‘ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ’

ಸೊರಬ,ಎ.18: ತಾಲೂಕಿನಲ್ಲಿ ಬರದಿಂದ ಜನತೆ ತತ್ತರಿಸಿದ್ದು, ಅಧಿಕಾರಿಗಳು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಎಸ್. ಮಧುಬಂಗಾರಪ್ಪ ಸೂಚಿಸಿದ್ದಾರೆ.
ಸೋಮವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬರಗಾಲ ಪರಿಸ್ಥಿತಿಯನ್ನು ಜನತೆ ಎದುರಿಸುತ್ತಿರುವುದರಿಂದ ರಸ್ತೆ, ಚರಂಡಿ ಕಾಮಗಾರಿಗಳಿಗಿಂತ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಈ ಹಿಂದೆ ಕುಡಿಯುವ ನೀರಿನ ವಿಷಯವಾಗಿ ಸುಮಾರು 11 ಸಭೆಗಳನ್ನು ನಡೆಸಲಾಗಿದೆ. ಆವಶ್ಯಕತೆ ಇರುವ ಕಡೆಗಳಲ್ಲಿ ಮುಂಗಡವಾಗಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ನೀರಿಗಾಗಿ ತಮ್ಮ ಶಾಸಕರ ಅನುದಾನದಲ್ಲಿ 1 ಕೋಟಿ ರೂ.ವನ್ನು ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು. ಬರಗಾಲವೆಂಬುದು ಕೇವಲ ರಾಜಕೀಯ ಪಕ್ಷಗಳಿಗಾಗಲಿ, ಅಥವಾ ರಾಜಕೀಯ ಮುಖಂಡರಿಗಾಗಲಿ ಬರುವಂತಹದ್ದಲ್ಲ. ಇಡೀ ಕ್ಷೇತ್ರದ ಜನತೆಗೂ ತಟ್ಟುತ್ತದೆ. ಬರದ ವಿಷಯದಲ್ಲಿ ರಾಜಕೀಯ ಸಲ್ಲದು, ಸರ್ವರೂ ಪಕ್ಷಾತೀತವಾಗಿ, ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ಬರಗಾಲವನ್ನು ಸಮರ್ಪಕವಾಗಿ ನಿಭಾಯಿಸಬೇಕಿದೆ ಎಂದ ಅವರು, ಗ್ರಾಮ ಪಂಚಾಯತ್‌ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಸುವ ಸಂದಭರ್ದಲ್ಲಿ ಗ್ರಾಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಖುದ್ದು ಹಾಜರಿದ್ದು, ನಿಗಾವಹಿಸುವಂತೆ ಸೂಚಿಸಬೇಕು ಎಂದು ಸಭೆಯಲ್ಲಿದ್ದ ತಾಪಂ ಇ.ಒ. ಎಸ್.ಎಂ.ಡಿ ಇಸ್ಮಾಯೀಲ್ ಅವರಿಗೆ ತಾಕೀತು ಮಾಡಿದರು. ಜಿಪಂ ಸದಸ್ಯ ಸತೀಶ್ ಎಂ. ಅರ್ಜುನಪ್ಪ ಮಾತನಾಡಿ, ತತ್ತೂರು ಕ್ಷೇತ್ರದ ಹಂಚಿ ತಾಂಡದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಯನ್ನು ಕೊರೆಸಲಾಗಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ನಿಟ್ಟಿನಲ್ಲಿ ಗುತ್ತಿಗೆದಾರರು ಸಹ ಸಂಪರ್ಕಕ್ಕೆ ದೊರೆಯುತ್ತಿಲ್ಲ. ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಸಭೆೆಯ ಗಮನಕ್ಕೆ ತಂದರೇ, ಖಾಸಗೀ ಶಾಲೆಗಳ ಸುಳ್ಳು ಪ್ರಚಾರ, ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಹಿನ್ನಡೆ, ಆನವಟ್ಟಿಯ ಸರಕಾರಿ ಉರ್ದು ಪ್ರೌಢಶಾಲಾ ಕಟ್ಟಡಕ್ಕೆ ಹಣ ಮಂಜೂರಾಗಿ ಸುಮಾರು ಐದು ವರ್ಷಗಳೂ ಕಳೆದರೂ ನಿವೇಶನ ಮಂಜೂರಾಗದೇ ಇರುವುದು. ಯಲಿವಾಳ ಸೇರಿದಂತೆ ಕೆಲವೆಡೆ ಅಂಗನವಾಡಿ ಕಟ್ಟಡಗಳ ನಿವೇಶನ ಸಮಸ್ಯೆ, ತಾಲೂಕಿನ ಕೆಲ ಗ್ರಾಮೀಣ ಪ್ರದೇಶದಲ್ಲಿ ಡೆಂಗೂ ಜ್ವರ ಹಾಗೂ ಸಾಂಕ್ರಾಮಿಕ ರೋಗಗಳ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಕುರಿತು ಕೆಡಿಪಿ ನಾಮನಿರ್ದೇಶನ ಸದಸ್ಯರು ಹಾಗೂ ಜಿಪಂ ಸದಸ್ಯರು ಸಭೆಯ ಗಮನಕ್ಕೆ ತಂದರು. ಸಭೆೆಯಲ್ಲಿ ತಾಪಂ ಅಧ್ಯಕ್ಷ ಜೈಶೀಲಪ್ಪ, ತಾಲೂಕು ಕೆಡಿಪಿ ಸದಸ್ಯರಾದ ಶಬ್ಬೀರ್ ಅಹ್ಮದ್ ಕಿಲ್ಲೇದಾರ್, ಹೊನ್ನಪ್ಪ ಓಟೂರು, ಬಸವರಾಜಪ್ಪ, ವಿನಾಯಕಪ್ಪ ಬುಳ್ಳಿ, ಡಿ.ಬಿ. ಮಂಜಪ್ಪ, ತಹಶೀಲ್ದಾರ್ ಕವಿತಾ ಯೋಗಪ್ಪ
ನವರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.





