ಸೌದಿ ಸಂಕಟ: ವಲಸಿಗ ದಂತ ವೈದ್ಯರ ಕಾಂಟ್ರಾಕ್ಟ್ ನವೀಕರಣ ಇಲ್ಲ

ಜಿದ್ದಾ, ಎ. 17: ಸೌದಿ ಅರೇಬಿಯದ ಸರಕಾರಿ ಆಸ್ಪತ್ರೆಗಳಲ್ಲಿರುವ ವಲಸಿಗ ದಂತವೈದ್ಯರ ಜಾಗದಲ್ಲಿ ಕೆಲಸ ಮಾಡಲು ಸೌದಿಯ ದಂತವೈದ್ಯರು ಸಿದ್ಧರಾಗಿದ್ದಾರೆ ಎಂದು ಸೌದಿ ಅರೇಬಿಯದ ಆರೋಗ್ಯ ಸಚಿವಾಲಯದ ಉದ್ಯೋಗ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ, ವಲಸಿಗ ದಂತವೈದ್ಯರ ಗುತ್ತಿಗೆಗಳನ್ನು ನವೀಕರಿಸದಂತೆ ಆರೋಗ್ಯ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿ ಅಯದ್ ಅಲ್-ಹಾರ್ತಿ ತಿಳಿಸಿದರು.
‘‘ಈ ನಿರ್ಧಾರವನ್ನು ದಂತವೈದ್ಯರಿಗೆ ತಿಳಿಸಲಾಗಿದೆ ಹಾಗೂ ಅವರು ಈ ಸಂಬಂಧದ ತಮ್ಮ ಗುತ್ತಿಗೆಗಳಿಗೆ ಅವರು ಸಹಿ ಹಾಕಿದ್ದಾರೆ’’ ಎಂದು ಅವರು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
Next Story





