧ್ಯಾಹ್ನ 2) ರ ಸುಮಾರಿಗೆ ಪೆಟ್ರೋ ಕೆಮಿಕಲ್ ಕಂಪೆನಿಯ ರಿಯಾಕ್ಟರ್‌ನಲ್ಲಿ ಕೆಮಿಕಲ್ ಸೋರಿಕೆಯಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಕ್ಷಣಾರ್ಧದಲ್ಲಿ ರಿಯಾಕ್ಟರ್ ಬೆಂಕಿಯ ಕೆನ್ನಾಲಿಗೆಗ ಬಲಿಯಾಗಿ ಸ್ಫೋಟಗೊಂಡಿತು ಎಂದು ತಿಳಿದು ಬಂದಿದೆ. ರಿಯಾಕ್ಟರ್‌ನ ಪಕ್ಕದ ಕೊಠಡಿಯಲ್ಲಿ ಕೆಲಸ ನಿರ್ವಹಿಸುತ್ತಿದ ಅಶ್ರಫ್ ಬೆಂಕಿಯಿಂದ ಬಂದ ವಿಷ ಪೂರಿಯ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ.

  ಆತನ ಸಹೋದರ ಮುಹಮ್ಮದ್ ಶರೀಫ್ ಕೂಡಾ ಅದೇ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆತ ರಾತ್ರಿ ಪಾಳಿಯಲ್ಲಿ ಕೆಲ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೊದಲಿದ್ದ ಹೆಂಚಿನ ಮನೆಯನ್ನು ತೆರವುಗೊಳಿಸಿ ಹೊಸ ಮನೆ ಕಟ್ಟುವ ಸಲುವಾಗಿ ಕೆಲಸ ನಡೆಯುತ್ತಿದ್ದು, ಸದ್ಯಕ್ಕೆ ತಾಯಿ ಹಾಗೂ ಆತನ ಅತ್ತಿಗೆ ಸಮೀಪದ ಬಾಗಿಗೆ ಮನೆಯಲ್ಲಿ ತಂಗಿದ್ದಾರೆ.

  ಹಳೆಯಂಗಡಿ ಸಮೀಪದ ಸಾಗ್ ಪರಿಸದ ಪಂಡಿತ್ ಹೌಸ್ ನಿವಾಸಿಯಾಗಿರುವ ಮುಹಮ್ಮದ್ ಅಶ್ರಫ್, ದಿವಂಗತ ಡಿ.ಎಚ್. ಅಬ್ದುಲ್ ಕಾದರ್ ಎಂಬವರ 5 ಮಕ್ಕಳಲ್ಲಿ 2ನೇಯವನು. ಚಿಂಕ್ಕಂದಿನಿಂದಲೂ ಬಡತನದಿಂದ ಕಾಲಕಳೆದಿದ್ದ ಈತ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮುಗಿಸಿ ಕೂಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಳಿಕ ಹಿರಿಯಣ್ಣ ಮುಹಮ್ಮದ್ ಶರೀಫ್‌ನ ಸಹಾಯದಿಂದ ಸೌದಿ ಅರೆಬಿಯಾಕ್ಕೆ ತೆರಳಿ ಕಳೆದ ಮೂರು ವರ್ಷಗಳಿಂದ ಅರೆಕಾಲಿಕ ಕೆಸಲ ನಿರ್ವಹಿಸಿ ಕಳೆದ 11 ತಿಂಗಳ ಹಿಂದೆ ಕೆಲಸ ಖಾಯಂ ಆದ ಹಿನ್ನೆಲೆಯಲ್ಲಿ ಊರಿಗೆ ಬಂದು ಹೋಗಿದ್ದ ಎಂದು ತಿಳಿದು ಬಂದಿದೆ.

ಅಶ್ರಫ್ ಈದ್ ಆಚರಣೆಗೆ ಬರುವವನಿದ್ದ:
ಕಂಪೆನಿಯಲ್ಲಿ ವರ್ಷಕ್ಕೆ 35 ದಿನಗಳ ರಜೆ ದೊರೆಯುತ್ತದೆ. ಕಳೆದ 2015 ಮೇ ತಿಂಗಳಿನಲ್ಲಿ ಸೌದಿ ಅರೆಬಿಯಾಕ್ಕೆ ತೆರಳಿದ್ದ ಅಶ್ರಫ್, ಜೂನ್ ಅಂತ್ಯದಲ್ಲಿ ಊರಿಗೆ ಬಂದು ಮನೆಮಂದಿಯೊಂದಿಗೆ ಈದುಲ್ ಫಿತರ್ ಆಚರಿಸುವ ಬಗ್ಗೆ ಪ್ರಸ್ತಾಪಿಸಿದ್ದ ಎಂದು ಆತನ ಮನೆಮಂದಿ ಕಣ್ಣೀರಿಡುತ್ತಾರೆ.


ಮಗನ ಬರುವಿಕೆಗೆ ಕಾಯುತ್ತಿರುವ ತಾಯಿ:
ನಿನ್ನೆ ಸಂಜೆಯ ಸಮಯದಲ್ಲಿ ಘಟನೆಯ ನಡೆದಿರುವ ಬಗ್ಗೆ ಮಾತುಗಳು ಅಂತರ್ಜಾಲ ಮಾಧ್ಯಮಗಲಲ್ಲಿ ನಡೆಯುತ್ತಿತ್ತು. ಆದರೆ, ನಿನ್ನೆ ತಡ ರತ್ರಿ ಮನೆಮಂದಿಗೆ ಆಶ್ರಫ್ ಸಾವನ್ನಪ್ಪಿರುವ ಬಗ್ಗೆ ಆತನ ಅಣ್ಣ ತಿಳಿಸಿದ್ದು, ತಾಯಿ ಅಸ್ವಸ್ಥಗೊಂಡು ಅನ್ನಾಹಾರ ಬಿಟ್ಟು ಮಲಗಿದ್ದು, ಮಗನ ಬರುವಿಕೆಗೆ ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಹಳೆಯಂಗಡಿಯಾಧ್ಯಂತ ನೀರಸ ಮೌನ:
ಘಟನೆ ನಡೆದು ಹಳೆಯಂಗಡಿ ನಿವಾಸಿ ಅಶ್ರಫ್ ಮೃತಪಟ್ಟಿರುವ ಮಾಹಿತಿ ಹಬ್ಬುತ್ತಿಂದತೆಯೇ ಹಳೆಯಂಗಡಿಯಾಧ್ಯಂತ ನೀರಸ ಮೌನ ಮನೆ ಮಾಡಿದೆ. ರಾತ್ರಿಯಿಂದಲೇ ಕುಟುಂಬಿಕರು, ನೆರೆಹೊರೆಯವರು ಮನೆಯಲ್ಲಿ ಜಮಯಿಸಿ ಮನೆ ಮಂದಿಗೆ ಧೈರ್ಯತುಂಬುತ್ತಿದ್ದರು ಎಂದು ತಿಳಿದಉ ಬಂದಿದೆ.

ಸೌದಿಯಲ್ಲೆ ಮೃತದೇಹ ದಫನ:
ಭಾರತ ಸರಕಾರ ಹಾಗೂ ಸೌದಿ ಸರಕಾರಗಳು ಮಾತುಕತೆ ನಡೆಸಿ ಮೃತದೇಹ ಹಸ್ತಾಂತರಿಸುವ ಕಾರ್ಯಗಳು ನಡೆಯಲು ಸುಮಾರು 8-10 ದಿಗಳು ಬೇಕಾಗುವುದರಿಂದ ಮೃತದೇಹವನ್ನು ಸೌದಿ ಅರೆಬಿಯಾದಲ್ಲೆ ದಫನ ಮಾಡುವ ಬಗ್ಗೆ ಕುಟುಂಬಿಕರು ಚಿಂತನೆ ನಡೆಸಿದ್ದಾರೆ. ಮೂರು ದಿನಗಳ ಒಳಗಾಗಿ ಅಂತಿಮ ಸಂಸ್ಕಾರ ನಡೆಯಬಹುದು ಎಂದು ಅಂದಾಜಿಸಲಾಗಿದೆ.

ಅವಿಭಜಿತ ಜಿಲ್ಲೆಯ 800 ಮಂದಿ ಕಾರ್ಮಿಕರು:
ಸೌದಿ ಅರೆಬಿಯಾದ ಜುಬೈಲ್‌ನಲ್ಲಿ ಕಾರ್ಯನಿರ್ವಹಿಸುತ್ತಿತುವ ಪ್ಲಾನ್‌ಟೆಕ್ ಪೆಟ್ರೋ ಕೆಮಿಕಲ್ ಕಂಪೆನಿಯಲ್ಲಿ ಒಟ್ಟು 1800 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಸುಮಾರು 800 ಮಂದಿ ವಿವಿಧ ಹುದ್ದೆಗಳಲ್ಲಿ ಕೆಸ ನಿರ್ವಹಿಸುತ್ತಿದ್ದಾರೆ. ಕಷ್ಟದ ದಿನಗಳನ್ನು ಕಂಡಿದ್ದ ಆತ ಪ್ರಾಮಾಣಿಕನಾಗಿ ದುಡಿಯುತ್ತಾ, ಎಲ್ಲರೊಂದಿಗೂ ಬೆರೆತು ಜೀವಿಸುತ್ತಿದ್ದ ಎಂದು ಅಶ್ರಫ್‌ನ ರೂಂಮೆಟ್ ಹಾಗೂ ಸಹೋದ್ಯೋಗಿ ಅಬ್ದುಲ್ ಹಮೀದ್ ಪತ್ರಿಕೆಗೆ ಪ್ರಯಿಕ್ರಿಯಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X