ನಿಮ್ಮ ಹೊಟ್ಟೆಯ ಶೇಪ್ ಕಾಪಾಡಿಕೊಳ್ಳಲು ಇಲ್ಲಿವೆ 5 ವಿಧಾನಗಳು

1. ಅಧಿಕ ಪ್ರಯಾಸದ ಕಾರ್ಡಿಯೋ ವರ್ಕೌಟ್ ಅನ್ನು ತೂಕ ಕಳೆದುಕೊಳ್ಳಲು ಪ್ರಯತ್ನಿಸಬಹುದು. ಸ್ವಲ್ಪ ಸಮಯ ವೇಗದ ಓಟ, ನಡಿಗೆ, ಹಾರುವುದು, ಪುಷಪ್ ಮೊದಲಾದವು ಅತೀ ಪ್ರಯಾಸದ ವ್ಯಾಯಾಮಗಳು.
2. ತೂಕದ ತರಬೇತಿ ಕೂಡ ನೆರವಾಗಲಿದೆ. ಹೊಟ್ಟೆಯ ಭಾಗವನ್ನು ವೇಗವಾಗಿ ಶೇಪ್‌ಗೆ ತರಲು ಕಾಲು ಮತ್ತು ಹೊಟ್ಟೆಯ ವ್ಯಾಯಾಮಕ್ಕೆ ಗಮನ ಕೊಡಬೇಕು. ಸ್ಕ್ವಾಟ್ಸ್ ಮತ್ತು ಡೆಡ್‌ಲಿಫ್ಟ್‌ಗಳು ಅತೀ ಪರಿಣಾಮಕಾರಿ ವ್ಯಾಯಾಮಗಳು. ಇದರ ಜೊತೆಗೆ ಕ್ರಂಚ್‌ಗಳನ್ನೂ ಮಾಡಬಹುದು.
3. ಸಂಸ್ಕರಿತ ಆಹಾರ ಬೇಡ, ಫೈಬರ್ ಅಂಶವಿರುವ ಆಹಾರ ಸೇವಿಸಿ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಶಿಸ್ತಿನ ಆಹಾರ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ. ಶಿಸ್ತಿನ ಆಹಾರವೆಂದರೆ ಹಸಿವಿನಿಂದ ಇರುವುದು ಅಥವ ಊಟ ತಪ್ಪಿಸುವುದಲ್ಲ. ಅತಿಯಾದ ಕ್ಯಾಲರಿಗಳು ಇರುವ ಸಂಸ್ಕರಿತ ಆಹಾರ ಮತ್ತು ಕಾರ್ಬೋನೇಟೆಡ್ ಪಾನೀಯಗಳನ್ನು ಬಿಡಬೇಕು. ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಹೊಟ್ಟೆ ಕೊಬ್ಬು ತ್ಯಜಿಸಲು ಫೈಬರ್ ಅಧಿಕವಿರುವ ಆಹಾರ ಸೇವಿಸಿ. ಫೈಬರ್ ಹೊಟ್ಟೆ ಹಸಿವನ್ನು ಕಡಿಮೆ ಮಾಡುತ್ತದೆ.
4. ತೂಕ ಕಡಿಮೆ ಮಾಡಲು ಮತ್ತೊಂದು ಶಿಫಾರಸ್ಸು ಎಂದರೆ ಆಹಾರದಲ್ಲಿ ಸೂಪರ್‌ಫುಡ್ ಸೇವನೆ. ಸೂಪರ್‌ಫುಡ್ ಎಂದರೆ ಪೌಷ್ಠಿಕಾಂಶದ ಮತ್ತು ವೈದ್ಯಕೀಯ ಲಾಭ ಇರುವ ಆಹಾರ. ಅವು ಹೊಟ್ಟೆಯ ಕೊಬ್ಬನ್ನು ಇಳಿಸಲು ನೆರವಾಗುತ್ತವೆ. ಓಟ್ಸ್ ಮೊದಲಾದ ಇಡಿ ಧಾನ್ಯಗಳು ಫೈಬರ್ ತುಂಬಿಕೊಂಡಿರುತ್ತವೆ. ಬ್ಲುಬೆರ್ರಿಗಳು ಮೊದಲಾದ ಹಣ್ಣುಗಳು ಮುಪ್ಪು ನಿಧಾನಿಸಲು ನೆರವಾಗುತ್ತವೆ. ಬ್ರುಕೊಲಿ, ಗ್ರೇಪ್‌ಫ್ರುಟ್, ಕಿತ್ತಳೆ ಮೊದಲಾದವು ಅಗತ್ಯ ಪೌಷ್ಠಿಕತೆ ಹೊಂದಿರುತ್ತವೆ.
5. ಸಾಕಷ್ಟು ನೀರು ಕುಡಿಯಿರಿ. ನೀರು ಟಾಕ್ಸಿನ್‌ಗಳನ್ನು ದೇಹದಿಂದ ಹೊರಗೆ ಹಾಕಿ ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಸಾಕಷ್ಟು ನೀರು ಕುಡಿಯಬೇಕು. ಶೌಚ ಅಧಿಕವಾದರೂ ಸಮಸ್ಯೆಯಿಲ್ಲ. ನೀರಿನ ಪ್ರಮಾಣ ದೇಹದಲ್ಲಿ ಚೆನ್ನಾಗಿರಬೇಕು. ಹೊಟ್ಟೆಯ ಸುತ್ತ ಕೊಬ್ಬು ಬೆಳೆದುಕೊಂಡಿದ್ದರೆ ಈ ಸಲಹೆಗಳನ್ನು ಪಾಲಿಸಿ ಉತ್ತಮ ಆಹಾರ ಮತ್ತು ಜೀವನಶೈಲಿ ರೂಢಿಸಿಕೊಳ್ಳಿ.







