ನ್ಯಾಯಾಧೀಶರ ಸ್ನೇಹವನ್ನು ಬಳಸಿ ವೈದ್ಯರು ವರ್ಗಾವಣೆ ರದ್ದು ಪಡಿಸುತ್ತಿದ್ದಾರೆ: ಸಾರಿಗೆ ಸಚಿವ ನಿತಿನ್ ಗಡ್ಕರಿ

ನಾಗಪುರ, ಎಪ್ರಿಲ್, 18: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ರವಿವಾರ "ಕೆಲವು ವೈದ್ಯರು ಕೆಳ ಮತ್ತು ಮೇಲಿನ ನ್ಯಾಯ್ಯಾಲಯದ ನ್ಯಾಯಾಧೀಶರೊಂದಿಗೆ ಒಳ್ಳೆಯ ಸಂಬಂಧ ಹೊಂದಿ ತಮ್ಮ ವರ್ಗಾವಣೆಯನ್ನು ರದ್ದು ಪಡಿಸುತ್ತಿದ್ದಾರೆ" ಎಂದು ಹೇಳಿರುವುದಾಗಿ ವರದಿಯಾಗಿದೆ. ಮಹಾರಾಷ್ಟ್ರ ಮೆಡಿಕಲ್ ಕೌನ್ಸಿಲ್‌ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಾ ಗಡ್ಕರಿ ಮೆಡಿಕಲ್ ಕಾಲೇಜ್‌ನ ಕಾರ್ಯಕಲಾಪಗಳಿಗೆ ನ್ಯಾಯಾಂಗ ಅಡ್ಡಿ ಪಡಿಸುತ್ತಿದೆ ಎಂದು ಹೇಳಿದ್ದಾರೆ. ಕೆಲವು ವೈದ್ಯರು ಜಿಲ್ಲಾ ಮತ್ತು ಹೈಕೋರ್ಟ್‌ಗಳಲ್ಲಿ ಗೆಳೆಯರಿದ್ದಾರೆ. ಅವರಿಂದ ತಮ್ಮ ವರ್ಗಾವಣೆಯನ್ನು ತಡೆಯುತ್ತಿದ್ದಾರೆ. ಹೀಗೆ ಕೋರ್ಟ್ ಮೆಡಿಕಲ್ ಕಾಲೇಜ್‌ಗಳ ಕೆಲಸದಲ್ಲಿ ಅಡ್ಡಿಯಾಗುತ್ತಿದೆ. ಜೊತೆಗೆಸರಕಾರದ ಕೆಲಸವನ್ನೂ ಟೀಕಿಸುತ್ತಿದೆ. ಇದು ಸರಿಯಾದ ವಿಚಾರವಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಹೈಕೋರ್ಟ್ ಮೆಡಿಕಲ್ ಕಾಲೇಜನ್ನು ನಿರ್ವಹಿಸಲು ಸಾಧ್ಯವಿಲ್ಲ. ನ್ಯಾಯಾಂಗ ಮತ್ತು ಸರಕಾರಿ ಆಡಳಿತ ತನ್ನ ಸೀಮೆಯಲ್ಲಿಯೇ ಕೆಲಸ ಮಾಡಬೇಕು ಎಂದ ಅವರು ಇಂಡಿಯನ್ ಮೆಡಿಕಲ್ ಕೌನ್ಸಿಲ್‌ನ್ನು ಟೀಕಿಸಲು ಮರೆಯಲಿಲ್ಲ. "ಭಾರತದಲ್ಲಿ ಸರಕಾರಿ ವೈದ್ಯರ ಕೊರತೆ ಇದೆ.ಆದ್ದರಿಂದ ಎಂಸಿಐ ಈ ಕೊರತೆಯನ್ನು ತುಂಬಲು ಸಮಯ ಉಪಯೋಗಿಸಬೇಕಾಗಿದೆ" ಎಂದು ಗಡ್ಕರಿ ಹಳಿರುವುದಾಗಿ ವರದಿಗಳು ತಿಳಿಸಿವೆ.





