ಬಿಜೆಪಿ ಸಂಸದ ವಿಜಯ್ ಗೋಯಲ್‌ಗೆ ದಂಡ
ಸಮ-ಬೆಸ ನಿಯಮ ಉಲ್ಲಂಘನೆ

ಹೊಸದಿಲ್ಲಿ, ಎ.18: ಬಿಜೆಪಿ ಸಂಸದ ವಿಜಯ್ ಗೋಯಲ್‌ಇಂದು ದಿಲ್ಲಿಯ ಸಮ-ಬೆಸ ನಿಯಮವನ್ನು ಉಲ್ಲಂಘಿಸಿ, ಸಂಚಾರ ಪೊಲೀಸರಿಗೆ ರೂ.2 ಸಾವಿರ ದಂಡ ತೆತ್ತಿದ್ದಾರೆ.
ದಿಲ್ಲಿಯ ಸಾರಿಗೆ ಸಚಿವ ಗೋಪಾಲ ರಾಯ್ ಈ ಹಿಂದೆ ಅವರ ಮನೆಗೆ ಭೇಟಿ ನೀಡಿ, ಗುಲಾಬಿ ಹೂವು ಕೊಟ್ಟು ನಿಯಮ ಉಲ್ಲಂಘಿಸದಂತೆ ವಿನಂತಿಸಿದ್ದರು.
ಸಂಸತ್ತಿಗೆ ಹೋಗುವ ದಾರಿಯಲ್ಲಿ ಗೋಯಲ್‌ರನ್ನು ರೈಸಿನಾ ರಸ್ತೆಯ ಸಮೀಪ ತಡೆಯಲಾಯಿತು. ಚಾಲನಾ ಪರವಾನಿಗೆ ಹಾಗೂ ವಾಹನ ವಿಮೆ ಇರದಿದ್ದುಕ್ಕಾಗಿ ಅವರಿಗೆ ರೂ.1,500 ಹೆಚ್ಚುವರಿ ದಂಡ ವಿಧಿಸಲಾಯಿತು.
ಸಮ-ಬೆಸ ಯೋಜನೆಯ ಜಾಹೀರಾತುಗಳಿಗಾಗಿ ಎಎಪಿ ಸರಕಾರಭಾರೀ ಮೊತ್ತವನ್ನು ವೆಚ್ಚಮಾಡಿರುವುದನ್ನು ಪ್ರತಿಭಟಿಸಿ, ತಾನು ರವಿವಾರ ಈ ನಿಮಯವನ್ನು ಉಲ್ಲಂಘಿಸುವೆನೆಂದು ಗೋಯಲ್ ಶುಕ್ರವಾರವೇ ಘೋಷಿಸಿದ್ದರು.
ತನಗೆ ಸಮ-ಬೆಸ ನಿಯಮ ಉಲ್ಲಂಘನೆಗಾಗಿ ರೂ.2 ಸಾವಿರ ಹಾಗೂ ಪರವಾನಿಗೆ ಹಾಗೂ ವಿಮೆ ದಾಖಲೆಗಳಿಲ್ಲದುದ್ದಕ್ಕಾಗಿ ರೂ.1,500 ದಂಡ ವಿಧಿಸಲಾಯಿತೆಂದು ತಿಳಿಸಿದ ಗೋಯಲ್, ತನ್ನ ದಾಖಲೆಗಳೆಲ್ಲವೂ ಚಾಲಕರಲ್ಲಿವೆಯೆಂದು ಸ್ಪಷ್ಟಪಡಿಸಿದ್ದಾರೆ.
Next Story





