ಅಧಿಕಾರಿಗಳ ಪಾಳೇಗಾರಿಕೆ ಖಂಡಿಸಿ ಎ.25ಕ್ಕೆ ಪ್ರತಿಭಟನೆ
ಚಿಕ್ಕಮಗಳೂರು, ಎ.17: ಆಡಳಿತದಲ್ಲಿ ಅಧಿಕಾರಿಗಳ ಪಾಳೇಗಾರಿಕೆ ೋರಣೆ ಖಂಡಿಸಿ ಎ.25 ರಂದು ಬೆಂಗಳೂರಿನ ಕಂದಾಯ ಭವನದ 8ನೆ ಮಹಡಿಯಲ್ಲಿರುವ ನೋಂದಣಿ ಕಚೆೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಎಂ.ಮಂಜುನಾಥ್ ತಿಳಿಸಿದ್ದಾರೆ.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಭೂದಾಖ ಲೆಗಳನ್ನು ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಸಮರ್ಪಕ ಮತ್ತು ಸಮರ್ಥವಾಗಿ ನಿರ್ವಹಿಸಲು 2007ರಲ್ಲಿ ಕಾವೇರಿ ಮತ್ತು ಭುಮಿ ತಂತ್ರಾಂಶ ಸೇರಿಸಲಾಯಿತು. ಉಪನೋಂದಣಿ ಕಚೆೇರಿಗಳಲ್ಲಿ ಜಮೀನು ಮಾರಾಟ, ವಹಿವಾಟು ನಡೆಯುವಾಗ ದಾಖಲೆಗಳ ನೈಜತೆಯನ್ನು ಭೂಮಿ ಗಣಕೀಕರಣದಿಂದ ಪರೀಕ್ಷಿಸಿ ತಾಳೆ ನೋಡಲು ಅವಕಾಶ ಕಲ್ಪಿಸಲಾಗಿದೆ. 2011 ರಿಂದ ಎಪಿಕ್ ಕಾರ್ಡ್ ಗುರುತು ಚೀಟಿ ಪಡೆದು ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಜಮೀನು ವಹಿವಾಟುಗಳಲ್ಲಿ ನಡೆಯುವ ಮೋಸದ ವಹಿವಾಟುಗಳನ್ನು ತಡೆಯುವುದು ಆಡಳಿತದ ಉದ್ದೇಶವಾಗಿದೆ ಎಂದು ದೂರಿದರು.
ಮೂಡಿಗೆರೆ ತಾಲೂಕು ಉಪನೋ ಂದಣಿ ಅಧಿಕಾರಿಗಳು ಮತ್ತು ಜಿಲ್ಲಾ ನೋಂದಣಿ ಅಧಿಕಾರಿಗಳು 1912ನೆ ಸಾಲಿನಿಂದ ಮೋಸದ ವಹಿವಾಟಿನಲ್ಲಿ ಭಾಗಿಯಾಗಿದ್ದಾರೆ. ಅನೇಕ ದಾಸ್ತಾವೇಜುಗಳನ್ನು ನೋಂದಣಿ ಮಾಡುವಾಗ ಗುರುತಿನ ಚೀಟಿ ಪಡೆದು ವ್ಯಕ್ತಿಯನ್ನು ಗುರುತಿಸಿಲ್ಲ. ಕಾವೇರಿ ಮತ್ತು ಭೂಮಿ ತಂತ್ರಾಂಶಗಳಿಗೆ ತಪ್ಪು ಮಾಹಿತಿ ನೀಡಿ ನೋಂದಣಿ ಮಾಡಲಾಗಿದೆ. ನೋಂದಣಿ ಕಾಯ್ದೆಯಲ್ಲಿ ಮುಖ್ಯವಾಗಿ ಪಾಲಿಸಬೇಕಾದ ಕಲಂ 21, 34, 58ರ ನಿಯಮಗಳನ್ನು ಪಾಲಿಸದೇ ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂದು ನುಡಿದರು.
ಅಧಿಕಾರಿಗಳಿಂದ ತೊಂದರೆಗೆ ಸಿಲುಕಿದ ರೈತರು ಜಿಲ್ಲಾಧಿಕಾರಿಗಳು ಮತ್ತು ಮಹಾಪರೀವೀಕ್ಷಕರಿಗೆ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ಶಿಸ್ತು ಕ್ರಮಕ್ಕೆ ಆದೇಶ ಮಾಡಿದ್ದಾರೆ.ನೋಂದಣಿ ಇಲಾಖೆ ಅಧಿಕಾರಿಗಳ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಲು ಮಹಾಪರಿವೀಕ್ಷಕರಿಗೆ ಶಿಫಾರಸ್ಸು ಮಾಡಲಾಗಿದೆ. ಆದರೆ ಮಹಾಪರಿವೀಕ್ಷಕರು ತಪ್ಪು ಮಾಡಿದ ತನ್ನ ಅಧಿಕಾರಿಗಳ ಮೇಲೆ ಯಾವುದೇ ಶಿಸ್ತುಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಮಾಡಿದ ತಪ್ಪುಗಳನ್ನು ಸಮಂಜಸ ಎಂದು ಮಾಹಿತಿ ನೀಡಿದ್ದಾರೆ.
ನೋಂದಣಿ ಇಲಾಖೆ ಅಧಿಕಾರಿ ಯೊಬ್ಬರು ದಸ್ತವೇಜು ಬರಹ ಗಾರ್ತಿ ಅವರ ಪತ್ರ ಬರೆಯುವ ಪರವಾನಿಗೆಯನ್ನು 2011ರಂದು ಗುರುತು ಚೀಟಿ ಪಡೆಯಲು ನೀಡಿದ ಆದೇಶವನ್ನು ಪಾಲನೆ ಮಾಡಿದ ಕಾರಣಕ್ಕೆ ಅಮಾನತು ಮಾಡಲಾಗಿದೆ. ಅಧಿಕಾರಿಗಳ ಪಾಳೇಗಾರಿಕೆ ಧೋರಣೆಯನ್ನು ಮತ್ತು ಭ್ರಷ್ಟ ಅಧಿಕಾರಿಗಳ ಬೆಂಗಾವಲಿಗೆ ನಿಂತಿರುವ ಇದೇ ಅಧಿಕಾರಿ ಧೋರಣೆಯನ್ನು ಉಗ್ರವಾಗಿ ಖಂಡಿಸಲಾಗುವುದು. ಮಹಾಪರಿವೀಕ್ಷಕರ ಕಚೆೇರಿಯ ವಿಷಯ ನಿರ್ವಾಹಕರು ತಯಾರಿಸಿದ ಟಿಪ್ಪಣಿಯಲ್ಲಿ ನಿಯಮಗಳ ಉಲ್ಲಂಘನೆಯಾಗಿರುವುದನ್ನು ಉಲ್ಲೇಖ ಮಾಡಲಾಗಿದೆ. ಮಹಾಪರಿವೀಕ್ಷಕರು ಈ ಟಿಪ್ಪಣಿಯನ್ನು ಅಲ್ಲಗೆಳೆದು ಆದೇಶಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಸಿ.ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎ.ಮಂಜುನಾಥ್, ಬಿ.ಎಸ್.ಲಕ್ಷ್ಮಣಗೌಡ, ಡಿ.ಆರ್.ಪುಟ್ಟಸ್ವಾಮಿಗೌಡ, ಎಚ್.ಜೆ.ರಾಜಶೇಖರಪ್ಪ, ಚಂದ್ರಶೇಖರ್, ರಘು ಹಳೇಕೆರೆ ಮತ್ತಿತರರಿದ್ದರು.







