400 ಆಟೋರಿಕ್ಷಾ ಪೊಲೀಸರ ವಶ
ನಿಯಮ ಉಲ್ಲಂಘನೆ
ಬೆಂಗಳೂರು, ಎ. 18: ಗ್ರಾಹಕರಿಗೆ ತೊಂದರೆ ಹಾಗೂ ಹೆಚ್ಚುವರಿ ಹಣ ವಸೂಲಿ ಸೇರಿ ಇನ್ನಿತರೆ ಪ್ರಕರಣಗಳ ಆರೋಪದಲ್ಲಿರುವ 400ಕ್ಕೂ ಹೆಚ್ಚು ಆಟೋರಿಕ್ಷಾಗಳನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆಟೊಗಳ ವಿರುದ್ಧ ಸೋಮವಾರ ಮುಂಜಾನೆಯಿಂದ ವಿಶೇಷ ಕಾರ್ಯಾಚರಣೆ ನಡೆಸಿದ ಪಶ್ಚಿಮ ವಿಭಾಗದ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ ಸುಮಾರು 400 ಆಟೊಗಳನ್ನು ವಶಪಡಿಸಿಕೊಂಡು ಚಾಲಕರ ವಿಚಾರಣೆ ನಡೆಸಿದ್ದಾರೆ.
ಇಲ್ಲಿನ ಉಪ್ಪಾರಪೇಟೆ, ಚಾಮರಾಜಪೇಟೆ, ಜಯನಗರ, ಸೆಂಟ್ರಲ್ ಇನ್ನಿತರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಸಂಚಾರ ಪೊಲೀಸರು ಆಟೊಗಳ ತಪಾಸಣೆ ನಡೆಸಲಾಗಿದೆ. ವಶಪಡಿಸಿಕೊಂಡಿರುವ ಆಟೊಗಳ ಚಾಲಕರು ಕರೆದಲ್ಲಿಗೆ ಬಾರದ ಮೀಟರ್ ದರಕ್ಕಿಂತ ಹೆಚ್ಚಿನ ಹಣ ಕೇಳುವ ಸರಿಯಾದ ಡಿಸ್‌ಫ್ಲೇ ಕಾರ್ಡ್ ಪ್ರದರ್ಶಿಸದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story





