ರಿಯಾದ್: ನೇಪಾಳ ರಾಯಭಾರ ಕಚೇರಿಯ ಮುಖ್ಯಸ್ಥನ ಮೇಲೆ ಚೂರಿಯಿಂದ ಹಲ್ಲೆ

ರಿಯಾದ್, ಎ. 17: ಸೌದಿ ಅರೇಬಿಯದ ರಿಯಾದ್‌ನಲ್ಲಿರುವ ನೇಪಾಳ ರಾಯಭಾರ ಕಚೇರಿಯ ಮುಖ್ಯಸ್ಥರ ಮೇಲೆ ದುಷ್ಕರ್ಮಿಯೊಬ್ಬ ಚೂರಿಯಿಂದ ದಾಳಿ ನಡೆಸಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.
ನೇಪಾಳ ರಾಯಭಾರ ಕಚೇರಿಯ ಮುಖ್ಯಸ್ಥ ಆನಂದ್ ಪ್ರಸಾದ್ ಶರ್ಮರ ಮೇಲೆ ದಾಳಿ ನಡೆದಿರುವುದನ್ನು ಖಚಿತಪಡಿಸಿದ ಮೂಲಗಳು, ಅವರಿಗೆ ಕಿಂಗ್ ಫೈಸಲ್ ಸ್ಪೆಶಲಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದವು.
ನೇಪಾಳ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದ ಓರ್ವ ನೇಪಾಳಿ ರಾಷ್ಟ್ರೀಯ ಶರ್ಮರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರರೋರ್ವರು ತಿಳಿಸಿದರು. ದಾಳಿಕಾರನು ಅನಧಿಕೃತ ಕಾರ್ಮಿಕನಾಗಿದ್ದು, ರಾಯಭಾರ ಕಚೇರಿಯಲ್ಲಿ ಆಶ್ರಯ ಕೋರಿದ್ದನು ಎಂದು ‘ಅರಬ್ ನ್ಯೂಸ್’ ಹೇಳಿದೆ.
ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Next Story





