Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ‘ಇನ್ಶಾ ಅಲ್ಲಾಹ್’ ಎಂದು ಹೇಳಿದ್ದೇ...

‘ಇನ್ಶಾ ಅಲ್ಲಾಹ್’ ಎಂದು ಹೇಳಿದ್ದೇ ಅಪರಾಧ!

ಮುಸ್ಲಿಂ ವಿದ್ಯಾರ್ಥಿಯನ್ನು ವಿಮಾನದಿಂದ ಕೆಳಗಿಳಿಸಿ ವಿಚಾರಣೆ

ವಾರ್ತಾಭಾರತಿವಾರ್ತಾಭಾರತಿ18 April 2016 3:01 PM IST
share
‘ಇನ್ಶಾ ಅಲ್ಲಾಹ್’ ಎಂದು ಹೇಳಿದ್ದೇ ಅಪರಾಧ!

ವಾಶಿಂಗ್ಟನ್, ಎ. 18: ಅಮೆರಿಕದ ಲಾಸ್ ಏಂಜಲಿಸ್‌ನಿಂದ ಓಕ್‌ಲ್ಯಾಂಡ್‌ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ವಿದ್ಯಾರ್ಥಿಯೊಬ್ಬರು ತನ್ನ ಮಾವನೊಂದಿಗೆ ಫೋನ್‌ನಲ್ಲಿ ಅರೇಬಿಕ್ ಭಾಷೆಯಲ್ಲಿ ಮಾತನಾಡಿದರು. ಅಷ್ಟೇ ಸಾಕಾಯಿತು, ಅವರನ್ನು ‘ಸೌತ್‌ವೆಸ್ಟ್’ ವಿಮಾನದಿಂದ ಕೆಳಗಿಳಿಸಲಾಯಿತು ಹಾಗೂ ಬಳಿಕ ಎಫ್‌ಬಿಐ ಅವರನ್ನು ವಿಚಾರಣೆಗೂ ಒಳಪಡಿಸಿತು.

ವಿಚಾರಣೆಯ ಬಳಿಕ ಪರಿಸ್ಥಿತಿ ತಿಳಿಯಾಯಿತಾದರೂ, ವಿಮಾನಯಾನ ಕಂಪೆನಿ ತನ್ನ ಕ್ಷಮೆ ಕೋರಬೇಕು ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ 26 ವರ್ಷದ ವಿದ್ಯಾರ್ಥಿ ಖೈರುಲ್ದೀನ್ ಮಖ್‌ಝೂಮಿ ಪಟ್ಟುಹಿಡಿದಿದ್ದಾರೆ.

ಎಪ್ರಿಲ್ 6ರಂದು ನಡೆದ ಘಟನೆ ಆರಂಭವಾಗಿದ್ದು ಹೀಗೆ: ವಿಮಾನ ಏರಿದ ಬಳಿಕ ಮಖ್‌ಝೂಮಿ ಬಗ್ದಾದ್‌ನಲ್ಲಿರುವ ತನ್ನ ಮಾವನೊಂದಿಗೆ ಮಾತನಾಡಲು ಬಯಸಿದರು. ಈ ಘಟನೆ ನಡೆಯುವುದಕ್ಕಿಂತ ಒಂದು ದಿನ ಮೊದಲು ಮಖ್‌ಝೂಮಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಜೊತೆ ರಾತ್ರಿ ಊಟ ಮಾಡಿದ್ದರು. ಅದರ ಬಗ್ಗೆ ಅವರು ತನ್ನ ಮಾವನಿಗೆ ಫೋನ್‌ನಲ್ಲಿ ವಿವರಿಸುತ್ತಿದ್ದರು.

‘‘ನಾನು ಮಾವನಿಗೆ ಫೋನ್ ಮಾಡಿ ಬಾನ್ ಕಿ ಮೂನ್ ಜೊತೆ ಊಟ ಮಾಡಿದ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೆ. ನಾನು ಓಕ್‌ಲ್ಯಾಂಡ್ ತಲುಪಿದ ಬಳಿಕ ಕರೆ ಮಾಡುವಂತೆ ಮಾವ ನನಗೆ ಸೂಚಿಸಿದರು. ಅದಕ್ಕೆ ನಾನು, ‘‘ಇನ್ಶಾ ಅಲ್ಲಾ... ಇನ್ಶಾ ಅಲ್ಲಾ.. ನಾನು ಅಲ್ಲಿಗೆ ತಲುಪಿದ ಬಳಿಕ ಕರೆ ಮಾಡುತ್ತೇನೆ ಎಂದೆ. ನಮ್ಮ ಸಂಭಾಷಣೆಯ ವೇಳೆ ಮಹಿಳೆಯೊಬ್ಬರು ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು’’ ಎಂದು ಮಖ್‌ಝೂಮಿ ತಿಳಿಸಿದರು.

ಆ ಮಹಿಳೆ ಒಮ್ಮೆಲೇ ವಿಮಾನದಿಂದ ಇಳಿದು ಹೋದರು. ಪರಿಸ್ಥಿತಿ ತಕ್ಷಣ ಬದಲಾಯಿತು.

‘‘ಎರಡು ನಿಮಿಷಗಳಲ್ಲಿ ಓರ್ವ ವ್ಯಕ್ತಿ ಪೊಲೀಸ್ ಅಧಿಕಾರಿಗಳೊಂದಿಗೆ ಬಂದನು ಹಾಗೂ ನನ್ನನ್ನು ವಿಮಾನದಿಂದ ಕೆಳಗಿಳಿಯುವಂತೆ ಸೂಚಿಸಿದನು’’ ಎಂದರು.

ದೌರ್ಜನ್ಯಕ್ಕೀಡಾದ ಅನುಭವ

‘‘ನನ್ನನ್ನು ವಿಮಾನದಿಂದ ಎಳೆದುಕೊಂಡು ಬಂದ ವ್ಯಕ್ತಿ ಆಕ್ರಮಣಕಾರಿ ಶೈಲಿಯಲ್ಲಿ ನನ್ನೊಂದಿಗೆ ವರ್ತಿಸಿದನು. ಆತ ನನ್ನಲ್ಲಿ ಅರೇಬಿಕ್‌ನಲ್ಲಿ ಮಾತನಾಡಲು ಯತ್ನಿಸಿದ. ಆದರೆ, ನನಗೆ ಆತನ ಅರೇಬಿಕ್ ಅರ್ಥವಾಗಲಿಲ್ಲ. ಹಾಗಾಗಿ, ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ನಾನು ಅವನಿಗೆ ಹೇಳಿದೆ’’ ಎಂದು ಮಖ್‌ಝೂಮಿ ಹೇಳಿದರು.

‘‘ನನ್ನ ಮೇಲೆ ದೌರ್ಜನ್ಯ ನಡೆಸಿದ ಅನುಭವ ನನಗಾಯಿತು. ನನಗೆ ಹೆದರಿಕೆಯಾಯಿತು. ಅವನು ಕೇಳಿದನು, ‘ಫೋನ್‌ನಲ್ಲಿ ನೀನು ಗಂಭೀರವಾಗಿ ಮಾತನಾಡುತ್ತಿದ್ದೆ. ನೀನು ಯಾರೊಂದಿಗೆ ಮಾತನಾಡುತ್ತಿದ್ದೆ? ಎಂದು ಆತ ಕೇಳಿದನು’’ ಎಂದರು.

ತಾನು ಮಾವನೊಂದಿಗೆ ಮಾತನಾಡುತ್ತಿದ್ದೆ ಎಂದು ಉತ್ತರಿಸಿದ ಮಖ್‌ಝೂಮಿ, ಬಾನ್ ಕಿ ಮೂನ್ ಜೊತೆಗೆ ಊಟ ಮಾಡುವ ಚಿತ್ರವನ್ನು ತೋರಿಸಿದರು.

‘‘ಅದಕ್ಕೆ ಆ ವ್ಯಕ್ತಿಯು, ‘ನೀನು ಅರೇಬಿಕ್‌ನಲ್ಲಿ ಯಾಕೆ ಮಾತನಾಡಲು ಹೋದೆ? ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ನಿನಗೆ ಗೊತ್ತಿಲ್ಲವೇ?’ ಎಂದು ಪ್ರಶ್ನಿಸಿದನು’’ ಎಂದು ಅವರು ಹೇಳಿದರು.

ಬಳಿಕ ಎಫ್‌ಬಿಐ ಏಜಂಟ್‌ಗಳು ಅವರನ್ನು ಹೊರಗೆ ಕರೆದುಕೊಂಡು ಹೋದರು. ಓರ್ವ ಮಹಿಳಾ ಎಫ್‌ಬಿಐ ಏಜಂಟ್ ಹೇಳಿದ ಮಾತು ಕೇಳಿ ತನಗೆ ಆಶ್ಚರ್ಯವಾಯಿತು ಎಂದು ವಿದ್ಯಾರ್ಥಿ ಹೇಳಿದರು. ‘‘ನೀನು ಮಾರ್ಟರ್ (ಹುತಾತ್ಮ) ಎಂದು ಹೇಳಿದೆ. ಅದರ ಬಗ್ಗೆ ನೀನು ನಮಗೆ ಪ್ರಾಮಾಣಿಕವಾಗಿ ವಿವರಣೆ ನೀಡಬೇಕು. ಮಾರ್ಟರ್‌ಗಳ ಬಗ್ಗೆ ನಿನಗೆ ಏನೆಲ್ಲ ಗೊತ್ತೋ ಅದೆಲ್ಲವನ್ನೂ ಹೇಳು ಎಂದು ಅವರು ಹೇಳಿದರು’’ ಎಂದರು.

‘‘ಅಂಥ ಪದವನ್ನು ನಾನು ಹೇಳಿಯೇ ಇಲ್ಲ. ನಾನು ‘ಇನ್ಶಾ ಅಲ್ಲಾ’ ಎಂದಷ್ಟೇ ಹೇಳಿದೆ ಎಂದು ಅದಕ್ಕೆ ಉತ್ತರಿಸಿದೆ’’ ಎಂದು ವಿದ್ಯಾರ್ಥಿ ನುಡಿದರು.

ವಿಚಾರಣೆ ಅಲ್ಲಿಗೆ ಮುಗಿಯಿತು.

ವಿಮಾನ ಕಂಪೆನಿ ಟಿಕೆಟ್ ದರ ವಾಪಸ್ ನೀಡಿತು

ಸೌತ್‌ವೆಸ್ಟ್ ವಿಮಾನ ಕಂಪೆನಿ ಮಖ್‌ಝೂಮಿಯನ್ನು ಕರೆದುಕೊಂಡು ಹೋಗಲಿಲ್ಲ. ಆದರೆ, ಅವರ ಟಿಕೆಟ್ ಹಣವನ್ನು ವಾಪಸ್ ನೀಡಿತು. ಬಳಿಕ ಅವರು ಬೇರೆ ವಿಮಾನದಲ್ಲಿ ಓಕ್‌ಲ್ಯಾಂಡ್ ತಲುಪಬೇಕಾಯಿತು.

ವೆಸ್ಟ್‌ಲ್ಯಾಂಡ್ ಹೇಳಿಕೆಯೊಂದನ್ನು ನೀಡಿ, ‘‘ನಾವು ಯಾರ ವಿರುದ್ಧವೂ ತಾರತಮ್ಯ ಮಾಡುವುದಿಲ್ಲ. ಈ ಪ್ರಯಾಣಿಕನ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರ ನಿಯಮಾವಳಿಗಳಿಗೆ ಅನುಸಾರವಾಗಿತ್ತು’’ ಎಂದು ಹೇಳಿದೆ.

ಮಖ್‌ಝೂಮಿಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಹೆಚ್ಚಿನ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಎಫ್‌ಬಿಐ ವಕ್ತಾರೆಯೊಬ್ಬರು ತಿಳಿಸಿದರು.

ಅದೇ ವೇಳೆ, ತನಗೆ ಈವರೆಗೆ ಸೌತ್‌ವೆಸ್ಟ್‌ನಿಂದ ಯಾವುದೇ ಕ್ಷಮಾಪಣೆ ಬಂದಿಲ್ಲ ಎಂದು ಮಖ್‌ಝೂಮಿ ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X