ಉ.ಕ.ಬರಪೀಡಿತ ಗ್ರಾಮಗಳಿಗೆ ಶಿವಮೊಗ್ಗದಿಂದ ಕುಡಿಯುವ ನೀರು
ನೋವಾ ಚಾರಿಟೇಬಲ್ ಟ್ರಸ್ಟ್, ಸಮಗ್ರ ಕರ್ನಾಟಕ ಸಂಘದ ಮಾದರಿ ಕಾರ್ಯ
ಶಿವಮೊಗ್ಗ, ಎ. 18: ಪ್ರಸ್ತುತ ಬೀಳುತ್ತಿರುವ ಬೇಸಿಗೆಯ ರಣ ಬಿಸಿಲಿ ನಿಂದ ಮಲೆನಾಡು ಪ್ರದೇ ಶದ ಹಲವೆಡೆ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಇನ್ನೂ ಉತ್ತರ ಕರ್ನಾಟಕ ಭಾಗಗಳಲ್ಲಂತೂ ಪರಿಸ್ಥಿತಿ ಹೇಳತೀರದಾಗಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ
ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಜೀವ ಜಲಕ್ಕಾಗಿ ಅಲ್ಲಿನ ನಾಗರಿಕರು ಅಕ್ಷರಶಃ ಪರದಾಡುತ್ತಿದ್ದಾರೆ. ಈ ನಡುವೆ ಶಿವಮೊಗ್ಗ ನಗರದ ಸಹೃದಯಿ ಸಂಘಟ ನೆಯೊಂದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂ ಕಿನ ಎರಡು ಗ್ರಾಮಗಳಿಗೆ ಸಾವಿರಾರು ಲೀಟರ್ ಕುಡಿ ಯುವ ನೀರು ರವಾನಿಸಿ, ಮಾನವೀಯತೆ ಮೆರೆದಿದೆ. ಇತರ ಸಂಘಟನೆಗಳಿಗೆ ಮಾದರಿಯಾಗಿ ನಿಂತಿದೆ. ಸಂಘಟನೆಯ ಈ ಮಾನವೀಯ ಕಾರ್ಯಕ್ಕೆ ನಾಗರಿಕರು ಮೆಚ್ಚುಗೆ ವ್ಯಕ್ತಪ ಡಿಸುತ್ತಿದ್ದಾರೆ.
<ನೆರವಿನ ಹಸ್ತ: ನೋವಾ ಚಾರಿಟೇಬಲ್ ಟ್ರಸ್ಟ್ ಮತ್ತು ಸಮಗ್ರ ಕರ್ನಾಟಕ ಜನಪರ ನಾಗರಿಕರ ಹಕ್ಕು ಸಂಘಟನೆಯ ಕಾರ್ಯಕರ್ತರು ಈ ಮಹತ್ತರ ಕಾರ್ಯ ಮಾಡಿದ್ದಾರೆ. ಮುದ್ದೇಬಿಹಾಳ ತಾಲೂಕಿನ ತಾಳೀಕೋಟೆ ಮತ್ತು ಕುಂಡೋಜಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತತ್ವಾರ ಇರುವುದರ ಮಾಹಿತಿ ಪಡೆದ ಕಾರ್ಯಕರ್ತರು, ತ್ಮು ಸ್ವಂತ ವೆಚ್ಚದಲ್ಲಿ ನೀರು ರವಾನಿಸುವ ಕೆ
ಲಸ ಮಾಡಿದ್ದಾರೆ. ಸಂಘಟನೆಯ ಈ ಕೆಲಸಕ್ಕೆ ಮಲೆನಾಡ ಸಿರಿ ಗಣಪತಿ ಕ್ಯಾಂಟರ್ ಮತ್ತು 407 ಮಾಲಕ-ಚಾಲಕರ ಸಂಘದವರು ಕೈ ಜೋಡಿಸಿದ್ದಾರೆ. ಮೇಲ್ಕಂಡ ಎರಡು ಗ್ರಾಮಗಳಿಗೆ ಲಾರಿಯಲ್ಲಿ ಉಚಿತವಾಗಿ ನೀರು ಕೊಂಡೊಯ್ಯುತ್ತಿದ್ದಾರೆ. ಪ್ರಸ್ತುತ ನೀರು ಕೊಂಡೊಯ್ಯುತ್ತಿರುವ ಲಾರಿಯ
ಬಾಡಿಗೆ ಪಡೆಯುತ್ತಿಲ್ಲ. *ಸರಳ ಕಾರ್ಯಕ್ರಮ: ಸೋಮವಾರ ನಗರದ ವಿನೋಬನಗರ ಬಡಾವಣೆ ನಾಲ್ಕನೆ ಹಂತದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ, 10 ಸಾವಿರ ಲೀಟರ್ ಕುಡಿಯುವ ನೀರು ಹೊತ್ತ ಲಾರಿಗೆ ಸಂಘಟನೆಯ ಮುಖಂಡರು ಬೀಳ್ಕೊಟ್ಟರು. ಮಂಗಳವಾರ ಬೆಳಗ್ಗೆ ತಾಳಿಕೋಟೆ
ುತ್ತು ಕುಂಡೋಜಿ ಗ್ರಾಮಕ್ಕೆ ಈ ಲಾರಿ ತೆರಳಲಿದೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಲಕ್ಷ್ಮಣ್ ಉದಾವತ್, ಜ್ಞಾನಪ್ರಕಾಶ್, ಎಸ್.ಕೆ.ಮನೋಜ್‌ಕುಮಾರ್, ಎಸ್.ಕೆ.ಸುಜಿತ್‌ಕುಮಾರ್, ಶಿವರಾಜ್‌ಕುಮಾರ್, ನರೇಂದ್ರಬಾಬು, ಮೋಹನ್, ಮಿಲಿಯಮ್ಸ್, ಹೊನ್ನಾಳ್ಳಿ ಶ್ರೀನಿವಾಸ್, ಮಲ್ಲಿಕಾರ್ಜುನ, ಅಕ್ಷಯ್, ಶರತ್ ಉಪಸ್ಥಿತರಿದ್ದರು.







