ಪಡುಬಿದ್ರೆ, ಎ.18: ಬಡಾ ಎರ್ಮಾಳು ಮನೆಯ ದಿ.ಪೊಂಕು ಪೂಜಾರಿ ಎಂಬವರ ಧರ್ಮಪತ್ನಿ ಚಿಕ್ಕಿ ಪೂಜಾರ್ತಿ(90) ಇತ್ತೀಚೆಗೆ ಕಟ್ಟಪುಣಿಯ ಸ್ವಗೃಹ ಮನೆಯಲ್ಲಿ ನಿಧನರಾದರು.
ಮೃತರು ಉತ್ತಮ ಪಾಕಶಾಸ್ತ್ರಜ್ಞೆ, ನಾಟಿ ವೈದ್ಯೆ ಹಾಗೂ ಉತ್ತಮ ಪಾಡ್ದನಗಾರ್ತಿಯಾಗಿದ್ದರು. ಮೃತರು ನಾಲ್ವರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.