ಸರಕಾರ ಹಾಗು ಶಿಕ್ಷಕರ ನಡುವೆ ವಿದ್ಯಾರ್ಥಿ ಅಪ್ಪಚ್ಚಿ !
ಕರ್ನಾಟಕದಲ್ಲಿ ಈಗ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಯನ್ನು ತಿದ್ದಬೇಕಾದ ಮೇಸ್ಟ್ರುಗಳು ಮುಷ್ಕರ ಹೂಡಿ ದೊಡ್ಡ ಸುದ್ದಿ ಮಾಡಿದ್ದಾರೆ. ಈ ಸುದ್ದಿಯಲ್ಲಿ ಸಮಾಜಕ್ಕೇನಾದರೂ ಹಿತ ಇದೆಯಾ? ಮಲ್ಯರಂತಹ ಉದ್ಯಮಿಗಳು, ಅಮಿತಾಭ್‌ರಂತಹ ಸೆಲೆಬ್ರಿಟಿಗಳು,ಸಾಕ್ಷಿ ಮಹಾರಾಜ್‌ರಂತಹ ರಾಜಕಾರಣಿಗಳು ಈ ದಿನಗಳಲ್ಲಿ ಏನಾದರೊಂದು ಸುದ್ದಿ ಮಾಡ್ತಿರುತ್ತಾರೆ. ಅದರಿಂದ ಸಮಾಜಕ್ಕೆ ಹಾನಿಯಲ್ಲದೆ ಉಪಕಾರ ಆಗಿದೆಯಾ? ಈ ಸಾಲಿಗೆ ಈಗ ಶಿಕ್ಷಕರೂ ಸೇರಿದ್ದಾರೆ! ಅದು ಕೂಡಾ ವಿದ್ಯಾರ್ಥಿಗಳ ಭವಿಷ್ಯವನ್ನು ಕಲ್ಲಿನ ಮೇಲಿಟ್ಟು.
ವ್ಯವಸ್ಥೆಯೆಂದ ಮೇಲೆ ಹೀಗೆಲ್ಲ ಇವರೆಲ್ಲ ಇದ್ದೇ ಇರ್ತಾರೆ ಪ್ಪೇನು? ಎನ್ನುವವರಿರಬಹುದು. ಅಲ್ಲ, ಇಲ್ಲಿ ಶಿಕ್ಷಕರು ಮಾತ್ರ ಮುಷ್ಕರ ಸತ್ಯಾಗ್ರಹ ಮಾಡುವುದಾ? ನೀರಿಗೆ ದಾರಿಗೆ ಹೋಗಿ ಹೋಗಿ ಬಾರಿಗೂ ಮುಷ್ಕರ ಮಾಡ್ತಾರಲ್ರಿ. ಹಾಗಿದ್ದರೆ ಮುಷ್ಕರ ಪ್ರತಿಭಟನೆ ಎಲ್ಲ ಹೊಟ್ಟೆ ಪಾಡು ಎಂದು ಜರಿದಂತಾದೀತು. ನಿಜಕ್ಕೂ ವ್ಯವಸ್ಥೆ ಎಂಬುದು ಸಮಾಜದ ಹಿತಕ್ಕಾಗಿ ಇರಬೇಕಾದ್ದು?. ಈ ಹೋರಾಟಗಳೆಲ್ಲ ಆಹಿತವನ್ನು ಕೇಳಲಿಕ್ಕಿರುವಂತಹದ್ದು. ಮೇಸ್ಟ್ರುಗಳನ್ನೆ ತಕ್ಕೊಳ್ಳಿ, ಅವರು ಸಮಾಜದ ಹಿತಕ್ಕಿರುವವರು. ಬಹಳ ಹಿಂದಿನ ಕಾಲದಿಂದಲೂ ಸಮಾಜದಲ್ಲಿರುವ ನಂಬಿಕೆ ಇದು. ಈಗ ಅವರು ಕೇವಲ ಅವರ ಹಿತಕ್ಕಾಗಿ ಪ್ರತಿಭಟನೆಗಿಳಿದಿದ್ದಾರೆ ಎಂಬುದು ವ್ಯವಸ್ಥೆಯದ್ದೇ ವಿಪರ್ಯಾಸ. ಯಾಕೆಂದ್ರೆ, ಪರೀಕ್ಷೆಯಲ್ಲಿ ಉತ್ತರ ಬರೆದು ಈ ಮೇಸ್ಟ್ರುಗಳು ತಿದ್ದುವುದನ್ನು ಕಾದು ಕುಳಿತಿರುವ ವಿದ್ಯಾರ್ಥಿಗಳ ಪಾಡೇನು?. ಒಂಥರಾ ಸೆಲೆಬ್ರಿಟಿಗಿರಿ ಇದು.
ಸೆಲೆಬ್ರಿಟಿಗಳು ಗಟ್ಟಿಯಾಗಿ ಕೆಮ್ಮಲಿ ಇಲ್ಲಿ ಸುದ್ದಿಯಾಗುತ್ತದೆ. ಈಗ ಮೇಸ್ಟ್ರುಗಳೂ ಸುಖಾಸುಮ್ಮನೆ ಸುದ್ದಿಯಾಗ್ತಿದ್ದಾರೆ. ವಿದ್ಯಾರ್ಥಿಗಳ ತಳಮಳ ಕಷ್ಟ ಸಂಕಟಗಳೋ ಅಯ್ಯಮ್ಮ ಗೊತ್ತಿಲ್ಲ. ಸಿನೆಮಾ ನಟ ನಾನಾಪಾಟೇಕರ್ ನಾನು ಪತ್ರಿಕೆಯನ್ನು ಓದುವುದಿಲ್ಲ ಎನ್ನುವುದು ಇದಕ್ಕೇ ಇರಬೇಕು. ಪತ್ರಿಕೆ ಓದದ್ದು ಅವರ ಸಿಲೆಬ್ರಿಟಿಗಿರಿ ಅಂತಲ್ಲ. ಮಹಾರಾಷ್ಟ್ರದಲ್ಲಿ ಬರದಲ್ಲಿ ಜನರು ಬಸವಳಿದಿರುವಾಗ " ಇಂದ್ರಾಣಿ ಮುಖರ್ಜಿ ಎಷ್ಟು ಮದುವೆ ಮಾಡಿದರು. ಎಲ್ಲಿ ಹೋದರು?" ಇವನ್ನೆಲ್ಲ ಮುಖಪುಟದಲ್ಲಿ ಓದಿ ಏನಾಗಬೇಕು ಎಂದು ಅವರು ಕೇಳುತ್ತಾರೆ. ಇದನ್ನು ಸಮಾಜದ ಹಿತವೆಂದಲ್ಲದೆ ಸಂಘರ್ಷ ಅನ್ನೋ ಹಾಗೇ ಇಲ್ಲ. ಈ ದೇಶದ ಭವಿಷ್ಯ ವಿದ್ಯಾರ್ಥಿಗಳು ಆಗಿರುವಂತೆ ರೈತರೂ ಕೂಡ. ಅವರಿಗೆ ಸಂಕಟ ಬಂದಾಗ ಎಲ್ಲ ಕಡೆಯಿಂದಲೂ ನೆರವಿನ ಮಹಾಪೂರ ಹರಿದು ಬರಬೇಕು. ಈಗ ಪಾಠ ಮಾಡುವ ಮೇಸ್ಟ್ರೇ ವಿದ್ಯಾರ್ಥಿಗಳ ಕಷ್ಟ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವಾಗ?ಇಂದಿನ ರಾಜಕೀಯ ಹೋಗು ಹೋಗು ಆತ್ಮಹತ್ಯೆ ಮಾಡಿಕೊ ಎನ್ನುವಷ್ಟು ಕೆಟ್ಟದಾದ್ದರಲ್ಲಿ ಅಚ್ಚರಿಯೇನಿದೆ? ಇಂದು ಕರ್ನಾಕದ ಸರಕಾರ ಮತ್ತು ಮೇಸ್ಟ್ರುಗಳ ನಡುವಿನ ಹಟಕ್ಕೆ ಈ ಮಾತನ್ನು ಜೋಡಿಸಿ ಅರ್ಥೈಸಿಕೊಳ್ಳಲು ಯತ್ನಿಸಿದರೆ ಸರಿಯಿರಬಹುದೇನೋ. ಇನ್ನೂ ಕರ್ನಾಟಕ ಸರಕಾರ ಸಂಬಳ ಹೆಚ್ಚಿಸುವ ವಿಚಾರ ಮಾಡಿಯೇ ಇಲ್ಲ. ಮೇಸ್ಟುಗಳು ಸತ್ಯಾಗ್ರಹದ ಚಾಪೆ ಬಿಟ್ಟು ಎದ್ದೇ ಇಲ್ಲ. ಯಾರು ಏನಾದರೇನು ಎಂದು ಎರಡೂ ಕಡೆಯವರಲ್ಲಿದೆ. ಸರಕಾರ ಅತ್ತ ಎಳೆಯುತ್ತಿದೆ. ಶಿಕ್ಷಕರು ಇತ್ತ ಜಗ್ಗುತ್ತಿದ್ದಾರೆ. ವಿದ್ಯಾರ್ಥಿ ಅಪ್ಪಚ್ಚಿ! ಇಲ್ಲಿ ಮಾಧ್ಯಮಗಳೋ ಸುಖ ಅನುಭವಿಸುತ್ತಿವೆ. ಈವತ್ತು ಬಹುತೇಕ ಮಾಧ್ಯಮಗಳು ಎಲ್ಲ ಸಮಸ್ಯೆ ಮುಖ್ಯಮಂತ್ರಿಯ ಕುರ್ಚಿಯಲ್ಲೇ ಇರುವಂತೆ ಬಿಂಬಿಸುತ್ತಿವೆ
ಸಮಸ್ಯೆ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಮಾತ್ರ ಇರುವುದೇ. ಕರ್ನಾಟಕದಲ್ಲಿ ಕೆಲವು ದಿನಗಳಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬಂದೆರಗಿದ್ದು ಕೃತಕಬರ. ಸಂಬಳ ಸಮಸ್ಯೆ ಹಿಂದೆಯೂ ಇತ್ತು ಈಗಲೂ ಇದೆ, ಬಹುಶಃ ಮುಂದೆಯೂ ಇರಬಹುದು. ವಿದ್ಯಾರ್ಥಿಗಳನ್ನು ಒತ್ತೆಯಾಳಗಿಟ್ಟು ರೊಕ್ಕ ಹೆಚ್ಚು ಎಣಿಸಲಿಕ್ಕಿಳಿದಿದ್ದಾರಲ್ಲ ಈ ಶಿಕ್ಷರು. ಇದು ಕ್ಷಮ್ಯವೇ? ನಿನ್ನೆ ಮೊನ್ನೆ ಕನ್ನಡೀಯತೆಗೆ ದೊಡ್ಡ ಧ್ವನಿಯಲ್ಲಿ ಕೂಗಾಡುವವರು ಎಲ್ಲಿದ್ದಾರೆ? ಅಲ್ಲ, ಎಲ್ಲಿದ್ದಾರೆ? ಕನ್ನಡ ಕನ್ನಡ ಎನ್ನುತ್ತ ಏದುಸಿರು ಬಿಡುವವ ನಾವು ನಮ್ಮ ವಿದ್ಯಾರ್ಥಿಗಳಿಗಾಗಿ ಧ್ವನಿಯಾಕೆ ಎಬ್ಬಿಸಬಾರದು. ಜಾತಿಗಾಗಿ ಪ್ರಾಣಿಗಳಿಗಾಗಿ ಕಂಬನಿ ಮಿಡಿಯುವವರೂ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಧ್ವನಿ ಸ್ವಲ್ಪವೂ ಕೇಳಿಸುತ್ತಿಲ್ಲವೇಕೆ? ಈಗ ಕರ್ನಾಟಕದಲ್ಲಿ ಎದುರಿಸುತ್ತಿರುವುದು ಕೃತಕ ಸಮಸ್ಯೆ..!
ಮಹಾರಾಷ್ಟ್ರದ ಬವಾದರೋ ಪ್ರಾಕೃತಿಕವಾದುದು. ಯಾವುದೇ ಸಮಸ್ಯೆಗೂ ಪರಿಹಾರವೆಂಬುದೊಂದು ಇದ್ದೇ ಇರುತ್ತದೆ. ಲಾತೂರ್‌ಗೆ ಟ್ರೈನ್‌ನಲ್ಲಿ ನೀರು ತಂದು ಈಗ ಸುರಿದಿಲ್ಲವೇ?. ಈಗ ಬಿಸಿಲಲ್ಲಿ ಕೂತ ಮೇಸ್ಟ್ರುಗಳ ಸಮಸ್ಯಗೂ ಹೀಗೆ ಒಂದಲ್ಲಒಂದು ಪರಿಹಾರ ಇದ್ದೇ ಇರುತ್ತೇ. ಉತ್ತರ ಪತ್ರಿಕೆ ತಿದ್ದದೆ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳಂತೆ ನಡೆಸುವುದು ಸರಿಯಾ? ಇತ್ತ ಕರ್ನಾಟಕ ಸರಕಾರ ಬಿಸಿಲಲ್ಲಿ ಕೂತದ್ದು ವಿದ್ಯಾರ್ಥಿಗಳಲ್ಲ ಎಂದು ಸಮ್ಮನಿದೆಯೇ?ಉತ್ತರ ಪತ್ರಿಕೆ ತಿದ್ದದೆ ಹೀಗೆಯೇ ದಿನಗಳು ಮುಂದೆಹೋದರೆ ಈಸರಕಾರ ವಿದ್ಯಾರ್ಥಿಗಳು ನಮ್ಮ ಭವಿಷ್ಯ ನಮಗೆ ಕೊಡಿ ಎಂದು ಅವರು ರಸ್ತೆಯಲ್ಲಿ ಕೂತರೆ ಏನು ಮಾಡುತ್ತದಂತೆ.
ಸರಕಾರ ಶಿಕ್ಷಕರ ಸತ್ಯಾಗ್ರಹವನ್ನು ಡೋಂಟ್ ಕೇರ್ ಮಾಡುತ್ತಿದೆ ಎನ್ನುವವರಿದ್ದಾರೆ. ಬಹುಶಃ ಸತ್ಯಾಗ್ರಹ ಕೂತು ಈ ಮೇಸ್ಟ್ರುಗಳು ಮಾಡಿದ್ದೂ ಅದೇ ಅಲ್ಲವೇ? ವಿದ್ಯಾರ್ಥಿಗಳ ಭವಿಷ್ಯವನ್ನು ಡೋಂಟ್ ಕೇರ್ ಮಾಡಿಲ್ಲವೇ? ಹೌದು ಈ ಡೋಂಟ್ ಕೇರ್‌ಗಳು ಸಮಾಜಹಿತದೊಂದಿಗೆ ಸಂಘರ್ಷಿಸುತ್ತವೆ. ನೋಡಿ, ಕರ್ನಾಟಕದಲ್ಲಿ ಮೇಸ್ಟ್ರುಗಳು ಸಂಬಳಕ್ಕೆ ಹಠ ಹಿಡಿದು ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ತಿದ್ದದೆ ಕೂತರಲ್ಲ. ಅರ್ಥ ಆಗದ ವೇತನ ಅಸಮಾನತೆ ಕರ್ನಾಟಕ ರಾಜ್ಯದೊಳಗೆಯೇ ಇದೆ ಎಂಬ ಸತ್ಯವನ್ನು ಅಡಿಗೆ ಹಾಕಿ ಕೂತದ್ದೆಂಬುದನ್ನು ಅವರು ಯೋಚಿಸಿದ್ದಾರೆಯೇ?. ಇಂದು ಖಾಸಗಿ ಕಾಲೇಜಿನಲ್ಲಿ ಪಾಠ ಹೇಳುವ ಮೇಸ್ಟ್ರ ಸಂಬಳಕ್ಕೂ ಸರಕಾರಿ ಮೇಸ್ಟ್ರ ಸಂಬಳಕ್ಕೂ ಅಜಗಜ ವ್ಯತ್ಯಾಸವಿದೆ. ಅವರಂತೆ ಇವರೂಕಲಿಸುವುದಾದ್ದರಿಂದ ಇವರಿಗೂ ಅವರಷ್ಟೇ ಸಂಬಳ ಸಿಗುವುದು ಬೇಡ್ವಾ? ಸರಿಯಾಗಿ ಹೇಳುವುದಿದ್ದರೆ ಖಾಸಗಿಯವರಿಗಿಂತ ಮೂರು ಪಟ್ಟು ಹೆಚ್ಚು ಸಂಬಳ ಈ ಸರಕಾರಿ ಮೇಸ್ಟ್ರುಗಳು ತಿಂತಾರೆ. ಈಗ ಅವರಿಗೆ ಅದೂ ಸಾಲುವುದಿಲ್ಲ. ಅಸಮಾನತೆ ಆಗಿದೆ! ಇದನ್ನೆ ವ್ಯವಸ್ಥೆ ಸಮಾಜದಹಿತದೊಂದಿಗೆ ಸಂಘರ್ಷಸುತ್ತಿದೆ ಎನ್ನುವುದು.
ವಿದ್ಯಾರ್ಥಿಗಳೂ ಮೇಸ್ಟ್ರು ಸೆಲೆಬ್ರಿಟಿ ಕ್ರೀಡಾ ಪಟು ಅವ ಇವ ಎಲ್ಲರೂ ಸಮಾಜದ ಸದಸ್ಯರು ಅವರಿಗೆ ಬೇರೇಯೇ ಕೋಡು ಇಲ್ಲ ಗೊತ್ತಾಯಿತಾ? ಈ ದೇಶದಲ್ಲಿ ಬಡ ಹಾಗಿದ್ದರೆ,ಸಮಾಜದ ಮುಖ್ಯ ಅಂಗವಾದ ಕಾರ್ಮಿಕನ ರೈತನ ಸಂಪಾದನೇ ಎಷ್ಟು. ಸಿಲೆಬ್ರಿಟಿಯ, ಕ್ರೀಡಾಪಟುವಿನ ಸಂಪಾದನೆ ಎಷ್ಟು? ಇಲ್ಲಿ ಅಸಮಾನತೆ ಇದೆ. ಅವರಂತೆ ಇವರೂ ಮನುಷ್ಯರು. ದೊಡ್ಡ ಸಂಬಳ ಪಡೆಯುವವರು ಅಥವಾ ದೊಡ್ಡ ಸಂಪಾದನೆ ಇರುವವರು ಸುಖವಾಗಿಯೂ ತಳಮಟ್ಟದ ಪ್ರಜೆ ನರಸದೃಶ್ಯವಾಗಿ ಬದುಕಬೇಕು ಎನ್ನುವುದು ಸರಿಯಲ್ಲ. ಈ ನಾಡಿನ ಬಡವರು. ರೈತ ಕೃಷಿ ಕೂಲಿಕಾರ್ಮಿಕರು ಆರ್ಥಿಕ ಸಮಾನತೆಗಾಘಿ ರಸ್ತೆಯಲ್ಲಿ ಕೂರಲು ಬಂದರೆ ಏನಾದೀತು ಎಂದು ಈಗ ಬಿಸಲಿಲ್ಲ ಕೂತ ಮೇಸ್ಟ್ರುಗಳು ಯೋಚಿಸಿದ್ದಾರೆಯೇ?. ಇವರಂತೆ ಅವರೂ ಕೂತರೆ ಸರಕಾರದ ಬಳಿ ಇರುವ ಉಪಾಯ ಅಶ್ರುವಾಯು ಸಿಡಿಸುವುದು.
ಹೌದು ಹೀಗೆಲ್ಲ ಯಾರೂ ಸಮಾಜದ ಹಿತದ ವಿರುದ್ಧ ವರ್ತಿಸಬಾರದು! ಹೀಗೆಯೇ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಇನ್ನೂ ಆಟ ಮುಂದುವರಿದರೆ ಕನ್ನಡ ಜನ ಸಹಿಸಲಿಕ್ಕಿಲ್ಲ.ಶಿವಮೊಗ್ಗದಲ್ಲಿ ಮೇಸ್ಟ್ರುಗಳ ವಿರುದ್ಧ ಕೆಲವರು ಕೆಲವರು ಪ್ರತಿಭಟಿಸಿದ್ದು ರಾಜ್ಯವನ್ನು ವ್ಯಾಪಿಸಬಹುದು. . ಸರಕಾರ ಮುಖ್ಯವಾಗಿ ಗಮನಿಸಬೇಕಾದದ್ದು ಮೇಸ್ಟ್ರುಗಳು ಖಾಸಗಿ ಇರಲಿ ಸರಕಾರಿ ಇರಲಿ ಎಲ್ಲರಿಗೂ ಒಂದೇ ರೀತಿ ಸಂಬಳ ಇರುವಂತೆ ನೋಡಿಕೊಳ್ಳಬೇಕು. ಖಾಸಗಿಯವರು ಇಪ್ಪತ್ತೈದು ಸಾವಿರ ಸಂಬಳ ಕೊಡುವುದಿದ್ದರೆ. ಸರಕಾರವೂ ಅಷ್ಟೇ ಕೊಡಲಿ. ಸರಕಾರ ಎಪ್ಪತ್ತೈದು ಸಾವಿರ ಸಂಬಳ ಕೊಡುವುದಿದ್ದರೆ ಖಾಸಗಿಯವರೂ ಅಷ್ಟೇ ಕೊಡಲಿ. ಆಗ ಅಸಮಾನತೆ ಕೂಗಾಡುವವರಿಗೆ ಸಮಾನತೆಯ ಅರ್ಥ ಎಷ್ಟು ದುಬಾರಿಯಾದದ್ದು ಎಂದು ಅರ್ಥವಾಗಿರುತ್ತದೆ. ಅಲ್ಲ ವಿದ್ಯಾರ್ಥಿಗಳೊಂದಿಗೆ ಆಟಕ್ಕಿಳಿದವರನ್ನು ಇನ್ನು ಹೇಗೆ ಹೇಳಬೇಕು? ರೈತರ ಜನಸಾಮಾನ್ಯರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ತೋರಿಸುವ ಈ ಉದ್ಯಮಿಗಿರಿ ಸಿಲೆಬ್ರಿಟಿತನಕ್ಕೆ ಧಿಕ್ಕಾರವಿರಲಿ. ಶೀಘ್ರ ಪಿಯು ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ತಿದ್ದುವಂತಾಗಬೇಕು. ಈ ಪ್ರಕ್ರಿಯೆಗೆ ಸರಕಾರು ಉಪಾಯ ಕಂಡು ಹಿಡಿಯಬೇಕು. ಇನೂ ವಿಳಂಬವಾದರೆ ಸಮಾಜದ ಸಹನೆಯ ಕಟ್ಟೆ ಒಡೆಯಬಹುದು ಎಚ್ಚರ!







