ಝೀರಾ ರೈಸ್ ಹಾಗೂ ದಾಲ್ ಫ್ರೈ ಗೆ ಬಲಿಯಾದ ಜೀವ !

ಅಹ್ಮದಾಬಾದ್, ಎ. 18 : ತನ್ನ ಪ್ರೀತಿಯ ಝೀರಾ ರೈಸ್ ಹಾಗೂ ದಾಲ್ ಫ್ರೈ ಮಾಡಲು ಪತ್ನಿ ನಿರಾಕರಿಸಿದ್ದಕ್ಕೆ ಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹ್ರದಯ ವಿದ್ರಾವಕ ಘಟನೆ ಇಲ್ಲಿನ ನರೋಡದಲ್ಲಿ ನಡೆದಿದೆ.
ದಿನೇಶ್ ದಂತಾನಿ (30) ಎಂಬವರು ರಾತ್ರಿ ಮನೆಗೆ ಬಂದವರು ಝೀರಾ ರೈಸ್ ಹಾಗೂ ದಾಲ್ ಫ್ರೈ ಮಾಡುವಂತೆ ಪತ್ನಿಗೆ ಹೇಳಿದರು. ಆದರೆ ಆಗಲೇ ಚಪಾತಿ ಹಾಗೂ ತರಕಾರಿ ಪಲ್ಯ ಮಾಡಿ ಆಗಿದ್ದರಿಂದ ಝೀರಾ ರೈಸ್ ಹಾಗೂ ದಾಲ್ ಫ್ರೈ ಮಾಡಲು ನಿರಾಕರಿಸಿದರು. ಇದಕ್ಕೆ ಕೆರಳಿದ ದಿನೇಶ್ ಊಟ ಮಾಡಲು ನಿರಾಕರಿಸಿ ತಮ್ಮ ಕೊಠಡಿಗೆ ತೆರಳಿದರು. ಸ್ವಲ್ಪ ಹೊತ್ತಿನಲ್ಲಿ ಅವರ ಕೊಠಡಿಯಿಂದ ಹೊಗೆ ಬರಲಾರಂಭಿಸಿತು. ಅವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದರು.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಮದ್ಯಪಾನ ಮಾಡಿದ್ದರು ಎಂದು ತಿಳಿದು ಬಂದಿದೆ.
Next Story





