ಎಸೆಸೆಲ್ಸಿ ವೌಲ್ಯಮಾಪನ ಹಾಜರಾಗಲು ಸಾಧ್ಯವಿಲ್ಲ ಎಂದು ಮನವಿ ನೀಡಿದ ಶಿಕ್ಷಕರು
ಶಿವಮೊಗ್ಗ,ಎ.17: ಎಪ್ರಿಲ್ 18ರಿಂದ ಎಸೆಸೆಲ್ಸಿ ಪರೀಕ್ಷಾ ವೌಲ್ಯ ಮಾಪನ ಕಾರ್ಯ ಪ್ರಾರಂಭವಾಗುತ್ತಿದ್ದು, ವೌಲ್ಯಮಾಪನ ಕಾರ್ಯಕ್ಕೆ ನಿಯುಕ್ತಿಗೊಳಿಸಲಾದ ಕೆಲವು ಶಿಕ್ಷಕರು ವಿವಿಧ ಕಾರಣಗಳಿಗಾಗಿ ವೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲವೆಂದು ಅಂಚೆ ಮೂಲಕ ಉಪನಿರ್ದೇಶಕರ ಕಚೇರಿಗೆ ಮನವಿ ಸಲ್ಲಿಸಿರುತ್ತಾರೆ.
ಎಸೆಸೆಲ್ಸಿ ಫಲಿತಾಂಶವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಒದಗಿಸ ಬೇಕಾಗಿರುವ ಹಿನ್ನೆಲೆಯಲ್ಲಿ ವೌಲ್ಯಮಾಪನ ಕಾರ್ಯಕ್ಕೆ ಆದೇಶ ಪಡೆದ ಶಿಕ್ಷಕರು ವೌಲ್ಯಮಾಪನ ಕಾರ್ಯಕ್ಕೆ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಕಾರಣ ಕಚೇರಿಯಲ್ಲಿ ಸ್ವೀಕೃತವಾದ ಎಲ್ಲ ಮನವಿಗಳನ್ನು ತಿರಸ್ಕರಿಸಲಾಗಿದ್ದು, ನಿಗದಿತ ದಿನಾಂಕದಂದು ಕಡ್ಡಾಯವಾಗಿ ನಿಮಗೆ ಸೂಚಿಸಲಾದ ವೌಲ್ಯಮಾಪನ ಕೇಂದ್ರದಲ್ಲಿ ಹಾಜರಾಗುವುದು. ಗೈರು ಹಾಜರಾದ ಶಿಕ್ಷಕರಿಗೆ ನಿಯಮಾನುಸಾರ ಶಿಸ್ತು ಕ್ರಮ ಜರಗಿಸಲಾಗುವುದು. ವೌಲ್ಯಮಾಪನ ಅವಧಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿರುವ ಶಿಕ್ಷಕರು ಮತ್ತು ಪ್ರಸೂತಿ ಕಾರಣಗಳಿಗೆ ವಿನಾಯಿತಿ ನೀಡಲಾಗಿದೆ. ಅಂತಹ ಶಿಕ್ಷಕರು ಸೂಕ್ತ ದಾಖಲೆಗಳನ್ನು ಒದಗಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಮನವಿ ಸಲ್ಲಿಸಿ ಅನುಮತಿ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





