ಸುಡುಬಿಸಿಲು: ಕಾರ್ಮಿಕರಿಗೆ 12ರಿಂದ 3ರವರೆಗೆ ವಿರಾಮ

ಕಾಸರಗೋಡು, ಎ.18: ಸುಡುಬಿಸಿಲಿನ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 3ರ ತನಕ ತೆರೆದ ಪ್ರದೇಶಗಳಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸಬಾರದು ಎಂದು ಕಾಸರಗೋಡು ಕಾರ್ಮಿಕ ಆಯುಕ್ತರು ಆದೇಶ ನೀಡಿದ್ದಾರೆ.
ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಕಾರ್ಮಿಕರು ಈ ಆದೇಶವನ್ನು ಪಾಲಿಸುವಂತೆ ಕೋರಿದ್ದಾರೆ. ಈ ಸಮಯದಲ್ಲಿ ಹೊರರಾಜ್ಯ ಕಾರ್ಮಿಕರು ಕೆಲಸ ನಿರ್ವಹಿಸುವುದು ಗಮನಕ್ಕೆ ಬಂದಲ್ಲಿ ಜಿಲ್ಲಾ ಕಂದಾಯ ಆಯುಕ್ತರಿಗೆ ಮಾಹಿತಿ ನೀಡುವಂತೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





