ಹರಿಯಾಣದಲ್ಲಿ ಜಾಟ್ ಪೊಲೀಸರೇ ದಂಗೆ ಎದ್ದಿದ್ದರು, ಸರಕಾರದ ಆದೇಶವನ್ನು ಪಾಲಿಸಿಲ್ಲ: ತನಿಖಾ ವರದಿ

ಚಂಡಿಗಡ, ಎಪ್ರಿಲ್, 18: ಹರಿಯಾಣದಲ್ಲಿ ಪೆಬ್ರವರಿಯಲ್ಲಿ ನಡೆದಿದ್ದ ಜಾಟ್ ಚಳವಳಿಯಲ್ಲಿ ಸ್ಫೋಟಗೊಂಡಿದ್ದ ಹಿಂಸೆಯ ತನಿಖೆಗಾಗಿ ನೇಮಿಸಲಾದ ಸಮಿತಿಯ ತನಿಖೆಯಲ್ಲಿ ಕೆಲವು ಪೊಲೀಸರೇ ಹಿಂಸೆಯಲ್ಲಿ ಭಾಗಿಯಾಗಿದ್ದರು ಎಂದು ಪತ್ತೆಯಾಗಿದೆ. ಅವರು ಮೇಲಿಂದ ಬಂದ ಆದೇಶವನ್ನು ಪಾಲಿಸಲು ನಿರಾಕರಿಸಿದ್ದರು. ಆದೇಶವನ್ನು ಪಾಲಿಸದ ಪೊಲೀಸರಲ್ಲಿ ಹೆಚ್ಚಿನವರು ಜಾಟ್ ಸಮುದಾಯದವರಾಗಿದ್ದರು ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ. ರೋಹ್‌ತಕ್ ಮತ್ತು ಝಜ್ಜಾರ್‌ನಲಿ ಹೆಚ್ಚು ಹಿಂಸಾಗ್ರಸ್ತ ಘಟನೆಗಳು ನಡೆದಿದ್ದವು.
ಪ್ರಕಾಶ್ ಸಿಂಗ್ ಸಮಿತಿಯ ತನಿಖೆಯಲ್ಲಿ ಪ್ರತಿಯೊಂದೂ ಜಿಲ್ಲೆಯಲ್ಲಿ ಶೇ.60-70 ಪೊಲೀಸರು ತಮ್ಮ ಹುದ್ದೆಯ ಜವಾಬ್ದಾರಿಕೆಯನ್ನು ನಿರ್ವಹಿಸಿಲ್ಲ. ಆದ್ದರಿಂದ ಗುಂಪು ಕೆಲವು ಮನೆ ಮತ್ತು ಅಂಗಡಿಗಳಿಗೆ ಕೊಲ್ಲಿಯಿಟ್ಟಿದ್ದವು ಎಂದು ವರದಿಯು ವಿವರಿಸಿದೆ. ತನಿಖಾ ಪ್ಯಾನಲ್‌ನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಸಿಂಗ್, ಸಹಾಯಕ ಮುಖ್ಯಕಾರ್ಯದರ್ಶಿ ವಿಜಯ್ ಬರ್ಧನ್‌ಮತ್ತು ಡಿಜಿಪಿ ಕೆಪಿ ಸಿಂಗ್ ಇದ್ದರು. ಆದೇಶ ಉಲ್ಲಂಘಿಸಿದ ಪೊಲೀಸರ ಪಟ್ಟಿಯನ್ನು ಈ ಸಮಿತಿ ಸಿದ್ಧಪಡಿಸಿದೆ. ಅದರಲ್ಲಿ ಅವರ ಹೆಸರು ,ಬೆಲ್ಟ್ ನಂಬರ್,ಕರ್ತವ್ಯಕ್ಕೆ ನಿಗದಿಪಡಸಿದ ರ್ಸತಳ ಮತ್ತು ಅವರು ಕರ್ತವ್ಯಕ್ಕೆ ತಪ್ಪಿಸಿಕೊಂಡ ದಿನಗಳನ್ನೂ ಬರೆಯಲಾಗಿದೆ ಎಂದು ವರದಿಗಳು ತಿಳಿಸಿವೆ. ವರದಿಯಲಲಿ ಪೊಲೀಸರು ಆರೇಳುದಿನ ತಪ್ಪಿಸಿಕೊಂಡಿದ್ದರು.ಹಿಂಸೆ ನಿಂತ ಮೇಲೆ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ವರದಿಯಾಗಿದೆ.





