ಹೆಲ್ಮೆಟ್ ಧರಿಸುವುದು ಕಣ್ಣಾಮುಚ್ಚಾಲೆ ಆಟವಾಗದಿರಲಿ

ಮಾನ್ಯರೆ,
ಸುಪ್ರೀಂಕೋರ್ಟ್ ಆದೇಶದನ್ವಯ ರಾಜ್ಯ ಸರಕಾರ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಜೀವ ರಕ್ಷಣೆಯ ನಿಟ್ಟಿನಲ್ಲಿ ಸರಿಯಾದ ಕ್ರಮ. ಆದರೆ ಇದು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯ ಸರಕಾರಕ್ಕೆ ಆಗದಿರುವುದು ಟ್ರಾಫಿಕ್ ಪೋಲಿಸರ ಹಣದ ವ್ಯಾಮೋಹವೇ ಕಾರಣ ಅಂತ ಹೇಳಬಹುದು. ಬೆಂಗಳೂರಿನಂತ ನಗರಗಳಲ್ಲಿ ದಿನ ನಿತ್ಯ ಸಾವಿರಾರು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ಅದರಲ್ಲಿ ಶೇ.50ರಷ್ಟು ಬೈಕ್ ಸವಾರರು ಮತ್ತು ಹಿಂಬದಿಯಲ್ಲಿ ಕೂತುಕೊಂಡವರು ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುತ್ತಿರುವುದು ನೋಡಿದರೆ ಜನರಿಗೆ ಪೊಲೀಸರ ಭಯ ಎಷ್ಟಿದೆ ಅಂತ ಗೊತ್ತಾಗುತ್ತವೆ. ಅದೆಷ್ಟೋ ಟ್ರಾಫಿಕ್ ಪೊಲೀಸರು ಹಣದ ವ್ಯಾಮೋಹದಿಂದಾಗಿ ಕೇಸ್ ದಾಖಲಿಸದೇ ದುಡ್ಡು ಪಡೆದುಕೊಂಡು ಬಿಟ್ಟು ಬಿಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಒಂದರ್ಥದಲ್ಲಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಗೊಳಿಸಿ ಆದೇಶ ಹೊರಬಿದ್ದ ಮೇಲೆ ದಿನ ನಿತ್ಯ ಟ್ರಾಫಿಕ್ ಪೋಲಿಸರ ಜೇಬು ತುಂಬ ಹಣ ತುಂಬಿಕೊಳ್ಳುತ್ತಿವೆ. ಎಂಬುದಾಗಿ ಜನ ಸಾಮಾನ್ಯರು ಮಾತನಾಡುತ್ತಿದ್ದಾರೆ. ಸರಕಾರ ಮತ್ತು ಸಂಚಾರಿ ಇಲಾಖೆಯ ಹೆಸರಿಗೆ ಧಕ್ಕೆ ಬರುವುದನ್ನು ತಪ್ಪಿಸಬೇಕಾದರೆ ಸಂಬಂಧ ಪಟ್ಟ ಅಧಿಕಾರಿಗಳು ಟ್ರಾಫಿಕ್ ಪೊಲೀಸರ ಮೇಲೆ ನಿಗಾ ವಹಿಸಬೇಕು. ಲಂಚ ಪಡೆಯುವವರನ್ನು ಸಾರ್ವಜನಿಕರ ಎದುರಿನಲ್ಲೇ ಅವಮಾನ ಮಾಡಿಸಿ ಜೈಲಿಗೆ ಹಟ್ಟಿದಿದ್ದರೆ ಹೆಲ್ಮೆಟ್ ಧರಿಸದೇ ಕಣ್ಣಾಮುಚ್ಚಾಲೆ ಆಟವನ್ನು ತಪ್ಪಿಸಬಹುದು.





