ಮೂಡುಬಿದಿರೆ: ಸ್ವಚ್ಛ ಭಾರತ ಮಿಷನ್ ಯೋಜನೆ
ಮೂಡುಬಿದಿರೆ: ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಮೂಡುಬಿದಿರೆ ಪುರಸಭೆಯನ್ನು ಬಯಲು ಶೌಚಮುಕ್ತ ನಗರವೆಂದು ಘೋಷಣೆ ಮಾಡಲಿರುವುದರಿಂದ , ಈಗಾಗಲೇ ಪುರಸಭೆಯ ಸ್ವಚ್ಛತಾ ದೂತರ ಮುಖಾಂತರ ಶೌಚಗೃಹ ರಹಿತರ ಮನೆ-ಮನೆ ಸಮೀಕ್ಷೆ ಕಾರ್ಯವನ್ನು ನಡೆಸಲಾಗಿದೆ.
ಸಮೀಕ್ಷೆಗೆ ಒಳಪಡದ ಶೌಚಗೃಹ ರಹಿತ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು ಇದ್ದಲ್ಲಿ, ಸಂಪೂರ್ಣ ದಾಖಲಾತಿಯೊಂದಿಗೆ ಎಪ್ರಿಲ್ 30 ರೊಳಗೆ ಮೂಡುಬಿದಿರೆ ಪುರಸಭಾ ಕಛೇರಿಗೆ ಅರ್ಜಿ ಸಲ್ಲಿಸಬಹುದು, ನಂತರ ಸಲ್ಲಿಸಿದಲ್ಲಿ ಪರಿಗಣಿಸಲಾಗುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಶೌಚಾಲಯ ದುರಸ್ಥಿಗೆ ಅನುದಾನ ಕೋರಲು ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸಲು ಇರುವ ನಿಭಂದನೆಗಳು: ಅರ್ಜಿದಾರರು ಸ್ವಂತ ಮನೆ ಹೊಂದಿರಬೇಕು. ನಿಗದಿತ ನಮೂನೆಯಲ್ಲಿ ಅರ್ಜಿ, ಅರ್ಜಿದಾರರ ಆಧಾರ್ ಕಾರ್ಡ್, ರೇಷನ್ ಕಾರ್ಡ್ (ಪಡಿತರ ಚೀಟಿ), ಬ್ಯಾಮಕ್ ಪಾಸ್ ಪುಸ್ತಕ, 2016-17 ನೇ ಸಾಲಿನಲ್ಲಿ ಮನೆ ತೆರಿಗೆ ಪಾವತಿಸಿದ ರಶೀದಿ, ವಿದ್ಯ್ಯುತ್ ಬಿಲ್ಲು, ನೀರಿನ ಬಿಲ್ಲು, ಪಾಸ್ಪೋರ್ಟ್ ಅಳತೆಯ ಫೋಟೋ, ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಮತ್ತು ಪ.ಜಾ/ಪ.ಪಂ.ಗೆ ಒಳಪಟ್ಟಲ್ಲಿ ಜಾತಿ ಪ್ರಮಾಣ ಪತ್ರ ಇರಬೇಕು ಎಂದು ಮುಖ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.