ಗ್ರಾಪಂ ಉಪಚುನಾವಣೆ: ದ.ಕ.- ಶೇ.68.81, ಉಡುಪಿ- ಶೇ.60.46 ಮತದಾನ
ಮಂಗಳೂರು, ಎ.17: ದ.ಕ. ಜಿಪಂ ವ್ಯಾಪ್ತಿಗೆ ಸಂಬಂಧಿಸಿದಂತೆ ವಿವಿಧ ಕಾರಣಗಳಿಂದ ತೆರವಾಗಿದ್ದ ಒಟ್ಟು 31 ಗ್ರಾಮ ಪಂಚಾಯತ್ ಕ್ಷೇತ್ರಗಳಿಗೆ ಇಂದು ನಡೆದ ಉಪಚುನಾವಣೆಯಲ್ಲಿ ಶೇ.68.81 ಮತದಾರರು ಮತ ಚಲಾಯಿಸಿದ್ದಾರೆ.
ಜಿಲ್ಲಾದ್ಯಂತ ಇಂದು ಬೆಳಗ್ಗಿನಿಂದ ಸಂಜೆ 5ರವರೆಗೆ ಶಾಂತಿಯುತವಾಗಿ ನಡೆದ ಮತದಾನದಲ್ಲಿ 14,617 ಪುರುಷರು ಹಾಗೂ 14,792 ಮಹಿಳೆಯರು ಸೇರಿದಂತೆ ಒಟ್ಟು 29,409 ಮಂದಿ ಹಕ್ಕು ಚಲಾಯಿಸಿದ್ದಾರೆ.
ಮಂಗಳೂರು ತಾಲೂಕಿನ 9 ಗ್ರಾಪಂ ಸದಸ್ಯ ಕ್ಷೇತ್ರಗಳಲ್ಲಿ ಶೇ.62.90, ಬಂಟ್ವಾಳದ 8 ಗ್ರಾಪಂ ಕ್ಷೇತ್ರಗಳಲ್ಲಿ ಶೇ.68.14, ಬೆಳ್ತಂಗಡಿಯ 6 ಗ್ರಾಪಂ ಕ್ಷೇತ್ರಗಳಲ್ಲಿ ಶೇ.69.41, ಪುತ್ತೂರು ತಾಲೂಕಿನ 6 ಗ್ರಾಪಂ ಕ್ಷೇತ್ರಗಳಲ್ಲಿ ಶೇ. 61.06 ಹಾಗೂ ಸುಳ್ಯ ತಾಲೂಕಿನ 2 ಗ್ರಾಪಂ ಕ್ಷೇತ್ರಗಳಲ್ಲಿ ಶೇ.80.17 ಮತಗಳು ಚಲಾವಣೆಯಾಗಿವೆ. ಸುಳ್ಯ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಉಪ ಚುನಾವಣೆಗೆ ಕಳೆದ ಚುನಾವಣೆಯ ರೀತಿಯ ಉತ್ತಮ ಪ್ರತಿಕ್ರಿಯೆ ಕಂಡುಬರಲಿಲ್ಲ.
ಇದೆ ಸಂದರ್ಭದಲ್ಲಿ ಸುಳ್ಯ ಪಟ್ಟಣ ಪಂಚಾಯತ್ನ ಒಂದನೆ ವಾರ್ಡ್ಗೆ ನಡೆದ ಉಪ ಚುನಾವಣೆಯಲ್ಲಿ ಶೇ.83.67 ಮತ ಚಲಾವಣೆಯಾಗಿದೆ.
ಉಡುಪಿ ವರದಿ: ಉಡುಪಿ ಜಿಲ್ಲೆಯ 21 ಗ್ರಾಪಂಗಳ 28 ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಒಟ್ಟು 24,952 ಮತದಾರರ ಪೈಕಿ 15,087 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಶೇ.60.46 ಮತ ದಾನವಾಗಿದೆ.
ಒಟ್ಟು 11,943 ಪುರುಷ ಮತದಾರರ ಪೈಕಿ 6,810 ಮಂದಿ ಹಾಗೂ 13,009 ಮಹಿಳಾ ಮತದಾರರಲ್ಲಿ 8,277 ಮಂದಿ ಮತ ಚಲಾಯಿಸಿದ್ದಾರೆ. ಕುಂದಾಪುರ ತಾಲೂಕಿನ ಪಡುವರಿ(ಶೇ.66.45), ಗಂಗೊಳ್ಳಿ (ಶೇ.43.83), ಕಟ್ಬೆಲ್ತೂರು(ಶೇ.56.37), ಶಿರೂರು(ಶೇ.53.02), ನಾವುಂದ(ಶೇ.64.36), ನಾಡಾ(ಶೇ.65.30), ಚಿತ್ತೂರು(ಶೇ.74.29), ಕಿರಿಮಂಜೇಶ್ವರ(ಶೇ.55.17) ಗ್ರಾಪಂಗಳ ಒಟ್ಟು 11 ಸ್ಥಾನಗಳಲ್ಲಿ ಶೇ.58.55 ಮತ ಚಲಾವಣೆಯಾಗಿದೆ.
ಉಡುಪಿ ತಾಲೂಕಿನ ಬೊಮ್ಮರಬೆಟ್ಟು(ಶೇ.61.09), ಅಲೆವೂರು (ಶೇ.51.02), ಬೆಳ್ಳೆ(ಶೇ.60.09), ಶಿರ್ವ(ಶೇ.63.51), ಬಾರಕೂರು (ಶೇ.71.01), ವಡ್ಡರ್ಸೆ(ಶೇ.62.55), ಕೊಡಿಬೆಟ್ಟು(ಶೇ.67.99), ಉದ್ಯಾ ವರ(ಶೇ.62.93), ಹೆಜಮಾಡಿ(ಶೇ.63.57), ಹಂದಾಡಿ(ಶೇ.65.84) ಗ್ರಾಪಂಗಳ ಒಟ್ಟು 13 ಸ್ಥಾನಗಳಲ್ಲಿ ಶೇ.62.13 ಮತದಾನವಾಗಿದೆ.
ಕಾರ್ಕಳ ತಾಲೂಕಿನ ಪಳ್ಳಿ(ಶೇ.67.08), ಕುಚ್ಚೂರು(ಶೇ.51.66), ಮರ್ಣೆ(ಶೇ.71.09) ಗ್ರಾಪಂಗಳ 4 ಸ್ಥಾನಗಳಲ್ಲಿ ಶೇ.59.58ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.