ಇಂದಿನಿಂದ ಅಲೆವೂರಿನಲ್ಲಿ ನಾಟಕೋತ್ಸವ
ಉಡುಪಿ, ಎ.17: ಅಲೆವೂರಿನ ನೆಹರು ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್ ರಜತ ಸಂಭ್ರಮದದ ಅಂಗವಾಗಿ ಎ.18ರಿಂದ ಐದು ದಿನಗಳ ನಾಟಕೋತ್ಸವವು ಅಲೆವೂರಿನ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಹರೀಶ್ ಕಿಣಿ ಹಾಗೂ ರಜತ ಸಮಿತಿ ಅಧ್ಯಕ್ಷ ಮುರಲೀಧರ್ ಭಟ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಟಕೋತ್ಸವವನ್ನು ಎ.18ರ ಸಂಜೆ 7ಗಂಟೆಗೆ ಉದ್ಯಮಿ ಯು. ಮನೋಹರ ರಾವ್ ಉದ್ಘಾಟಿಸಲಿದ್ದಾರೆ. ಖ್ಯಾತ ಮನೋತಜ್ಞ ಡಾ.ಪಿ.ವಿ. ಭಂಡಾರಿ, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಡಾ.ಮಂಜರಿ ಚಂದ್ರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸ್ಯಾಕ್ಸೋಪೋನ್ ವಾದಕ ರಾಘವ ಸೇರಿಗಾರ್ ಉಪಸ್ಥಿತರಿರುವರು.
ರಾತ್ರಿ 8ಗಂಟೆಗೆ ಸುಮನಸಾ ಕೊಡವೂರುರಿಂದ ಚೇತನ್ ತುಮಕೂರು ನಿರ್ದೇಶನದಲ್ಲಿ ‘ದಾರಶಿಕೊ’ ನಾಟಕ ಪ್ರದರ್ಶನ ಗೊಳ್ಳಲಿದೆ. 19ರಂದು ಕಟಪಾಡಿ ರಂಜನಾ ಕಲಾವಿದರಿಂದ ‘ಅಮ್ಮ ರಿಟಾಯರ್ ಆಪೆರ್’ ತುಳು ನಾಟಕ, 20ರಂದು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯಿಂದ ‘ಪಿಲಿ ಪತ್ತಿ ಗಡಸ್’, 21ರಂದು ರಂಗಭೂಮಿ ಉಡುಪಿ ಇವರಿಂದ ‘ಕಾಲಚಕ್ರ’, 22ರಂದು ಚೈತನ್ಯ ಕಲಾವಿದರು ಬೈಲೂರು ಕಾರ್ಕಳ ಇವರಿಂದ ‘ಮೇ 22’ ನಾಟಕಗಳು ಪ್ರತಿದಿನ ರಾತ್ರಿ 7ರಿಂದ ಪ್ರದರ್ಶನಗೊಳ್ಳಲಿವೆ.





