ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ ಚುನಾವಣೆ; ಭರಾಟೆಯ ಪ್ರಚಾರ ಆರಂಭ

ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ ಚುನಾವಣೆಯ ಪ್ರಚಾರ ಕಾರ್ಯ ಆರಂಭವಾಗಿದ್ದು 3ನೇ ವಾರ್ಡಿನ ಅಭ್ಯರ್ಥಿ ಶೋಭಾ ಶ್ರೀಧರ ನಾಯ್ಕ ಇವರು ಬಹಿರಂಗ ಪ್ರಚಾರವನ್ನು ಆರಂಭಿಸಿದ್ದಾರೆ. ನಾಮ ಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನ 3ನೇ ವಾರ್ಡಿಗೆ ಬಿ.ಜೆ.ಪಿ. ಹಾಗೂ ಪಕ್ಷೇತರ ಅಭ್ಯರ್ಥಿ ಮಾತ್ರ ಕಣದಲ್ಲಿದ್ದು ಈ ವಾರ್ಡಿನಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವುದು ಕುತೂಹಲ ಮೂಡಿಸಿದೆ. 3ನೇ ವಾರ್ಡಿನಲ್ಲಿ ಬಿ.ಜೆ.ಪಿ. ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೇಯಿದ್ದು ಈಗಾಗಲೇ ತಮ್ಮ ಅಟೋ ರಿಕ್ಷಾದ ಚಿಹ್ನೆಯೊಂದಿಗೆ ಶೋಭಾ ಶ್ರೀಧರ ನಾಯ್ಕ ತಮ್ಮ ಒಂದು ಸುತ್ತಿನ ಪ್ರಚಾರ ಕಾರ್ಯವನ್ನು ಮುಗಿಸಿದ್ದು ಈ ಭಾಗದ ಯುವ ಪತದಾರರ ಪಡೆಯೇ ಅಭ್ಯರ್ಥಿಯನ್ನು ಬೆಂಬಲಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಕಂಡು ಬಂದಿದೆ. ಅಭ್ಯರ್ಥಿಯ ಪತಿ ಶ್ರೀಧರ ನಾಯ್ಕ ಕೂಡಾ ಸಜ್ಜನ ವ್ಯಕ್ತಿಯಾಗಿದ್ದು ಈ ಭಾಗದಲ್ಲಿ ಇವರಿಗೆ ಉತ್ತಮ ಬೆಂಬಲ ದೊರೆಯಲು ಸಾಧ್ಯವಾಗಿದ್ದು ಪ್ರಚದಾರದ ದಿನದ ಅಂತರ ಬಹಳ ಕಡಿಮೆಯಿರುವುದರಿಂದ ಮತ್ತು ಎಲ್ಲ ಕಡೆಯಲ್ಲಿಯೂ ಬೇಸಿಗೆಯ ಬಿಸಿಲಿನ ಝಳ ಹೆಚ್ಚಿದ್ದರಿಂದ ಪ್ರಚಾರ ಕಾರ್ಯಕ್ಕೆ ತೀವ್ರ ಅಡ್ಡಿಯುಂಟಾಗಿದ್ದರೂ ಸಹ ಮನೆ ಮನೆ ಪ್ರಚಾರ ಕೈಗೊಂಡು ಜಾಲಿ ಪಟ್ಟಣ ಪಂಚಾಯತ್‌ನಿಂದ ಈ ಭಾಗದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡುವ ಭರವಸೆಯನ್ನು ಅಭ್ಯರ್ಥಿ ಶೋಭಾ ನಾಯ್ಕ ನೀಡುತ್ತಿದ್ದಾರೆ. ಜಾಲಿ ಪಟ್ಟಣ ಪಂಚಾಯತ್‌ನಲ್ಲಿ ಈಗಾಗಲೇ 10 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಇಲ್ಲಿಯೂ ಪಕ್ಷೇತರ ಅಭ್ಯರ್ಥಿಗಳೇ ಹೆಚ್ಚಿರುವುದು ಕಂಡು ಬಂದಿದ್ದು ಇವರ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವುದು ಈ ಭಾಗದ ಮತದಾರರ ಲೆಕ್ಕಾಚಾರವಾಗಿದೆ.





