ಪ್ರಬಂಧ ಸ್ಪರ್ಧೆಗೆ ಆಹ್ವಾನ
ಜೀವ ವೈವಿಧ್ಯ ದಿನಾಚರಣೆ
ಬೆಂಗಳೂರು, ಎ.18: ಅಂತಾರಾಷ್ಟ್ರೀಯ ಜೀವ ವೈವಿಧ್ಯ (ಮೇ 22) ದಿನಾಚರಣೆ ಅಂಗವಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ಧೆ, ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗೆ ಜನರ ಸುಸ್ಥಿರತೆ ಹಾಗೂ ಅವರ ಜೀವನಾಧಾರ ಎಂಬ ವಿಷಯವನ್ನು ನೀಡಲಾಗಿದ್ದು ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ನಮ್ಮ ರಾಜ್ಯದ ಜೀವ ವೈವಿಧ್ಯ ಕುರಿತ ಚಿತ್ರಕಲೆಯಲ್ಲಿ 5ನೆ ತರಗತಿಯ ಒಳಗಿನ ಮಕ್ಕಳು ಹಾಗೂ ನಮ್ಮ ರಾಜ್ಯದ ಜೀವವೈವಿಧ್ಯ ಕುರಿತ ರಸಪ್ರಶ್ನೆಯಲ್ಲಿ 8 ರಿಂದ 10ನೆ ತರಗತಿಯ ಒಳಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ, ನೆಲಮಹಡಿ ವನವಿಕಾಸ, 18ನೆ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು -560 003, ದೂ.ಸಂ. 080 -2344 783 ಅಥವಾ ಇ-ಮೇಲ್, kbb.ka@nic.in ಅಥವಾ ವೆಬ್‌ಸೈಟ್ www. kbb.kar.nic.inನ್ನು ಸಂಪರ್ಕಿಸಬಹುದು.
Next Story





