ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಅಂತ್ಯ
ಬಿಎಸ್ಸಿ ಶುಶ್ರೂಷಕ ಹುದ್ದೆ
ಬೆಂಗಳೂರು, ಎ. 18: ಶುಶ್ರೂಷಕ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷಾ ಪ್ರಾಧಿಕಾರವು ನಡೆಸುತ್ತಿರುವ ಬಿಎಸ್ಸಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಪ್ರಕ್ರಿಯೆಯ ಕೊನೆಯ ದಿನವಾದ ಇಂದು ಒಟ್ಟು 827 ನರ್ಸಿಂಗ್ ಅಭ್ಯರ್ಥಿಗಳು ಪರಿಶೀಲನೆಗೆ ನೋಂದಾಯಿಸಿಕೊಂಡಿದ್ದು ಒಟ್ಟು 839 ಅಭ್ಯರ್ಥಿಗಳು ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಒಟ್ಟಾರೆ 2622ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ನೋಂದಾವಣೆ ಮಾಡಿಕೊಂಡು, 2530ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆ ಪೂರ್ಣಗೊಳಿಸಿದ್ದಾರೆ.
ಸ್ನಾತಕೋತ್ತರ ಅಭ್ಯರ್ಥಿಗಳು: ವೈದ್ಯಕೀಯ/ ದಂತ ವೈದ್ಯಕೀಯ ಸ್ನಾತಕೋತ್ತರ ಸೀಟು ಹಂಚಿಕೆಯ ಮೊದಲ ಸುತ್ತಿನ ಪಿಜಿಇಟಿ ಕೌನ್ಸೆಲಿಂಗ್ ಪ್ರಗತಿಯಲ್ಲಿದ್ದು ಇಂದು 148 ಅಭ್ಯರ್ಥಿಗಳು ತಮ್ಮ ದಾಖಲಾತಿಗಳನ್ನು ಸಲ್ಲಿಸಿದ್ದು 19 ಅಭ್ಯರ್ಥಿಗಳು ಪ್ರವೇಶಾನುಮತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಈವರೆಗೆ ಒಟ್ಟು 292 ಪಿಜಿಇಟಿ ಅಭ್ಯರ್ಥಿಗಳು ದಾಖಲಾತಿ ಸಲ್ಲಿಕೆ ಮಾಡಿದ್ದು ಅದರಲ್ಲಿ 78ಅಭ್ಯರ್ಥಿಗಳು ಪ್ರವೇಶಾನುಮತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಎ.21ರ ವರೆಗೆ ಇಚ್ಛೆ ಆಯ್ಕೆಗೆ, ದಾಖಲಾತಿ ಸಲ್ಲಿಕೆಗೆ ಮತ್ತು ಶುಲ್ಕಪಾವತಿಗೆ ಕಾಲಾವಕಾಶ ಕಲ್ಪಿಸಲಾಗಿದೆ.





