ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

ಕೊಣಾಜೆ, ಎ.17: ಪಜೀರು ಗ್ರಾಪಂ ವ್ಯಾಪ್ತಿಯ ಚೆನ್ನಯಕೋಡಿ ಎಂಬಲ್ಲಿ ಗ್ರಾಪಂನ ಉದ್ಯೋಗ ಖಾತರಿ ಹಾಗೂ ಇಲಾಖಾ ಅನುದಾನದ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಜಿಪಂ ಸದಸ್ಯೆ ಮಮತಾ ಗಟ್ಟಿ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮದ ಜನರು ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಿದರೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು. ಪಜೀರು ಗ್ರಾಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಉಮರ್ ಪಜೀರ್, ಮಾಜಿ ಅಧ್ಯಕ್ಷೆ ಫ್ಲೋಡಿ ಡಿಸೋಜ, ಮೂಸಾ ಹಾಜಿ, ಗ್ರಾಪಂ ಸದಸ್ಯರಾದ ಇಮ್ತಿಯಾಝ್, ರಫೀಕ್, ಮುಹಿಯ್ಯುದ್ದೀನ್ ಮಸೀದಿಯ ಅಧ್ಯಕ್ಷ ಅಬ್ದುಲ್ ಅಝೀಜ್ ಉಪಸ್ಥಿತರಿದ್ದರು.
Next Story





