ಕಾಸರಗೋಡು : ಭ್ರಷ್ಟಾಚಾರ ಆಡಳಿತವನ್ನು ಕೊನೆಗಾಣಿಸಲು ಜನಪರ ಸರಕಾರಕ್ಕೆ ಅವಕಾಶ ನೀಡಿ - ಚಿತ್ರನಟ ಸುರೇಶ್ ಗೋಪಿ

ಕಾಸರಗೋಡು : ಭ್ರಷ್ಟಾಚಾರ ಆಡಳಿತವನ್ನು ಕೊನೆಗಾಣಿಸಲು ಈ ಚುನಾವಣಾಯಲ್ಲಿ ಮತದಾರರ ಮುಂದೆ ಉತ್ತಮ ಅವಕಾಶ ಬಂದಿದ್ದು , ಜನಪರ ಸರಕಾರಕ್ಕೆ ಬಿಜೆಪಿಗೆ ಅವಕಾಶ ನೀಡುವಂತೆ ಚಿತ್ರನಟ ಸುರೇಶ್ ಗೋಪಿ ಅಭಿಪ್ರಾಯಪಟ್ಟರು.
ಅವರು ಕುಂಬಳೆ ಯಲ್ಲಿ ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ . ಸುರೇಂದ್ರನ್ ರವರ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಎಲ್ಲರಿಗೂ ಸಮಾನ ನ್ಯಾಯ ಲಭಿಸಬೇಕು. ಕಳೆದ ೬೦ ವರ್ಷಗಳಲ್ಲಿ ಐಕ್ಯ ಮತ್ತು ಐಕ್ಯರಂಗವನ್ನು ಜನತೆ ಬೆಂಬಲಿಸಿದ್ದಾರೆ. ಈಗ ಬದಲಾವಣೆಗೆ ಅವಕಾಶ ಬಂದಿದೆ ಎಂದು ಹೇಳಿದರು.
ಸಮಾವೇಶ ವನ್ನು ಉದ್ಘಾಟಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ , ಬಿಜೆಪಿಗೆ ಕೇರಳದಲ್ಲಿ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಡಬೇಕು ಎಂದರು.
ಜಿಲಾಧ್ಯಕ್ಷ ಕೆ . ಶ್ರೀಕಾಂತ್ , ಮುರಳಿಧರ ಯಾದವ್ , ಸುರೇಶ್ ಕುಮಾರ್ ಶೆಟ್ಟಿ ಮೊದಲಾದವರು ಮಾತನಾಡಿದರು.
Next Story





