ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಮಮತಾ ಗಟ್ಟಿ

ಕೊಣಾಜೆ, ಎ.17: ಕುರ್ನಾಡು ಜಿಪಂ ವ್ಯಾಪ್ತಿಯಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ತೇಕ ಕಡೆ ಇದ್ದು, ಇದರ ಶಾಶ್ವತ ಪರಿಹಾರಕ್ಕಾಗಿ ಹಂತ ಹಂತವಾಗಿ ಯೋಜನೆ ರೂಪಿಸಲಾಗುವುದು. ಮುಡಿಪು ಸಮೀಪದ ಸಾಂಬಾರ್‌ತೋಟ ಬಳಿಯ ಕಟ್ಟದಗುರಿ ಎಂಬಲ್ಲಿರುವ ಕೆರೆಯನ್ನು ಅಭಿವೃದ್ಧಿ ಪಡಿಸಿದರೆ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲ ಕರವಾಗಲಿದೆ ಎಂದು ಕುರ್ನಾಡು ಜಿಪಂ ಸದಸ್ಯೆ ಮಮತಾ ಗಟ್ಟಿ ಹೇಳಿದರು.
ಮುಡಿಪು ಸಮೀಪದ ಸಾಂಬಾರ್‌ತೋಟ ಬಳಿಯ ಕಟ್ಟದಗುರಿ ಎಂಬಲ್ಲಿರುವ ಕೆರೆಯ ಸಮಸ್ಯೆಯ ಬಗ್ಗೆ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅವರು ಮಾತನಾ ಡಿದರು.
ಈ ಸಂದರ್ಭ ಪಜೀರು ಗ್ರಾಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಎಪಿಎಂಸಿ ಸದಸ್ಯ ಉಮರ್ ಪಜೀರ್, ಗ್ರಾಪಂ ಸದಸ್ಯರಾದ ಇಮ್ತಿಯಾಝ್, ಫ್ಲೊರೀನಾ ಡಿಸೋಜ, ಮಾಜಿ ಅಧ್ಯಕ್ಷ ಮೂಸಾ ಹಾಜಿ, ಮೊಯ್ದಿನ್‌ಕುಂಞಿ ಸಿ.ಎಂ. ಮತ್ತಿತರರು ಉಪಸ್ಥಿತರಿದ್ದರು.
Next Story





