ವಿರೋಧದಿಂದಾಗಿ 12 ವರ್ಷದ ಬಳಿಕ ಹಿಂದೂ-ಮುಸ್ಲಿಮ್ ಜೋಡಿ ಮದುವೆ ನಡೆಯಿತು: ಇದು ವ್ ಜಿಹಾದ್ ಅಲ್ಲ ಎಂದ ಕುಟುಂಬಸ್ಥರು!

ಮೈಸೂರು, ಎಪ್ರಿಲ್ 18:ಕರ್ನಾಟಕದ ಮೈಸೂರಿನಲ್ಲಿ ಹಿಂದೂ ಸಂಘಟನೆಗಳ ಬೆದರಿಕೆಯ ನಡುವೆ ಹಿಂದೂ ಯುವತಿ ಮುಸ್ಲಿಮ ಯುವಕ ಪ್ರೇಮ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ. ಮೈಸೂರಿನ ಆಶಿತಾ ಬಾಬು ಮತ್ತು ಶಕೀಲ್ ಅಹ್ಮದ್ ಪರಸ್ಪರ ಕಳೆದ ಹನ್ನೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯಾಗಲು ಬಯಸುತ್ತಿದ್ದರು. ಈಗ ಅವರಿಬ್ಬರ ಮದುವೆ ನಡೆದಿದೆ. ಈ ನಡುವೆ ಬಜರಂಗದಳದಂತಹ ಹಿಂದೂವಾದಿ ಸಂಘಟನೆಗಳು ವಿರೋಧಿಸಿವೆ ಎಂದು ವರದಿಗಳು ತಿಳಿಸಿವೆ.
ಶಕೀಲ್‌ನೊಂದಿಗೆ ಮದುವೆಯಾಗಲು ವಾರದ ಹಿಂದೆ ಆಶಿತಾ ತನ್ನ ಧರ್ಮವನ್ನು ತೊರೆದಳು ಮತ್ತು ಅವಳು ಶಾಹಿಸ್ತಾ ಆಗಿದ್ದಾಳೆ. ಎಪ್ರಿಲ್ 17ರಂದು ನಿಕಾಹ್‌ನ ಸಮಯದಲ್ಲಿ ಹಿಂದೂ ಸಂಘಟನೆಗಳು ಆಶಿತಾಳ ಮನೆಯ ಹೊರಗೆ ಸೇರಿ ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ಒಳಗೆ ನಿಕಾಹ್ ನಡೆಯುತ್ತಿತ್ತು. ಇವರಿಬ್ಬರ ಪ್ರೀತಿಗೆ ಬಜರಂಗದಳ ಮತ್ತು ಹಿಂದೂ ಸಂಘಟನೆಗಳು ವಿರೋಧಿಸಿದ್ದವು.ಆದರೆ ಕುಟುಂಬ ಅವರ ಮದುವೆಯ ಪರವಾಗಿನಿಂತಿತ್ತು.
ಕೆಲವು ಹಿಂದೂ ಸಂಘಟನೆಗಳನ್ನುಲವ್ ಜಿಹಾದ್ ಎಂದು ಹೇಳಿದ್ದವು.ಆಶಿತಾಳ ತಂದೆ ವೈದ್ಯರಾದ ನರೇಂದ್ರ ಬಾಬು ಮದುವೆ ಸ್ಥಳಕ್ಕೆ ಹೋಗುತ್ತಾ ಭಾರತದಲ್ಲಿ ನಾವೆಲ್ಲರೂ ಸಮಾನರು ಇದು ವಿರೋಧಿಗಳಿಗೆ ಸಂದೇಶವಾಗಿದೆ. ಅವರು ತಿಳಿಯಬೇಕು. ಈಗ ಎಲ್ಲರೂ ಸಂತೋಷಾಚರಣೆ ಮಾಡುತ್ತಿದ್ದಾರೆ ಮತ್ತು ಕೇವಲ ಶೇ. 0.0.1 ಮಂದಿ ವಿರೋಧಿಸುತ್ತಿದ್ದಾರೆ. ಇದರಿಂದ ಏನು ಪರಿಣಾಮ ಇದೆ ಎಂದು ಹೇಳಿರುವುದಾಗಿ ವರದಿಯಾಗಿದೆ.





