Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಹಳ್ಳಿ ಊರಿಗೆ ಕೊಳ್ಳಿ ದೀಪ ಸಾಕು?

ಹಳ್ಳಿ ಊರಿಗೆ ಕೊಳ್ಳಿ ದೀಪ ಸಾಕು?

ರಮಾನಂದ ಶರ್ಮಾರಮಾನಂದ ಶರ್ಮಾ18 April 2016 11:36 PM IST
share
ಹಳ್ಳಿ ಊರಿಗೆ ಕೊಳ್ಳಿ ದೀಪ ಸಾಕು?

ಮಲೆನಾಡಿನ ಆ ಸಣ್ಣ ಪಟ್ಟಣದ ಬ್ಯಾಂಕಿನ ಎದುರಿಗೆ ಬ್ಯಾಂಕ್ ಬಾಗಿಲು ತೆರೆಯುವ ಹೊತ್ತಿಗೆ ನೂರಾರು ಜನರು ಸೇರಿದ್ದರು. ಹಲವರು ತಮ್ಮ ಮೊಬೈಲ್‌ಗೆ ಬಂದ ಸಂದೇಶವನ್ನು ಮ್ಯಾನೇಜರ್ ಎದುರಿಗೆ ಹಿಡಿದು, ‘‘ಇದೇನು ಸ್ವಾಮಿ ನಮ್ಮ ಖಾತೆಯಿಂದ ಯಾರೋ ಹಣ ಎಗರಿಸಿದ್ದಾರೆ?. ನಮ್ಮ ಹಣ ನಮ್ಮ ಖಾತೆಗೆ ಜಮೆ ಮಾಡಿ’’ ಎಂದು ಜೋರಾಗಿ ಹೇಳುತ್ತಿದ್ದರು. ಒಂದೇ ದಿನ ಅದೇ ಬ್ಯಾಂಕಿನ ಹತ್ತಾರು ಶಾಖೆಗಳಲ್ಲಿ ಹಲವರ ಹಣವನ್ನು ಲಪಟಾಯಿಸಲಾಗಿದ್ದು. ಉತ್ತರ ಭಾರತದ ಗುರ್‌ಗಾಂವ್, ನೊಯಿಡಾ ಪಟ್ಟಣಗಳಲ್ಲಿರುವ ಬ್ಯಾಂಕ್ ಖಾತೆಗಳಿಗೆ ಅನ್‌ಲೈನ್ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗಿತ್ತು. 49 ರೂ.ಯಿಂದ ಹಿಡಿದು 50,000 ರೂ. ವರೆಗೂ ಹಣವನ್ನು ವರ್ಗಾಯಿಸಲಾಗಿತ್ತು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಗ್ರಾಹರಿಗೂ ಎಸ್ಸೆಮ್ಮೆಸ್ ಸಂದೇಶ ಬಂದಿತ್ತು. ಇದು ವ್ಯವಸ್ಥೆಯಲ್ಲಿನ ನ್ಯೂನತೆಯಿಂದ ಅಗಿದ್ದು ಮತ್ತು ಗ್ರಾಹಕರ ಕೈವಾಡ ಇಲ್ಲದಿರುವುದರಿಂದ ಬ್ಯಾಂಕುಗಳು ವಿಚಾರಣೆಯ ನಂತರ ಗ್ರಾಹಕರಿಗೆ ನಷ್ಟವನ್ನು ತುಂಬಿಕೊಡಬಹುದು. ಆದರೆ ಪ್ರಶ್ನೆ, ಇದು ದಿನ ನಿತ್ಯದ ಗೋಳಾದರೆ?

 ಕಳೆದ ಎರಡು ಮೂರು ವರ್ಷಗಳಿಂದ ಇಂತಹ ವಂಚನೆಗಳು ಹೆಚ್ಚಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ವಂಚಕರ ಕೇಂದ್ರ ಸ್ಥಾನ ಉತ್ತರ ಭಾರತ ಇರುತ್ತದೆ. ವಂಚನೆಯಲ್ಲಿ ಹಲವು ವಿಧಗಳಿವೆ. ತೀರಾ ಸಾಮಾನ್ಯವಾದುದು, ಮೊಬೈಲ್ ಮೂಲಕ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುದಾರರನ್ನು ಸಂಪರ್ಕಿಸಿ, ‘‘ನಾವು ಬ್ಯಾಂಕಿನವರು?. ನಿಮ್ಮ ಕಾರ್ಡ್‌ನ್ನು update 
ಮಾಡಬೇಕಾಗಿದ್ದು, ನಿಮ್ಮ ಪಿನ್ ನಂಬರ್ ಹೇಳಿರಿ’’ ಎಂದು ಕೇಳಿ, ನೀವು ಹೇಳಿದ ಒಂದೆರಡು ನಿಮಿಷ ದಲ್ಲಿ ನಿಮ್ಮ ಖಾತೆಯಿಂದ ಕಾರ್ಡ್ ಉಪಯೋಗಿಸಿ ಹಣವನ್ನು ಲಪಟಾಯಿಸುತ್ತಾರೆ. ಕೆಲವರು ನಿಮ್ಮ ಖಾತೆ ನಂಬರ್ ಅಥವಾ ಪಾನ್ ಅಥವಾ ಆಧಾರ್ ನಂಬರನ್ನು ಕೇಳಿ ಪಡೆದು, ಅದರ ಮೂಲಕ ನಿಮ್ಮ ಖಾತೆಗೆ ಕನ್ನ ಹಾಕುತ್ತಾರೆ. ನಿಮಗೊಂದು ಆಫರ್ ಬಂದಿದೆ ಎಂದು ಸಂದೇಶ ನೀಡಿ ನಿಮ್ಮ ಖಾತೆಯಿಂದ ಹಣವನ್ನು ಎಗರಿಸುತ್ತಾರೆ. ವಿಚಿತ್ರವೆಂದರೆ ಈ ಎಲ್ಲ ಕರೆಗಳು ಸಾಮಾನ್ಯವಾಗಿ ಹಿಂದಿ ಭಾಷೆಯಲ್ಲಿ ಇರುತ್ತಿದ್ದು, ನೀವು ಕನ್ನಡ ಆಥವಾ ಇಂಗ್ಲಿಷ್‌ನಲ್ಲಿ ಸಂವಹನ ಮಾಡಿದರೆ, ಅವರು ಲೈನ್‌ಕಟ್ ಮಾಡುತ್ತಾರೆ. ಅವರ ನಂಬರ್‌ಗೆ ಹಿಂದಿರುಗಿ ಫೋನ್ ಮಾಡಿದರೆ not reachable ಅಥವಾ not picking up phone
ಎನ್ನುವ ಸಂದೇಶ ಬರುತ್ತದೆ. ಬ್ಯಾಂಕ್‌ನವರು ಎಂದರೆ, ಜನರು ಪ್ರಶ್ನಿಸುವುದಿಲ್ಲ. ಇದು ನಂಬಿಕೆ ಮತ್ತು ಮುಗ್ಧತೆಯ ಮೇಲೆ ನಡೆಯುವ ವ್ಯವಹಾರವಾಗಿದ್ದು, ಇದನ್ನು ದುರುಳರು ದುರುಪಯೋಗ ಮಾಡಿಕೊಳ್ಳುತ್ತಾರೆ.

  ತೊಂಬತ್ತರ ದಶಕದಲ್ಲಿ ವಿಶ್ವ ಬ್ಯಾಂಕ್‌ನ ಅಣತಿಯಂತೆ ಬ್ಯಾಂಕುಗಳನ್ನು ಗಣಕೀಕರಣ ಮಾಡಿದಾಗ, ಸರಕಾರ ಮತ್ತು ಬ್ಯಾಂಕುಗಳು ಗ್ರಾಹಕರಿಗೆ ತ್ವರಿತ ಮತ್ತು ನಿಖರ ಸೇವೆಯನ್ನು ಕೊಡುವುದು, ವಿದೇಶಿ ಬ್ಯಾಂಕುಗಳ ಸಂಗಡ ಸ್ಪರ್ಧಿಸುವುದು ಮತ್ತು ತನ್ಮೂಲಕ ಸಿಬ್ಬಂದಿ ಕಡಿತಮಾಡುವುದು ಮತ್ತು ಬ್ಯಾಂಕಿಂಗ್ ಉದ್ಯಮವನ್ನು ಕಾಗದ ರಹಿತ ಮಾಡುವುದು ಅವುಗಳ ದೂರಗಾಮಿ ಉದ್ದೇಶವಾಗಿತ್ತು. ಈ ಉದ್ದೇಶ ಸಾಕಷ್ಟು ಫಲಿಸಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಅದೇ ರೀತಿ ಈ ತಾಂತ್ರಿಕತೆಯನ್ನು ಬಹುತೇಕ ಗ್ರಾಹಕರು ತಮ್ಮ ದಿನನಿತ್ಯದ ಬ್ಯಾಂಕಿಂಗ್ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ನಿರೀಕ್ಷೆಯ ಮಟ್ಟವನ್ನು ಮುಟ್ಟಿಲ್ಲ ಎನ್ನುವುದೂ ಸತ್ಯ. ಗ್ರಾಹಕರಲ್ಲಿ ಆಶಿಕ್ಷಿತರು, ಅರೆಶಿಕ್ಷಿತರು ಹೆಚ್ಚಾಗಿರುವಾಗ ಮತ್ತು ಮತ್ತು ತಾಂತ್ರಿಕತೆಯ ಬಳಸುವಿಕೆ ಅವರಿಗೆ ಕಬ್ಬಣದ ಕಡಲೆಯಾಗಿರುವಾಗ ದುರುಳರು ಅದನ್ನು ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯಲು ಸಾಧ್ಯವಾದೀತೇ? ಎಷ್ಟೋ ಶಿಕ್ಷಿತರು ಕೂಡಾ computer savy ಆಗದಿರುವಾಗ, ಜನಸಾಮಾನ್ಯ ಗ್ರಾಹಕರ ಪಾಡೇನು?

ಪುಸ್ತಕ ಆಧಾರಿತ ವಂಚನೆಯಲ್ಲಿ ಫಲಾನುಭವಿಗಳು ಫಲ ಅನುಭವಿಸಲು ಸ್ವಲ್ಪ ವಿಳಂಬವಾಗುತ್ತದೆ. ಆದರೆ, ತಾಂತ್ರಿಕತೆ ಆಥವಾ ಸೈಬರ್ ವಂಚನೆಯಲ್ಲಿ ದುರಳರ ಕೈಗೆ ಕ್ಷಣಮಾತ್ರದಲ್ಲಿ ಫಲಾನುಭವ ಸಿಗುತ್ತದೆ. ಅದಕ್ಕೂ ಮಿಗಿಲಾಗಿ ತಾಂತ್ರಿಕತೆ ಆಧಾರದ ವಂಚನೆಯನ್ನು ದೇಶದ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉಪಯೋಗಿಸಕೊಂಡು ಮಾಡಬಹುದು. ಸಂಬಂಧಪಟ್ಟ ಬ್ಯಾಂಕ್ ಶಾಖೆಗೇ ಬರಬೇಕೆನ್ನುವ ಕಟ್ಟುಪಾಡಿಲ್ಲ. ಅಂತೆಯೇ ಇಂತಹ ವಂಚನೆಯನ್ನು ಮತ್ತು ವಂಚಕರನ್ನು ಹುಡುಕುವುದು ಕಷ್ಟ ಸಾಧ್ಯ. ಇದು ಒಂದು ರೀತಿ ಡಿಜಿಟಲ್ ವಂಚನೆ ಪ್ರಕರಣವಾದುದರಿಂದ ಲಿಖಿತ ದಾಖಲೆಗಳನ್ನು ಪರೀಕ್ಷಿಸುವುದು ಅಸಾಧ್ಯ. ಈ ವಂಚನೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಯಾರನ್ನೂ ಗುರಿ ಇಟ್ಟು ಮಾಡದೇ ಒಂದು ರೀತಿ random ಆಗಿ ಮಾಡುತ್ತಾರೆ.

ಪ್ರತಿ ವಂಚನೆ ಪ್ರಕರಣದಲ್ಲಿಯೂ ಬ್ಯಾಂಕ್‌ಗಳು ಗ್ರಾಹಕರಿಗೆ ಸಹಾಯ ಮಾಡುವುದು ಸಾಧ್ಯವಾಗದು. ತಮ್ಮ ಪಾಸ್‌ವರ್ಡ್‌ನ್ನು ಮತ್ತು ಪಿನ್‌ಕೋಡ್‌ನ್ನು ತಿಳಿದೋ ಅಥವಾ ತಿಳಿಯದೆಯೋ ಇನ್ನೊಬ್ಬರಿಗೆ ಹೇಳಿ ವಂಚಿಸಲ್ಪಟ್ಟರೆ,ಬ್ಯಾಂಕುಗಳು ಸಹಾಯ ಮಾಡುವುದು ಸಂಶಯ. ಆದರೆ, ಗ್ರಾಹಕರ ಪಾತ್ರವಿಲ್ಲದೇ, ಅವರಿಗೆ ತಿಳಿಯದಂತೆ, ವ್ಯವಸ್ಥೆಯ ವಿಫಲತೆ ಅಥವಾ ಇನ್ನು ಯಾವುದೋ ಕಾರಣಕ್ಕಾಗಿ ಗ್ರಾಹಕರು ವಂಚಿಸಲ್ಪಟ್ಟರೆ, ಬ್ಯಾಂಕುಗಳು ಸಹಾಯ ಮಾಡುತ್ತಾರೆ. ಬ್ಯಾಂಕ್‌ಗಳು ತಮ್ಮ ತಾಂತ್ರಿಕ ಬ್ಯಾಂಕ್‌ನಲ್ಲಿ ಸಾಕಷ್ಟು ಸುರಕ್ಷಿತತೆಯನ್ನು ಕೊಡುತ್ತಾರೆ. ಅದರೂ ರಂಗೋಲಿಯ ಕೆಳಗೆ ನುಸುಳುವ ದುರುಳರಿಂದ ಅವರ ಸದುದ್ದೇಶಕ್ಕೆ ಪೆಟ್ಟು ಬೀಳುತ್ತಿದೆ. ಯಾವುದೇ ವ್ಯವಸ್ಥೆ try ,error ಮತ್ತು rectification ಆಧಾರದಲ್ಲಿ ಸಾಫಲ್ಯವನ್ನು ಕಾಣುತ್ತದೆ. ಇವುಗಳನ್ನು ಆರಂಭಿಕ (teething problem)  ತೊಂದರೆಗಳೆಂದು ಸಮಜಾಯಿಷಿಕೊಡಬಹುದು. ಹಾಗೆಯೇ ಈ ನಿಟ್ಟಿನಲ್ಲಿ ಗ್ರಾಹಕರ ಹಿತವನ್ನು ರಕ್ಷಿಸಲು ಕ್ರಮವನ್ನು ತೆಗೆದುಕೊಳ್ಳಬಹುದು. ಆದರೆ,ವ್ಯವಸ್ಥೆಯನ್ನು ತಿಳಿಯದೇ ಕಳೆದುಕೊಂಡರೆ ಆ ಗ್ರಾಹಕರ ರಕ್ಷಣೆ ಹೇಗೆ ಸಾಧ್ಯ ಎನ್ನುವದು ಮೂಲ ಭೂತ ಪ್ರಶ್ನೆ.

 ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಲ್ಪವಾದರೂ ಈ ಸಮಸ್ಯೆಗಳ ಬಗೆಗೆ ಗ್ರಾಹಕರು ಜಾಗೃತರಾಗಿರುತ್ತಾರೆ. ಆದರೆ, ಸಣ್ಣ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದರೆ ಗ್ರಾಹಕರ ಬದುಕು ಅಯೋಮ ಯವಾಗುತ್ತದೆ. ಇಂತಹ ಮಾರಕ ಏಟನ್ನು ಅವರು ಸಹಿಸಿಕೊಳ್ಳಲಾರರು. ಅಂತೆಯೇ ಬ್ಯಾಂಕಿಂಗ್ ವ್ಯವಸ್ಥೆ ತಮಗೂ ಅರ್ಥವಾಗುವಂತೆ ಹಿಂದಿನಂತೆ ಪುಸ್ತಕದಲ್ಲಿ ಇರಲಿ, ತಾಂತ್ರಿಕತೆಯ ಹೆಸರಿನಲ್ಲಿ ಈ ಮಾಯಾಜಾಲ ಬೇಡ ಎಂದು, ‘‘ಹಳ್ಳಿ ಊರಿಗೆ ಕೊಳ್ಳಿದೀಪ ಸಾಕು’’ ಎನ್ನುವ ಹಳೆಯ ಗಾದೆಯನ್ನು ನೆನಪಿಸಿ ಮಾರ್ಮಿಕವಾಗಿ ಹೇಳುತ್ತಾರೆ. ಬದಲಾ ಗುತ್ತಿರುವ ವ್ಯವಸ್ಥೆಯಲ್ಲಿ, ಬ್ಯಾಂಕ್‌ನ ದಿನನಿತ್ಯದ ವ್ಯವಹಾರ ದಲ್ಲಿ ತಾಂತ್ರಿಕತೆಯನ್ನು ತಳ್ಳಿಹಾಕಲಾಗದು. ಜಗತ್ತೇ ಆ ದಿಕ್ಕಿನಲ್ಲಿ ಸಾಗುವಾಗ ನಾವು ಅಜ್ಜ ನೆಟ್ಟ ಅಲದ ಗಿಡಕ್ಕೇ ಜೋತು ಬೀಳುವುದು ಸಾಧ್ಯವಿಲ್ಲದ ಮಾತು. ಆಟದಲ್ಲಿ ಉಳಿಯಲು ಮತ್ತು ಇನ್ನೊಬ್ಬರಂತೆ ಮುಂದೆ ಸಾಗಲು ಬದಲಾವಣೆಯ ರೈಲು ಹತ್ತುವುದು ಅನಿವಾರ್ಯ. ಆದರೆ, ಬಹುಜನರಿಗೆ ಈ ತಾಂತ್ರಿಕತೆ ಕಬ್ಬಿಣದ ಕಡಲೆಯ ದಾಗ, ಅದಕ್ಕೆ ಹೊಂದಿಕೊಳ್ಳಲು ಸುದೀರ್ಘ ಸಮಯ ತೆಗೆದು ಕೊಳ್ಳವುವಾಗ ಅಥವಾ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಮನಸ್ಸಿಲ್ಲದಾಗ, ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಮುಖ್ಯ ಪ್ರಶ್ನೆಯಾಗಿರುತ್ತದೆ.

share
ರಮಾನಂದ ಶರ್ಮಾ
ರಮಾನಂದ ಶರ್ಮಾ
Next Story
X