ನಿಮ್ಮ ನೆಚ್ಚಿನ ಕ್ರಿಕೆಟ್ ತಾರೆಯರ ಶೈಕ್ಷಣಿಕ ಅರ್ಹತೆ ವಿವರ ಇಲ್ಲಿದೆ
ನಾವು ಕ್ರಿಕೆಟ್ ಆಟವನ್ನು ತೀರಾ ಗಂಭೀರವಾಗಿ ಅನುಸರಿಸುತ್ತೇವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಾಲ್ ಟೂ ಬಾಲ್ ವೀಕ್ಷಿಸುವ ಮಂದಿಗೂ ಕೊರತೆ ಇಲ್ಲ. ಆದರೆ ಬಹಳಷ್ಟು ಮಂದಿ ಕ್ರಿಕೆಟ್ ಪ್ರೇಮಿಗಳು ತಮ್ಮ ಫೇವರಿಟ್ ಆಟಗಾರರ ಶೈಕ್ಷಣಿಕ ಅರ್ಹತೆ ಬಗ್ಗೆ ತಿಳಿದುಕೊಂಡಿರಲಾರರು. ಇಲ್ಲಿದೆ ನೋಡಿ ಅಪರೂಪದ ವಿವರ.
ಎಂ.ಎಸ್.ಧೋನಿ: ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್; ಭಾರತ ಕ್ರಿಕೆಟ್ ತಂಡದ ನಾಯಕ. ಓದಿದ್ದು ಬಿಕಾಂ.
ಸಚಿನ್ ತೆಂಡೂಲ್ಕರ್: ಕ್ರಿಕೆಟ್ ದೇವರು ಎಂದೇ ಕರೆಯಲಾಗುವ ಸಚಿನ್ ತೆಂಡೂಲ್ಕರ್ 11ನೆ ವಯಸ್ಸಿನಿಂದಲೇ ಆಟದಲ್ಲಿ ತೊಡಗಿಸಿಕೊಂಡವರು. ಅವರು ಓದಿದ್ದು 12ನೆ ತರಗತಿವರೆಗೆ ಮಾತ್ರ.
ಯುವರಾಜ್ ಸಿಂಗ್: ಭಾರತ ಕ್ರಿಕೆಟ್ ತಂಡದ ಆಧಾರಸ್ತಂಭ, 6 ಬಾಲ್ನಲ್ಲಿ 6 ಸಿಕ್ಸರ್ ಸಿಡಿಸಿದ ಯುವಿ ಡಿಎವಿ ಶಾಲೆಯಲ್ಲಿ 12ನೆ ತರಗತಿ ಉತ್ತೀರ್ಣರಾಗಿದ್ದಾರೆ.
ರಾಹುಲ್ ದ್ರಾವಿಡ್: ಭಾರತ ಕ್ರಿಕೆಟ್ನ ಮಹಾಗೋಡೆ ಎನಿಸಿದ್ದ ರಾಹುಲ್ ದ್ರಾವಿಡ್ ಮಿಸ್ಟರ್ ಡಿಪಂಡೇಬಲ್ ಎಂದೇ ಪರಿಚಿತ. ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ಸೆಂಟ್ ಜೋಸೆಫ್ಸ್ ಕಾಲೇಜಿನಿಂದ ಇವರು ಪಡೆದಿದ್ದಾರೆ.
ಅನಿಲ್ ಕುಂಬ್ಳೆ: ಬಲಗೈ ಲೆಗ್ಸ್ಪಿನ್ನರ್, ಹೈಟೆಕ್ ಕೈಗಾರಿಕಾ ನಗರ ಬೆಂಗಳೂರಿನಲ್ಲಿ ಹುಟ್ಟಿ, ಪ್ರತಿಷ್ಠಿತ ಆರ್.ವಿ.ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ವಿರಾಟ್ ಕೊಹ್ಲಿ: ಭಾರತ ಕ್ರಿಕೆಟ್ನ ನ್ಯೂ ಟ್ರೆಂಡ್ ಸೆಟ್ಟರ್ ಎಂದೇ ಕರೆಯಲಾಗುವ ವಿರಾಟ್ ಕೊಹ್ಲಿ, ನವದೆಹಲಿಯಲ್ಲಿ 12ನೆ ತರಗತಿವರೆಗೂ ಓದಿದ್ದಾರೆ.
ಶಿಖರ್ ಧವನ್: ಭಾರತ ಕ್ರಿಕೆಟ್ ತಂಡದ ಗಬ್ಬರ್ ಎನಿಸಿಕೊಂಡಿರುವ ಧವನ್ ಓದಿದ್ದು 12ನೆ ತರಗತಿ.
ಝಹೀರ್ಖಾನ್: ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಝಹೀರ್ಖಾನ್ ಇಂಜಿನಿಯರಿಂಗ್ ಪದವಿ ಸೇರಿದ್ದರು. ಆದರೆ ದಿಢೀರ್ ಆಗಿ ಕ್ರಿಕೆಟ್ನಲ್ಲಿ ಅದೃಷ್ಟ ಖುಲಾಯಿಸಿದ್ದರಿಂದ ಇಂಜಿನಿಯರಿಂಗ್ ಪದವಿ ತೊರೆದರು.
ವಿವಿಎಸ್ ಲಕ್ಷ್ಮಣ್: ಭಾರತೀಯ ಕ್ರಿಕೆಟಿಗರ ಪೈಕಿ ಉತ್ತಮ ಶಿಕ್ಷಣ ಪಡೆದ ಆಟಗಾರರಲ್ಲೊಬ್ಬರಾದ ಲಕ್ಷ್ಮಣ್ ಎಂಬಿಬಿಎಸ್ ಪದವಿ ಪಡೆದು, ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
ವೀರೇಂದ್ರ ಸೆಹ್ವಾಗ್: ಸ್ಫೋಟಕ ಬ್ಯಾಟಿಂಗ್ ತಾರೆ ಸೆಹ್ವಾಗ್ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ಬಿಎ ಪದವೀಧರ.
ಗೌತಮ್ ಗಂಭೀರ್: ಕ್ಷೇತ್ರರಕ್ಷಣೆಯಲ್ಲಿ ಚುರುಕಿಗೆ ಹೆಸರಾದ ಗಂಭೀರ್, ಹಿಂದೂ ಕಾಲೇಜಿನ ಪದವೀಧರ.
ಸೌರವ್ ಗಂಗೂಲಿ: ದಾದಾ ಖ್ಯಾತಿಯ ಗಂಗೂಲಿ, ಸಂತ ಕ್ಸೇವಿಯರ್ ಕಾಲೇಜಿನ ಪದವೀಧರ.