ವಾಹನ ಹರಿದು ದಂಪತಿ ಸಾವು
ಬೆಂಗಳೂರು, ಎ. 17: ಬಿಸಿಲಿನ ಬೇಗೆ ಹೆಚ್ಚಾದ ಹಿನ್ನೆಲೆಯಲ್ಲಿ ಸೆಕೆಯಿಂದ ತಪ್ಪಿಸಿಕೊಳ್ಳಲು ಮನೆಯ ಹೊರಗೆ ಮಲಗಿದ್ದ ದಂಪತಿ ಮೇಲೆ ವಾಹನವೊಂದು ಹರಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ರಾಜಾನುಕುಂಟೆ ಬಳಿಯ ದಿಗ್ಗೂಡು ಗ್ರಾಮದ ರಾಮಕೃಷ್ಣ (54) ಮತ್ತು ರತ್ನಮ್ಮ (45) ಮೃತಪಟ್ಟವರು.
ಇವರು ಬಳ್ಳಾರಿ ಮೂಲದವರಾಗಿದ್ದು, ಕೂಲಿಯನ್ನು ಅರಸಿ ಬೆಂಗಳೂರಿಗೆ ಬಂದು ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೆಕೆಯಿಂದ ತಪ್ಪಿಸಿಕೊಳ್ಳಲು ದಂಪತಿ ಮನೆಯ ಹೊರಗೆ ಮಲ ಗಿದ್ದು ನಿನ್ನೆ ರಾತ್ರಿ ಅಪರಿಚಿತ ವಾಹನ ಹರಿದು ದಂಪತಿ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಾನುಕುಂಟೆ ಠಾಣಾ ಪೊಲೀಸರು ಈಗಾಗಲೇ ಸ್ಥಳೀಯ ನಿವಾಸಿ ಮುನಿಯಪ್ಪ ಎಂಬವರನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಕೈಗೊಂಡಿದ್ದಾರೆ.
Next Story





